CONNECT WITH US  

ಯವಜನತೆ ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸಲಿ

ಜಾವಗಲ್‌: ಯುವಜನತೆ ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸುವಂತೆ ಪುಷ್ಪಗಿರಿ ಮಠದ ಸೋಮಶೇಖರ ಶಿವಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಹಿತರಕ್ಷಣಾ ಸಮಿತಿ, ರಸ್ತೆಬದಿ ಅಂಗಡಿ ಮಾಲಿಕರು, ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರ ನೆರವಿನಿಂದ ಸ್ವಾತಂತ್ರೊತ್ಸವ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಧ್ಯಪಾನವನ್ನು ಸಂಪೂರ್ಣ ನಿಷೇಧಿಸುವ ಇಚ್ಛಾಶಕ್ತಿ ಯಾವುದೇ ಸರ್ಕಾರಕ್ಕಾಗಲಿ, ರಾಜಕಾರಣಿಗಾಗಲಿ ಇಲ್ಲವೆಂದು ಕಳವಳ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಬಂದು 71 ವರ್ಷಗಳಾದ್ರೂ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಮೌಡ್ಯತೆ ಆತಂಕಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಸಾಕಷ್ಟು ಬದಲಾವಣೆಯಾದ್ರೂ ಪ್ರಾಂತೀಯತೆ, ನೆಲ-ಜಲ, ಧರ್ಮ, ಜಾತಿ ಮುಂತಾದ ಸಮಸ್ಯೆಗಳನ್ನು ಹೆದುರಿಸುತ್ತಿದ್ದೇವೆ. ಭಾರತವು ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ, ಆಧ್ಯಾತ್ಮಿಕ ಅಂಶಗಳ ಸಂಗಮವಾಗಿದೆ ಎಂದು ಹೇಳಿದರು.

ಮನರಂಜನೆ ಜೀವನವಾಗ ಬಾರದು, ಬದುಕು ಜೀವನವಾಗಬೇಕು. ಎಲ್ಲರನ್ನೂ ಸಮಾನ ದೃಷ್ಟಿಕೋನದಿಂದ ನೋಡುವಂತೆ ಯುವ ಜನರಿಗೆ ಸಲಹೆ ನೀಡಿದರು. 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜೆ.ಎಸ್‌.ಕೃತಿಕ್‌,  ಜೆ.ಎಚ್‌. ಮಾನ್ಯಾಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜಾವಗಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಸಹಾಯಕಿ ಡಿಸೋಜಾರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ವನಜಾ, ಸಂಘ ಸಂಸ್ಥೆಗಳು ಗ್ರಾಮದ ಸ್ವತ್ಛತೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಡಿ.ಡಿ.ದಾನೇಗೌಡ, ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಮೋಹನ್‌, ಉಪಾಧ್ಯಕ್ಷ ರಂಗನಾಥ್‌, ಖಚಾಂಚಿ ಉದಯ್‌, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮಧುಸೂದನ್‌, ಜೆ.ಎಚ್‌.ಪ್ರಸನ್ನಕುಮಾರ್‌ ಮಾತನಾಡಿದರು.

ಸಮಿತಿಯ ಅಧ್ಯಕ್ಷ ಜೆ.ಆರ್‌.ನಾಗರಾಜು, ಕರವೇ ಗೌರವಾಧ್ಯಕ್ಷ ಜೆ.ಡಿ.ಪ್ರಕಾಶ್‌, ಡಾ.ಶರಣಪ್ಪ ಪಾಟೀಲ್‌, ಡೇರಿ ಅಧ್ಯಕ್ಷ ಜೆ.ಟಿ.ಪುಟ್ಟರಾಜು, ನಿವೃತ್ತ ಸುಬೇದಾರ್‌ ಚಂದ್ರಪ್ಪ, ವಿ.ಟಿ.ಎಸ್‌.ನಾಗರಾಜು, ಜಯ ಕರ್ನಾಟಕ ಅಧ್ಯಕ್ಷ ಡಿ.ಪಿ.ಸೋಮಶೇಖರ್‌, ನಂಜುಂಡಪ್ಪ, ಗುರು ಉಪಸ್ಥಿತರಿದ್ದರು. 


Trending videos

Back to Top