CONNECT WITH US  

ಚಂದದ ಚಲುವಿನ ಬಾಲೆ!

ಒಂದು ಬಾರಿಯೂ ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡದಿರೋರು ಕೆಲವು ಸರಳ ವ್ಯಾಯಾಮಗಳ ಮೂಲಕ ಬಾಲ್‌ ವ್ಯಾಯಾಮ ಆರಂಭಿಸಲು ಇಲ್ಲಿದೆ ಟಿಪ್ಸ್‌....

ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡುವುದು, ಆರೋಗ್ಯದ ಮೇಲೆ ಹಾಗೂ ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಾಲ್‌ನಿಂದ ವ್ಯಾಯಾಮ ಮಾಡುವುದು ಅಷ್ಟು ಸುಲಭವಲ್ಲ.

ಒಂದು ಬಾರಿಯೂ ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡದಿರೋರು ಪ್ರಾರಂಭದಲ್ಲಿ ಸ್ವಲ್ಪ ಕಷ್ಟವನ್ನಂತೂ ಅನುಭವಿಸಬೇಕಾಗುತ್ತದೆ. ಅಂಥವರು ಕೆಲವು ಸರಳ ವ್ಯಾಯಾಮಗಳ ಮೂಲಕ ಎಕ್ಸರ್‌ಸೈಜ್‌ ಬಾಲ್‌ ವ್ಯಾಯಾಮ ಶುರು ಮಾಡಿ. ಅದಕ್ಕೂ ಮೊದಲು ಎಕ್ಸರ್‌ಸೈಜ್‌ ಬಾಲ್‌ ವ್ಯಾಯಾಮದ ಕುರಿತಂತೆ ಈ ಅಂಶಗಳನ್ನು ಪಾಲಿಸಿ.

* ಮೊದಲಿಗೆ ಯಾವುದಾದರೂ ಒಂದು ವ್ಯಾಯಾಮವನ್ನು ಆಯ್ಕೆ ಮಾಡಿಕೊಳ್ಳಿ. ಎರಡು ಕಾಲುಗಳನ್ನು ನೆಲಕ್ಕೆ ಊರಿ ಬಾಲ್‌ನ ಮೇಲೆ ಕುಳಿತುಕೊಳ್ಳಿ. ನಿಮ್ಮ ಮಂಡಿಗಳು ತೊಂಬತ್ತು ಡಿಗ್ರಿ ನೇರಕ್ಕೆ ಇರುವಂತೆ ನೋಡಿಕೊಳ್ಳಿ.

* ಬಾಲ್‌ನಲ್ಲಿ 10 ಸೆಂ.ಮೀಟರ್‌ನಿಂದ ಪ್ರಾರಂಭವಾಗಿ 85 ಸೆಂಮೀನ ಬಾಲ್‌ಗ‌ಳು ಲಭ್ಯವಿರುತ್ತವೆ. ನಿಮಗೆ ಯಾವ ಬಾಲ್‌ ಬೇಕು ತೆಗೆದುಕೊಳ್ಳಿ.

* ಎಕ್ಸರ್‌ಸೈಜ್‌ ಬಾಲ್‌ ಇಡಲು ಸರಿಯಾದ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಬಾಲ್‌ ಮೂಲಕ ವ್ಯಾಯಾಮ ಮಾಡುವಾಗ ಓಡಾಡಲು ಸಾಕಷ್ಟು ಜಾಗವಿರಬೇಕಾಗುತ್ತದೆ. ಏಕೆಂದರೆ ಒಂದು ಜಾಗದಿಂದ ಮತ್ತೂಂದು ಜಾಗಕ್ಕೆ ಓಡಾಡಬೇಕಾಗುತ್ತದೆ. ಬಾಲ್‌ ಅತ್ತಿಂದಿತ್ತ ಸಂಚರಿಸದಂತೆ ಅದರ ಸುತ್ತ ಟವೆಲ್‌ ಹಾಸಿಡಿ. ನಿಮಗೆ ಸರಿಯಾಗಿ ಬಾಲ್‌ನಿಂದ ಬ್ಯಾಲೆನ್ಸ್‌ ಮಾಡಲು ಬಂದಮೇಲೆ ಟವೆಲ್‌ ತೆಗೆದುಬಿಡಿ.

* ಉಸಿರಾಟದ ಮೇಲೆ ಗಮನವಿಟ್ಟಿರಿ.

* ಬಾಲ್‌ನ ಮೇಲೆ ನಿಮ್ಮ ತಲೆಯಿಂದ ಕಾಲ್‌ಬೆರಳ ತನಕ ಯಾವ ಅಂಗವೂ ಬೆಂಡಾಗದಂತೆ ಕೂರಲು ಮೊದಲು ಕಲಿಯಿರಿ.

* ಬಾಲ್‌ ಮೇಲೆ ಹಿಮ್ಮುಖವಾಗಿ ಮಲಗಿ ಕಾಲುಗಳನ್ನು ಎಷ್ಟು ಮುಂದಕ್ಕೆ ಸಾಧ್ಯವೋ ಅಷ್ಟು ಚಾಚಲು ಪ್ರಯತ್ನ ಪಡಿ.

ಕೂದಲ ಹೊಳಪಿಗೆ ಬೇಕಿಂಗ್‌ ಸೋಡಾ ಶ್ಯಾಂಪೂ
ಮೂರು ಚಮಚ ಅಡುಗೆ ಸೋಡಾ ಅಥವಾ ಬೇಕಿಂಗ್‌ ಸೋಡಾವನ್ನು ಒಂದೂವರೆ ಕಪ್‌ ನೀರಿಗೆ ಬೆರೆಸಬೇಕು. ಇದನ್ನು ಚೆನ್ನಾಗಿ ಕೂದಲಿಗೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಕೂದಲು ಶುಭ್ರವಾಗುವುದರ ಜೊತೆಗೆ ಕಾಂತಿಯುತವಾಗುತ್ತದೆ.

* ವನಿತಾ ಅಶೋಕ್‌

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top