CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಎಸ್‌ವೈ-ಈಶ್ವರಪ್ಪ ಸಂಧಾನಕ್ಕೆ  ಕೃಷ್ಣನ ವೇಷದಲ್ಲಿ ಅಮಿತ್‌ ಶಾ!

ನವದೆಹಲಿ: ರಾಯಣ್ಣ ಬ್ರಿಗೇಡ್‌ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಗೊಂದಲ ಬಿಜೆಪಿ ಹೈ ಕಮಾಂಡ್‌ ದರ್ಬಾರ್‌ ಅಂಗಳಕ್ಕೆ ಹೋಗಿ ಬಿದ್ದಿದೆ. ಇಬ್ಬರ ನಡುವಿನ ಸಂಧಾನ ಸಭೆ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ. ಸಂಧಾನ ಸಭೆಯ ನೇತೃತ್ವ ವಹಿಸಿರುವ ಅಮಿತ್‌ ಶಾ ಇಬ್ಬರು ನಾಯಕರ ಕೆಂಗಣ್ಣಿಗೆ ಗುರಿಯಾಗದಂತೆ ಉಪಾಯದಿಂದ ಸಂಧಾನ ಮಾಡಿಸುವ ಹೊಣೆ ಹೊತ್ತಿದ್ದಾರೆ. ಹಾಗಾಗಿ ಮಹಾಭಾರತದಲ್ಲಿ ಕೃಷ್ಣ ಕೌರವ ಮತ್ತು ಪಾಂಡವರ ನಡುವೆ ಸಂಧಾನ ನಡೆಸಿದಂತೆ ಶಾ ಕೃಷ್ಣನ ಪಾತ್ರಧಾರಿಯಾಗಿ ಇಬ್ಬರು ನಾಯಕರಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಅಂದು ಕೃಷ್ಣ ಮೊದಲ ಪಾಂಡವರ ಹೇಳಿಕೆ ನಂತರ ಕೌರವರ ಹೇಳಿಕೆ ಪಡೆದಿದ್ದರು. ಈ ಸಂಧಾನಸಭೆಯಲ್ಲಿ ಶಾ ಮೊದಲ ಬಿಎಸ್‌ವೈ ನಂತರ ಈಶ್ವರಪ್ಪ ಅವರ ಆರೋಪ, ಪ್ರತ್ಯಾರೋಪಗಳನ್ನು ಆಲಿಸಲಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Back to Top