CONNECT WITH US  

ವೈಷ್ಣವಿ ಮೆನನ್‌

ಸಿನೆಮಾಕ್ಕೆ ಬರಬೇಕೆಂದು ಕನಸು ಕಾಣುವ ಮಂದಿ ಸಾಕಷ್ಟಿದ್ದಾರೆ. ಆದರೆ, ಅದು ನನಸಾಗೋದು ಕೆಲವೇ ಕೆಲವರಿಗೆ ಮಾತ್ರ. 

ಅದರಲ್ಲೂ ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನ ಅವಕಾಶ ಸಿಗುವುದು ಬಹಳ ಕಷ್ಟ. ಅಂಥಾದ್ದರಲ್ಲಿ ಆಕೆ ಅಭಿನಯದ ಇನ್ನೂ ಒಂದೇ ಒಂದು ಚಿತ್ರ ಬಿಡುಗಡೆಯಾಗಿಲ್ಲ. ಆದರೂ ಐದು ಚಿತ್ರಗಳಲ್ಲಿ ಅವಕಾಶ ಸಿಕ್ಕಿದೆ. ಈ ಕಾಲದಲ್ಲಿ ಅಂತಹ ಅದೃಷ್ಟವಂತೆ ಯಾರಿರಬಹುದು? ವೈಷ್ಣವಿ ಮೆನನ್‌.

ಈ ವೈಷ್ಣವಿ  ಅಭಿನಯದ ಆರು ಚಿತ್ರಗಳಿರುವು ದರಿಂದ ಯಾವುದ ನ್ನಾದರೂ ತೋರಿಸ ಬಹುದು. ಸಂಚಾರಿ ವಿಜಯ್‌ ಅಭಿನಯದ ಪಾದರಸ, ಲೋಕೇಶ್‌ ಬಸವಟ್ಟಿ ಅಭಿನಯದ ಸುರ್‌ಸುರ್‌ ಬತ್ತಿ, ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು, ಪ್ರಥಮ್‌ ಅಭಿನಯದ ದೇವರಂಥ ಮನುಷ್ಯ, ಶ್ರೀಮಂತರು, ಅಭಿರಾಮಿ ಸೇರಿದಂತೆ ಹಲವು ಚಿತ್ರಗಳಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. ಇದೆಲ್ಲದರ ಜೊತೆಗೆ ವೈಷ್ಣವಿ ಇತ್ತೀಚೆಗೆ "ಬಿಗ್‌ ಬಾಸ್‌' ಮನೆಯಲ್ಲಿ ಕೆಲವು ದಿನಗಳ ಸ್ಪರ್ಧಿಯಾಗಿಯೂ ಭಾಗವಹಿಸಿ ಬಂದಿದ್ದಾರೆ.

ವೈಷ್ಣವಿ ಚಿತ್ರರಂಗಕ್ಕೆ ಬಂದಿದ್ದು ಹೇಗೆ, ಯಾರಾದರೂ ಗಾಡ್‌ಫಾದರ್‌ ಇದ್ದಾರಾ ಎಂಬ ಪ್ರಶ್ನೆಗಳು ಬರುವುದು ಸಹಜ. ಆದರೆ, ವೈಷ್ಣವಿ ಹೇಳುವಂತೆ, ಅವರಿಗೆ ಯಾವ ಗಾಡ್‌ಫಾದರ್‌ ಸಹ ಇಲ್ಲವಂತೆ. ಸ್ವಂತ ಪ್ರತಿಭೆಯಿಂದ ಅವರು ಒಂದರಿಂದ ಆರು ಚಿತ್ರಗಳವರೆಗೂ ಬೆಳೆದು ಬಂದಿದ್ದಾರೆ. "ನಾನು ಸಿನೆಮಾ ನಟಿಯಾಗಬೇಕೆಂದು ನಿರ್ಧರಿಸಿದ ದಿನದಿಂದಲೇ ಸಿನೆಮಾಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೆ. ಮುಖ್ಯವಾಗಿ ಡ್ಯಾನ್ಸ್‌. ನಾನು ಪ್ರೊಫೆಶನಲ್‌ ಡ್ಯಾನ್ಸರ್‌. ಒಂದರ್ಥದಲ್ಲಿ ನಾನು ಚಿತ್ರರಂಗಕ್ಕೆ ಬರಲು ಅದೇ ಮೂಲ ಕಾರಣ' ಎನ್ನುತ್ತಾರೆ ವೈಷ್ಣವಿ.

ವೈಷ್ಣವಿ ನಟಿ ಎನ್ನುವುದಕ್ಕಿಂತ ಮೂಲತಃ ಡ್ಯಾನ್ಸರ್‌. ಅದು ಪ್ರೊಫೆಶನಲ್‌ ಡ್ಯಾನ್ಸರ್‌. ಈಗಾಗಲೇ ಸಾಕಷ್ಟು ಸ್ಟೇಜ್‌ ಶೋಗಳನ್ನು ನೀಡಿದ್ದಾರೆ ವೈಷ್ಣವಿ. ಭರತನಾಟ್ಯ, ಪಾಶ್ಚಾತ್ಯ ನೃತ್ಯ ಸೇರಿದಂತೆ ನೃತ್ಯದ ನಾನಾ ಪ್ರಾಕಾರಗಳನ್ನು ಕರಗತ ಮಾಡಿಕೊಂಡಿದ್ದಾರೆ ವೈಷ್ಣವಿ. ಬಾಲಿವುಡ್‌ ಕೊರಿಯೋಗ್ರಾಫ‌ರ್‌ ಶಯಾಮಿಕ್‌ ದಾವರ್‌ ಅವರಲ್ಲಿ ಪಾಶ್ಚಾತ್ಯ ನೃತ್ಯ ಅಭ್ಯಸಿಸಿರುವ ವೈಷ್ಣವಿಗೆ ಅವರು ನೀಡಿದ ಬಿರುದು "ಬೆಂಗಳೂರ್ ಬೆಸ್ಟ್‌ ಡ್ಯಾನ್ಸರ್‌'. ಈ ಬಿರುದು ಪಡೆದು ಖುಷಿಯಾಗಿದ್ದ ವೈಷ್ಣವಿ, 2015ರಲ್ಲಿ "ಪ್ರಿನ್ಸೆಸ್‌ ಸೌತ್‌ ಇಂಡಿಯಾ' ಸ್ಪರ್ಧೆಯ ವಿಜೇತೆಯಾಗುತ್ತಾರೆ. ಆ ಮೂಲಕ ಅವರ ನೇಮು-ಫೇಮು ಎರಡೂ ಹೆಚ್ಚಿ, ಸಿನಿಮಾ ಮಂದಿಯ ಕಣ್ಣಿಗೆ ಬೀಳುತ್ತಾರೆ. ಅದರ ಪರಿಣಾಮವೇ ಕೈ ತುಂಬಾ ಸಿನೆಮಾ.
ವೈಷ್ಣವಿ ಅವರಿಗೆ ಮಲಯಾಳ ಹಾಗೂ ತಮಿಳಿನಿಂದಲೂ ಅವಕಾಶ ಬರುತ್ತಿದೆಯಂತೆ. 


Trending videos

Back to Top