CONNECT WITH US  

ಕಡಿತಕ್ಕಿಂತಲೂ ಕಲ್ಪನೆಯೇ ಹೆಚ್ಚು ಅಪಾಯಕಾರಿ

ಭಾರತದಲ್ಲಿ  ಹಾವು ಕಚ್ಚಿ ಮರಣಗಳಾಗುವ ಪ್ರಕರಣಗಳ ಪ್ರಮಾಣ ಹೆಚ್ಚು ಎಂದು ಹೇಳಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವರ್ಷದಲ್ಲಿ  ಸುಮಾರು 83,000 ಹಾವು ಕಚ್ಚುವ ಪ್ರಕರಣಗಳು ಸಂಭವಿಸುತ್ತಿದ್ದು, ಇದರಲ್ಲಿ  ಸುಮಾರು 11,000 ಮರಣಗಳಾಗುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಗಾಯಾಳುವು ಸಕಾಲದಲ್ಲಿ ಆಸ್ಪತ್ರೆಗೆ ತಲುಪದೆ ಇರುವ ಕಾರಣದಿಂದ ಮತ್ತು ಸೂಕ್ತ ಚಿಕಿತ್ಸೆ ಸಿಗದೆ ಇರುವ ಕಾರಣದಿಂದ ಸಾವು ಸಂಭವಿಸುತ್ತದೆ. ಇದರ ಜತೆಗೆ ಹಾವು ಕಚ್ಚಿದಾಗ ಯಾವ ಕ್ರಮ ಕೈಗೊಳ್ಳಬೇಕು ಮತ್ತು ಯಾವ ರೀತಿಯ ಪ್ರಥಮ ಚಿಕಿತ್ಸಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಜನಸಮುದಾಯಕ್ಕೆ ಸರಿಯಾದ ಮಾಹಿತಿ ಇರುವುದಿಲ್ಲ. 

ಹಾಗಾಗಿ ಅಪಾಯಕಾರಿ ಪ್ರಥಮ ಚಿಕಿತ್ಸಾ ಕ್ರಮಗಳಾದ ಗಾಯದ ಮೇಲ್ಭಾಗದಲ್ಲಿ ಕಟ್ಟು ಹಾಕುವುದು, ಕತ್ತರಿಸುವುದು ಮತ್ತು ಗಾಯದಲ್ಲಿನ ವಿಷದ ಅಂಶವನ್ನು ಬಾಯಿಯಿಂದ ಹೀರಿಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತಾರೆ. 

ಭಾರತದ ಹಾವುಗಳು
ಭಾರತದಲ್ಲಿ  ಸುಮಾರು 236 ಜಾತಿಯ ಹಾವುಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ವಿಷರಹಿತ ಹಾವುಗಳು. ವಿಷ ರಹಿತ ಹಾವು ಕಚ್ಚಿದರೆ, ಕಚ್ಚಿಸಿಕೊಂಡಾತನಲ್ಲಿ ಗಾಬರಿಯ ಪ್ರತಿಕ್ರಿಯೆ ಮತ್ತು ಕಚ್ಚಿದ ಜಾಗದಲ್ಲಿ ಗಾಯವಾಗುವಿಕೆಯನ್ನು ಬಿಟ್ಟರೆ ಬೇರೆ ಯಾವ ರೀತಿಯ ಹಾನಿಯೂ ಆಗುವುದಿಲ್ಲ. ಹಾಗಿದ್ದರೂ ಸಹ 13 ತಿಳಿದಿರುವಂತಹ ಜಾತಿಯ ವಿಷದ ಹಾವುಗಳಿವೆ, ಇವುಗಳಲ್ಲಿ ನಾಲ್ಕು ಜಾತಿಯ ವಿಷದ ಹಾವುಗಳು ಅಂದರೆ-ನಾಗರಹಾವು, ಮಂಡಲದ ಹಾವು (ರಸ್ಸೆಲ್ಸ್‌ ವೈಪರ್‌- ಗರಗಸ ಹುರುಪೆಯ ಹಾವು (ಸಾ ಸ್ಕೇಲ್ಡ್‌ ವೈಪರ್‌-  ಮತ್ತು ಕಟ್ಟ ಕಡಂಬಳ ಕಾಮನ್‌ ಕ್ರೆ„ಟ್‌- ಇವು ತೀವ್ರ ವಿಷದ ಹಾವುಗಳಾಗಿದ್ದು, ಭಾರತದಲ್ಲಿ ಸಂಭವಿಸುವ ಬಹುತೇಕ ಪ್ರಕರಣಗಳಿಗೆ ಈ ವಿಷದ ಹಾವುಗಳು ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಕೊಳಕುಮಂಡಲದ  ಹಾವನ್ನು ತೀವ್ರ ವಿಷಕಾರಿ ಎಂಬುದಾಗಿ ಗುರುತಿಸಲಾಗಿದ್ದು, ಈ ಹಾವು ಕಚ್ಚುವುದರಿಂದ ಉಂಟಾಗುವ ಮಾರಣಾಂತಿಕ ರೋಗಲಕ್ಷಣಗಳಿಗೆ ಪ್ರಸ್ತುತ ಲಭ್ಯ ಇರುವ ವಿಷ-ನಿರೋಧಕ ಔಷಧಿಗಳೂ ಸಹ ಅಷ್ಟೊಂದು ಪರಿಣಾಮಕಾರಿ ಅಲ್ಲ ಎಂದು ತಿಳಿದು ಬಂದಿದೆ.
 
