CONNECT WITH US  

ವಠಾರ ಖ್ಯಾತಿಯ ಹಾಸ್ಯ ನಟ ಮಲ್ಲೇಶ್‌ ವಿಧಿವಶ 

ಬೆಂಗಳೂರು: ವಠಾರ ಧಾರವಾಹಿಯ ಖ್ಯಾತಿಯ ಹಾಸ್ಯನಟ ಮಲ್ಲೇಶ್‌ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. 

ಕಿಡ್ನಿ ಮತ್ತು  ಮೆದುಳಿನ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಬನ್ನೇರುಘಟ್ಟದ ಜಂಗಲ್‌ಪಾಳ್ಯ ನಿವಾಸಿಯಾಗಿದ್ದ  ಮಲ್ಲೇಶ್‌ ವಠಾರ ಧಾರಾವಾಹಿಯ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. ಸುಮಾರು 250 ಹೆಚ್ಚು ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದರು. 

ದರ್ಶನ್‌ ಅಭಿನಯದ ಸುಂಟರಗಾಳಿ, ದತ್ತ, ಅಭಯ್‌ , ಪುನೀತ್‌ ರಾಜ್‌ಕುಮಾರ್‌ ಅಭಿನಯದ ಅಜಯ್‌ , ಚಾರ್‌ಮಿನಾರ್‌ , ಚಡ್ಡಿದೋಸ್ತ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಬನ್ನೇರುಘಟ್ಟದಲ್ಲಿ ಮಲ್ಲೇಶ್‌ ಅವಶ ಕೃಷಿ ಭೂಮಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ. 

Trending videos

Back to Top