ಹಾವಿನ ವಿಷ ಅಂದರೆ ಅದು ಒಂದು ರೀತಿಯ ಸುಧಾರಿತ ಲಾಲಾರಸ ಆಗಿದ್ದು, ತಾನು ಕಚ್ಚಿದ ಬೇಟೆಯನ್ನು ಚಲಿಸದಂತೆ ಮಾಡಲು, ಆ ಬೇಟೆಯನ್ನು ಹಿಡಿದು ತಿಂದಾಗ ಅದು ಜೀರ್ಣವಾಗಲು ಮತ್ತು ಶತ್ರುವಿನ ವಿರುದ್ಧ ರಕ್ಷಣೆ ಪಡೆಯಲು ಈ ವಿಷವು ಹಾವಿಗೆ ಸಹಕಾರಿಯಾಗಿದೆ. ಒಂದು ರೀತಿಯ ಸುಧಾರಿತ ಲಾಲಾರಸ ಗ್ರಂಥಿ ನಾಳವು ಹಾವಿನ ವಿಷವನ್ನು ಸ್ರವಿಸುತ್ತದೆ. ಇದು ಇನ್ನಿತರ ಕಶೇರುಕ ಪ್ರಾಣಿಗಳಲ್ಲಿಯೂ ಸಹ ಕಂಡು ಬರುತ್ತದೆ. ಹಾವಿನ ವಿಷದ ಗ್ರಂಥಿಗಳು ಸಾಮಾನ್ಯವಾಗಿ ತಲೆಯ ಎರಡೂ ಬದಿಗಳ, ಬುಡದ ಭಾಗದಲ್ಲಿ ಮತ್ತು ಕಣ್ಣಿನ ಹಿಂಭಾಗದಲ್ಲಿ, ಸ್ನಾಯುವಿನ ಕೋಶದಿಂದ ಆವೃತವಾಗಿರುತ್ತವೆ. 

ಗ್ರಂಥಿಗಳಲ್ಲಿ ದೊಡ್ಡದಾದ ಕೋಶಿಕೆಗಳು ಇದ್ದು, ಯಾವ ಹಲ್ಲಿನ ಮೂಲಕ ಕಚ್ಚಿದಾಗ ವಿಷವು ಹೊರಬರುತ್ತದೋ ಆ ಹಲ್ಲಿನ ಬುಡಕ್ಕೆ ನಾಳಗಳ ಮೂಲಕ ಸಾಗುವುದಕ್ಕೆ ಮೊದಲು ಈ ಕೋಶಿಕೆಗಳಲ್ಲಿ ಸಂಸ್ಕರಿತ ವಿಷವು ಸಂಗ್ರಹವಾಗಿರುತ್ತದೆ. ಹಾವಿನ ವಿಷವು ಪ್ರೋಟೀನ್‌ ಮತ್ತು ಪೆಪ್ಟೆ„ಡ್‌ಗಳೇ ಮುಂತಾದ 20ಕ್ಕೂ ಹೆಚ್ಚು ಬೇರೆ ಬೇರೆ ರೀತಿಯ ಅಂಶಗಳನ್ನು ಒಳಗೊಂಡಿರುತ್ತದೆ. ಪ್ರೋಟೀನ್‌ಗಳು, ಕಿಣ್ವಗಳು, ವಿಷ ಮತ್ತು ಮಾರಕ 

ಅಂಶಗಳ ಜತೆಗೆ ಇನ್ನಿತರ ಅಂಶಗಳನ್ನು ಹೊಂದಿರುವ ಒಂದು ಸಂಕೀರ್ಣ ಮಿಶ್ರಣವಾಗಿರುವ ವಿಷವು ಹಾವು ಕಚ್ಚಿದಾಗ ಬೇಟೆಯ ಪ್ರಾಣಿಯನ್ನು ಚಲಿಸದಂತೆ ಮಾಡಲು ಸಹಾಯ ಮಾಡುತ್ತದೆ; ಹಾವಿನ ವಿಷದಲ್ಲಿ ಇರುವ ಕಿಣ್ವದ ಅಂಶವು ತಿಂದ ಬೇಟೆಯನ್ನು ಜೀರ್ಣಿಸಿಕೊಳ್ಳಲು ಹಾವಿಗೆ ನೆರವಾಗುತ್ತದೆ. ಹಾವಿನ ವಿಷದಲ್ಲಿ ಇರುವ ಕೆಲವು ಪ್ರೋಟೀನ್‌ಗಳು ರಕ್ತ ಹೆಪ್ಪುಗಟ್ಟಿಸುವಿಕೆ, ರಕ್ತದೊತ್ತಡ, ನರ ಅಥವಾ ಸ್ನಾಯು ಸಂವೇದನೆಗಳ ರವಾನೆಯೂ ಸೇರಿದಂತೆ ವಿವಿಧ ರೀತಿಯ ಜೈವಿಕ ಚಟುವಟಿಕೆಗಳ ಮೇಲೆ ನಿರ್ದಿಷ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. 

ಹಾವು ಕಚ್ಚಿರುವುದನ್ನು 
ಗುರುತಿಸುವುದು ಹೇಗೆ?

ವಿಷಪೂರಿತ ಹಾವು ಕಚ್ಚಿದ್ದರೆ, ಎರಡು ಹಲ್ಲಿನ ಗುರುತುಗಳು ಇರುತ್ತವೆ. ಒಂದುವೇಳೆ ಕಚ್ಚಿರುವುದು ವಿಷರಹಿತ ಹಾವು ಆಗಿದ್ದರೆ ಚರ್ಮದ ಮೇಲೆ ಅನೇಕ ಹಲ್ಲುಗಳ ಗುರುತುಗಳು ಇರುತ್ತವೆ. ಕಚ್ಚಿದ ಅನಂತರ ಗಾಯದ ಸುತ್ತಲೂ, ವಿಷ ಅಥವಾ ಸೋಂಕಿನ ಪರಿಣಾಮವಾಗಿ ಬಾವು ಮತ್ತು ಕೆಂಪಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ನೋವು ಇರುವುದು ಬಹು ಸಾಮಾನ್ಯ. ರೋಗಿಗೆ ಉಸಿರಾಡಲು ಕಷ್ಟವಾಗಬಹುದು, ವಾಕರಿಕೆ, ವಾಂತಿ, ದೃಷ್ಟಿ ಮಂದವಾಗುವುದು ಮತ್ತು ಕಣ್ಣು ಭಾರವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.  

ಪ್ರಥಮ ಚಿಕಿತ್ಸೆ
ಈಗ ಬಳಕೆಯಲ್ಲಿರುವ ಹೆಚ್ಚಿನ ಪ್ರಥಮ ಚಿಕಿತ್ಸೆಗಳು ಅಷ್ಟೊಂದು ಪರಿಣಾಮಕಾರಿ ಆಗಿರುವುದಿಲ್ಲ ಮಾತ್ರವಲ್ಲ ಬಹಳ ಅಪಾಯಕಾರಿಯಾಗಿಯೂ ಇರುತ್ತವೆ. ಆರಂಭದಲ್ಲಿ ನಿವಹಿìಸಬಹುದಾದ ಕ್ರಮಗಳು ಅಂದರೆ, ವ¤ಕ್ತಿಗೆ ಭರವಸೆ ನೀಡುವುದು, ಕಚ್ಚಿದ ಅವಯವಗಳು ಅತ್ತಿತ್ತ ಅಲುಗಾಡದಂತೆ ಇರಿಸುವುದು, ಗಾಯಾಳುವನ್ನು ಸರಿಯಾದ ಚಿಕಿತ್ಸೆ ದೊರೆಯುವ ಹತ್ತಿರದ ಚಿಕಿತ್ಸಾ ಸೌಲಭ್ಯಕ್ಕೆ ಆದಷ್ಟು ಬೇಗನೆ ಒಯ್ಯುವುದು.

ಹಾವು ಕಚ್ಚಿದಾಗ ಏನು ಮಾಡಬಹುದು?
ಮೊತ್ತ ಮೊದಲನೆಯದಾಗಿ,  ಹಾವು ಕಚ್ಚಿರುವ ವ್ಯಕ್ತಿಗೆ ಧೈರ್ಯ ನೀಡಬೇಕು. ಹಾವು ಕಚ್ಚುವುದರಿಂದ ಮರಣ ಸಂಭವಿಸುವುದಿಲ್ಲ; ಇದಕ್ಕೆ ಸೂಕ್ತ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ಲಭ್ಯ ಇದೆ ಎಂಬುದಾಗಿ ಆ ವ್ಯಕ್ತಿಗೆ ಭರವಸೆ ನೀಡಬೇಕು. ಹಾವು ಕಚ್ಚಿರುವ ಅಂಗ, ಭಾಗಗಳು ಹೃದಯದ ಮಟ್ಟಕ್ಕಿಂತ ಕೆಳಗೆ ಬರುವಂತೆ ವ್ಯಕ್ತಿಯನ್ನು ಮಲಗಿಸಬೇಕು. ಊತ ಕಾಣಿಸಿಕೊಂಡು ಬಿಗಿಯಾಗುವ ಸಾಧ್ಯತೆ ಇರುವುದರಿಂದ ವ್ಯಕ್ತಿಯು ಧರಿಸಿರುವ ಶೂಗಳು, ರಿಂಗ್‌ಗಳು, ವಾಚ್‌, ಆಭರಣಗಳು ಮತ್ತು ಬಿಗಿಯಾದ ಉಡುಪುಗಳನ್ನು ತೆಗೆಯಬೇಕು. ಹಾವು ಕಚ್ಚಿರುವ ಅವಯವಕ್ಕೆ ದಬ್ಬೆಯನ್ನು ಕಟ್ಟಿ ಅದನ್ನು ಅತ್ತಿತ್ತ ಅಲುಗಾಡದಂತೆ ಇರಿಸಬೇಕು ಅಥವಾ ಸಣ್ಣದಾಗಿ ಒಂದು ಬ್ಯಾಂಡೇಜ್‌ ಸುತ್ತಬಹುದು. ಅನಂತರ ಆದಷ್ಟು ಬೇಗನೆ ವಿಷ-ನಿರೋಧಕ ಔಷಧಿ ಲಭ್ಯ ಇರುವಂತಹ ಹತ್ತಿರದ ಆಸ್ಪತ್ರೆಗೆ ರೋಗಿಯನ್ನು ಸಾಗಿಸಬೇಕು. 

ಹಾವು ಕಚ್ಚಿದಾಗ ಆಗಿರುವ ಗಾಯದ ಮೇಲ್ಭಾಗದಲ್ಲಿ ಕಟ್ಟು ಹಾಕುವುದನ್ನು (ಟಾರ್ನ್ ಕ್ವೆಟ್‌) ನಾವು ಕಾಣುತ್ತಿರುತ್ತೇವೆ, ಆದರೆ ಹಾಗೆ ಮಾಡಬಾರದು. ವಿಷವನ್ನು ತೆಗೆದು ಹಾಕಲು ಹಾವು ಕಚ್ಚಿರುವ ಭಾಗವನ್ನು ನೀರಿನಿಂದ ತೊಳೆಯಬಾರದು. ಅಥವಾ ಇತರ ದ್ರಾವಣಗಳನ್ನು ಹಚ್ಚಬಾರದು. ಕಚ್ಚಿರುವ ಭಾಗದಲ್ಲಿ ಅಥವಾ ಅದರ ಮೇಲ್ಭಾಗದಲ್ಲಿ ಕತ್ತರಿಸಬಾರದು ಅಥವಾ ರಂಧ್ರಗಳನ್ನು ಮಾಡಬಾರದು. ವಿದ್ಯುತ್‌ ಆಘಾತಗಳ ಪ್ರಯೋಗವನ್ನು ಮಾಡಬಾರದು. ಹಾವು ಕಚ್ಚಿರುವ ಭಾಗವನ್ನು ವಿಶೇಷವಾಗಿ ಶೈತ್ಯಗೊಳಿಸುವುದಾಗಲಿ ಅಥವಾ ತಂಪುಕಾರಕಗಳನ್ನು ಹಚ್ಚುವುದಾಗಲಿ ಮಾಡಬಾರದು. ಯಾವುದೇ ರೀತಿಯ ಅಪಾಯ ಸಂಭವವಿರುವ ಗಿಡಮೂಲಿಕೆ ಅಥವಾ ನಾಟಿ ಮದ್ದನ್ನು ಕಚ್ಚಿರುವ ಭಾಗಕ್ಕೆ ಹಚ್ಚಬಾರದು. ಬಾಯಿಯ ಮೂಲಕ ವಿಷವನ್ನು  ಹೀರಿ ತೆಗೆಯಲು ಪ್ರಯತ್ನಿಸಬಾರದು. ಹಾವು ಕಚ್ಚಿ ರುವವರಿಗೆ ಪಾನೀಯ, ಆಲ್ಕೋಹಾಲ್‌ ಅಥವಾ ಇತರ ಔಷಧಿಗಳನ್ನು ಕುಡಿಯಲು ಕೊಡಬೇಡಿ. ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ ಮತ್ತು ಹಾವಿನ ವಿಷವನ್ನು ಇಳಿಸುತ್ತೇವೆ ಎಂದು ಹೇಳಿಕೊಳ್ಳುವ ಕಪಟ ವೈದ್ಯರ ಬಳಿಗೆ ರೋಗಿಯನ್ನು ಕರೆದೊಯ್ಯಬೇಡಿ. 

ಹಾವು ಕಚ್ಚಿರುವುದಕ್ಕೆ ನೀಡುವ ಚಿಕಿತ್ಸೆಯಲ್ಲಿ ಪಾಲಿಸಬೇಕಾದ ಅಂಶಗಳು ಆರಂಭದಲ್ಲಿ ವ್ಯಕ್ತಿಯ ಶ್ವಾಸಮಾರ್ಗ, ಉಸಿರಾಟ ನಿರಾಳವಾಗಲು ಮತ್ತು ಅಘಾತದಿಂದ ಹೊರಬರಲು ಚಿಕಿತ್ಸೆ ನೀಡುವುದು. ಈ ಚಿಕಿತ್ಸೆಯಲ್ಲಿ ಟೆಟೆನಸ್‌ ಟಾಕ್ಸಾಯ್ಡ ಮತ್ತು ಆಂಟಿ ಬಯಾಟಿಕ್ಸ್‌ ಆವಶ್ಯಕ. 

ತಪಾಸಣೆ
ಹಾವು ಕಚ್ಚಿದ ಸಂದರ್ಭದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಹಾವನ್ನು ಗುರುತಿಸಲು ಪ್ರಯತ್ನಿಸಬೇಕು. ಮಂಡಲದ ಹಾವು ಕಚ್ಚಿದಾಗ ರಕ್ತ ಹೆಪ್ಪುಗಟ್ಟುವಿಕೆಯು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ನಾಗರಹಾವು ಮತ್ತು ಕಡಂಬಳ ಹಾವು ಕಚ್ಚಿದರೆ ನರವ್ಯೂಹದಲ್ಲಿ  ವಿಷ ಕಾಣಿಸಿಕೊಳ್ಳುತ್ತದೆ, ಆದರೆ ಸಾಮಾನ್ಯವಾಗಿ ರಕ್ತಹೆಪ್ಪುಗಟ್ಟುವಿಕೆ ಇರುವುದಿಲ್ಲ. ಗರಗಸದಂತಹ ಹುರುಪೆಗಳಿರುವ (ಸಾ ಸ್ಕೇಲ್ಡ್‌)ಮಂಡಲದ ಹಾವು ಕಚ್ಚಿದಾಗ ಮೂತ್ರಪಿಂಡದ ವೈಫ‌ಲ್ಯ ಕಾಣಿಸಿಕೊಳ್ಳುವುದಿಲ್ಲ ಆದರೆ ರಸ್ಸೆಲ್ಸ್‌ ವೈಪರ್‌ ಮತ್ತು ಉಬ್ಬು ಮೂಗಿನ ಕೊಳಕು ಮಂಡಲ ಹಾವು ಕಚ್ಚಿದಾಗ ಮೂತ್ರಪಿಂಡದ ವೈಫ‌ಲ್ಯ ಕಾಣಿಸಿಕೊಳ್ಳುತ್ತದೆ.

ಹಾವು ಕಚ್ಚಿದ ಎಲ್ಲ ರೋಗಿಗಳನ್ನು 24 ಗಂಟೆಗಳ ವರೆಗೆ ನಿಗಾವಣೆಯಲ್ಲಿ ಇರಿಸಲಾಗುವುದು. 

ಪರೀಕ್ಷೆಗಳು
ಇಪ್ಪತ್ತು ನಿಮಿಷಗಳ ಹೋಲ್‌ ಬ್ಲಿಡ್‌ ಕ್ಲಾಟಿಂಗ್‌ ಪರೀಕ್ಷೆ ಅನ್ನುವುದು ರೋಗಿಯ ಹಾಸಿಗೆಯ ಪಕ್ಕದಲ್ಲೇ ಮಾಡಬಹುದಾದ ಹೆಪ್ಪುಗಟ್ಟುವಿಕೆಯ ಪರೀಕ್ಷೆಯಾಗಿದ್ದು, ಇದೊಂದು ವಿಶ್ವಾಸಾರ್ಹ ಪರೀಕ್ಷೆ ಆಗಿರುತ್ತದೆ. ಒಂದು ಶುದ್ಧವಾದ, ಒಣ ಟೆಸ್ಟ್‌ ಟ್ಯೂಬ್‌ ನಲ್ಲಿ ರಕ್ತನಾಳದಿಂದ ಸ್ವಲ್ಪ ರಕ್ತವನ್ನು ತೆಗೆದುಕೊಂಡು ಅದನ್ನು ಕೋಣೆಯ ವಾತಾವರಣದಲ್ಲಿ 20 ನಿಮಿಷಗಳ ವರೆಗೆ ಅಲುಗಾಡದಂತೆ ಇರಿಸಬೇಕು. ಅನಂತರ ಟ್ಯೂಬ್‌ ಅನ್ನು ಸ್ವಲ್ಪ ಓರೆ ಮಾಡಿ ರಕ್ತ ಇನ್ನೂ ದ್ರವರೂಪದಲ್ಲಿÉಯೇ ಇದೆಯೋ ಎಂದು ಪರೀಕ್ಷಿಸಬೇಕು ಒಂದು ವೇಳೆ ಹಾಗೆಯೇ ಇದ್ದರೆ ರಕ್ತ ಹೆಪ್ಪು$ಗಟ್ಟುವುದಿಲ್ಲ ಎಂದು ಅರ್ಥ. ರೋಗಿಯು ದಾಖಲಾದ ಬಳಿಕ 3 ಗಂಟೆಗಳ ವರೆಗೆ ಪ್ರತೀ 30 ನಿಮಿಷಗಳಿಗೆ ಒಂದು ಬಾರಿ ಅನಂತರ ಗಂಟೆಗೆ ಒಂದು ಬಾರಿಯಂತೆ ಈ ಪರೀಕ್ಷೆಯನ್ನು ನಡೆಸಬೇಕು. 

ಚಿಕಿತ್ಸಾ ಹಂತಗಳು:
ಬಾಯಿಯ ಮೂಲಕ ಸೇವಿಸುವ ಪಾರಾಸಿಟಮೋಲ್‌ ಅಥವಾ ಟ್ರಾಮಡಾಲ್‌ಗ‌ಳಿಂದ ಹಾವು ಕಚ್ಚಿರುವ ನೋವು ಕಡಿಮೆ ಆಗಬಹುದು. ಆದರೆ ಹಾವು ಕಚ್ಚಿರುವ ವ್ಯಕ್ತಿಗೆ ಆಸ್ಪಿರಿನ್‌ ಅಥವಾ ನಾನ್‌ ಸ್ಟಿರಾಯxಲ್‌ ಆಂಟಿ ಇನ್ಫ$Éಮೇಟರಿ ಔಷಧಿಗಳನ್ನು  ಕೊಡಬಾರದು. 

ಟಾನೆಟ್ಸ್‌ಗಳನ್ನು ಅಂದರೆ ಹಾವು ಕಚ್ಚಿರುವ ಜಾಗಕ್ಕಿಂತ ಸ್ವಲ್ಪ$ ಮೇಲೆ ಕಟ್ಟು ಹಾಕುವುದನ್ನು ಶಿಫಾರಸು ಮಾಡುವುದಿಲ್ಲ; ಪ್ರಸ್ತುತ ಹಾವು ಕಚ್ಚಿರುವ ಅನೇಕ  ಪ್ರಕರಣಗಳಲ್ಲಿ ಟಾನೆR$Ììಟ್‌ಗಳನ್ನು ಬಿಗಿದಿರುವ ಸ್ಥಿತಿಯಲ್ಲಿಯೇ ರೋಗಿಗಳು ಬರುವುದಿದೆ. ಈ ಕಟ್ಟುಗಳನ್ನು ತೆಗೆಯುವಾಗಲೂ ಸಹ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುವುದು. ಕೂಡಲೇ ಕಟ್ಟನ್ನು ಬಿಚ್ಚುವುದರಿಂದ ಹಠಾತ್ತಾಗಿ ವಿಷವು ತುಂಬಿಕೊಂಡು ಪಾರ್ಶ್ವವಾಯು ಅಥವಾ ರಕ್ತದೊತ್ತಡ ಕುಸಿತದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ರಕ್ತ ಬಂಧಕ ಅಥವಾ ಕಟ್ಟನ್ನು ತೆಗೆಯುವುದಕ್ಕೆ ಮೊದಲು, ಅದರ ಹತ್ತಿರದ ನಾಡಿಗಳನ್ನು ಪರೀಕ್ಷಿಸುವುದು ಆವಶ್ಯಕ. ಒಂದುವೇಳೆ ನಾಡಿಮಿಡಿತ ಇಲ್ಲದಿದ್ದರೆ, ವೈದ್ಯರ ಉಪಸ್ಥಿತಿಯಲ್ಲಿಯೇ ಬಿಗಿದ ಕಟ್ಟನ್ನು ತೆಗೆಯಿರಿ, ಯಾಕೆಂದರೆ ಈ ಸಂದರ್ಭದಲ್ಲಿ ಉಸಿರಾಟದ ತೊಂದರೆ ಅಥವಾ ರಕ್ತದೊತ್ತಡ ಕುಸಿಯುವ ತೊಂದರೆ ಕಾಣಿಸಿಕೊಂಡರೆ ವೈದ್ಯರು ನಿಭಾಯಿಸುತ್ತಾರೆ.  ಒಂದುವೇಳೆ ಹಾಕಿರುವ ಕಟ್ಟು ಬಿಗಿದಿರುವ ಕಾರಣದಿಂದಾಗಿ, ನಾಡಿ ಮಿಡಿತ ನಿಂತು ಹೋಗಿದ್ದರೆ, ಬ್ಲಿಡ್‌ ಪ್ರಷರ್‌ ಕಫ್ ಅನ್ನು ಅಳವಡಿಸಬೇಕು ಮತ್ತು ನಿಧಾನವಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.  

ಹಾವಿನ ವಿಷ ನಿರೋಧಕ  ಇದು ಹಾವು ಕಚ್ಚಿರುವುದಕ್ಕೆ ನೀಡುವ ಚಿಕಿತ್ಸೆಯ ಬಹುಮುಖ್ಯ ಅಂಶ. ಭಾರತದಲ್ಲಿ ಪಾಲಿವ್ಯಾಲೆಂಟ್‌  ಎನ್ನುವುದು ಸುಮಾರು ನಾಲ್ಕು ಜಾತಿಯ ಹಾವುಗಳಿಗೆ ಅಂದರೆ ರಸ್ಸೆಲ್ಸ್‌ ವೈಪರ್‌, ನಾಗರ ಹಾವು, ಕಟ್ಟ ಕಡಂಬಳ ಮತ್ತು ಗರಗಸದ ಹುರುಪೆ ಇರುವ ಮಂಡಲದ ಹಾವುಗಳ ವಿಷಕ್ಕೆ ಇದು ಪರಿಣಾಮಕಾರಿ ವಿಷ ನಿರೋಧಕ.

ಹಾವು ಕಚ್ಚಿಸಿಕೊಂಡ ಅನಂತರ ವಿಳಂಬವಾಗಿ ಚಿಕಿತ್ಸೆಗೆ ಬರುವವರು ಹಾವು ಕಚ್ಚಿಸಿಕೊಂಡ ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯೆಂದರೆ, ಪೀಡಿತರು ಹಾವು ಕಚ್ಚಿದ ಹಲವು ದಿನಗಳ ಬಳಿಕ ಹಠಾತ್‌ ಮೂತ್ರಪಿಂಡ ವೈಫ‌ಲ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ಬರುವುದು.  ಅಂತಹವರಲ್ಲಿ   (ಹಾವಿನ ವಿಷ ನಿರೋಧಕ) ಚಿಕಿತ್ಸೆಯ ಬಗ್ಗೆ ನಿರ್ಧರಿಸಲು ಪ್ರಮುಖ ಮಾನದಂಡ ಎಂದರೆ ರೋಗಿಯ ದೇಹದಲ್ಲಿ ಆ ಹೊತ್ತಿಗೆ ನಡೆದಿರುವ ವಿಷದ ಚಟುವಟಿಕೆ. ಯಾಕೆಂದರೆ, ದೇಹಕೋಶಗತವಾಗಿರದ ವಿಷವನ್ನು ಮಾತ್ರ ಪ್ರಭಾವಶೂನ್ಯಗೊಳಿಸಬಹುದು. ನರವ್ಯೂಹಕ್ಕೆ ವಿಷ ತಗುಲಿದ್ದು, ರೋಗಿ ಕಣ್ಣು ರೆಪ್ಪೆ$ ತೆರೆಯಲಾರದ ಸ್ಥಿತಿ, ಶ್ವಾಸಕೋಶ ವೈಫ‌ಲ್ಯದಂತಹ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅಂತಹವರಲ್ಲಿ ಮುಕ್ತವಾದ ವಿಷ ದೇಹದಲ್ಲಿ ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು 8-10  ವಯಾಲ್‌ ಗಳ ಒಂದು ಡೋಸನ್ನು ನೀಡುವುದು ಹೆಚ್ಚಿನಂಶ ಒಳ್ಳೆಯದು.  ಆದರೆ ಇಷ್ಟು ವಿಳಂಬವಾದ ಹಂತದಲ್ಲಿ ಹೆಚ್ಚಿನ ವಿಷಾಂಶ ದೇಹಕೋಶಗತವಾಗಿರುವ ಸಾಧ್ಯತೆಗಳೇ ಹೆಚ್ಚಾಗಿದ್ದು,  ಪೀಡಿತರಿಗೆ ಶ್ವಾಸಕೋಶ ಬೆಂಬಲ (ವೆಂಟಿಲೇಟರ್‌) ಅಗತ್ಯವಿರುತ್ತದೆ.

ಹಾವಿನ ವಿಷ ನಿರೋಧಕದ 
ಪರಿಣಾಮಗಳು

ಹಾವಿನ ವಿಷ ನಿರೋಧಕ ಪರಿಣಾಮಗಳು ಮರಣಾಂತಿಕ ಆಗಿರಬಹುದು. ಅದನ್ನು ನೀಡಿದ ನಂತರ ರೋಗಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರಬೇಕು ಮತ್ತು ಆತನಲ್ಲಿ ಅನಾಫಿಲ್ಯಾಕ್ಸಿಕ್‌ ಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ನಿಲ್ಲಿಸಬೇಕು. ಪರಿಣಾಮಗಳನ್ನು ನಿಯಂತ್ರಿಸಲು ಆಂಟಿಹಿಸ್ಟಾಮೈನ್‌ಗಳನ್ನು ಕೊಡಬಹುದು ಮತ್ತು ಅವು ತೀವ್ರವಾಗಿದ್ದರೆ, ಅಡ್ರಿನಾಲಿನ್‌ ಮತ್ತು  ಸ್ಟಿರಾಯ್ಡ ಗಳನ್ನು ಕೊಡಬೇಕು. ಒಂದು ಬಾರಿ ರೋಗಿಯು ಚೇತರಿಸಿ ಕೊಂಡ ನಂತರ, 10-15 ನಿಮಿಷಗಳಲ್ಲಿ ರೋಗಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮತ್ತೆ ಪುನ: ಅದನ್ನು  ಆರಂಭಿಸ ಬಹುದು. ಸೀರಂ ಅಸ್ವಾಸ್ಥ್ಯಕ್ಕೆ ಬಾಯಿಯ ಮೂಲಕ ಸೇವಿಸುವ ಪ್ರಡ್ನಿಸೋಲನ್‌ ಮತ್ತು/ಅಥವಾ ಆಂಟಿಸ್ಟಾಮಿನಿಕ್ಸ್‌ ಚಿಕಿತ್ಸೆಯನ್ನು ನೀಡಬಹುದು. 

ಡಾ| ರಾಮ್‌ ಭಟ್‌,  
ಪ್ರೊಫೆಸರ್‌,  
ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ


Trending videos

Back to Top