ದಂಪತಿಗಳ ಉತ್ತಮ ಸಂಬಂಧಕ್ಕೆ ವಾರಕ್ಕೊಮ್ಮೆ ಸೆಕ್ಸ್ ಸಾಕಂತೆ:ಸಮೀಕ್ಷೆ

ಟೊರೆಂಟೊ: ಈ ಹಿಂದಿನ ಹೆಚ್ಚಿನ ಸಮೀಕ್ಷೆಗಳು ದಂಪತಿಗಳ ನಡುವೆ ಉತ್ತಮ ಸಂಬಂಧಕ್ಕಾಗಿ ಹೆಚ್ಚಿನ ಸೆಕ್ಸ್ ಅಗತ್ಯ ಎಂದಿದ್ದವು. ಆದರೆ ಈ ಸಮೀಕ್ಷೆ ಮಾತ್ರ ಉಲ್ಟಾ ,ದಂಪತಿಗಳ ಸಂಮಂಧ ಸುಧಾರಿಸಲು ವಾರಕ್ಕೊಮ್ಮೆ ಸೆಕ್ಸ್ ಸಾಕು ಎಂದಿದೆ.
ಈ ಸತ್ಯವನ್ನು ಕೆನಡಾದ ಟೊರೆಂಟೊದಲ್ಲಿರುವ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧಕಿ ಆಮಿ ಮ್ಯೂಸೆ ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.ಈ ಸಮೀಕ್ಷೆ ಗಾಗಿ ಕಳೆದ 40 ವರ್ಷಗಳಿಂದ 30,000 ಅಮೆರಿಕರದ ದಂಪತಿಗಳ ಅಭಿಪ್ರಾಯ ಪಡೆಯಲಾಗಿದೆ.
ಹೆಚ್ಚಿನ ಲೈಂಗಿಕಕ್ರಿಯೆ ದಂಪತಿಗಳ ಜೀವನ ಸಂತೋಷ ಹೆಚ್ಚಿಸುತ್ತದೆ ಎನ್ನಲಾಗಿದೆಯಾದರೂ ಈ ಸಮೀಕ್ಷೆ ಮಾತ್ರ ವಾರಕ್ಕೊಮ್ಮೆ ಮಿಲನ ಹೊಂದಿದರೂ ಅನ್ಯೋನ್ಯ ದಾಂಪತ್ಯ ಕಳೆಯಲು ಸಾಧ್ಯವಿದೆ ಎಂದಿದೆ.
ವಿಶೇಷವಾಗಿ ಸಮೀಕ್ಷೆಯಲ್ಲಿ ನವ ದಂಪತಿಗಳು , ವಯಸ್ಸಾದ ದಂಪತಿಗಳಅಭಿಪ್ರಾಯವನ್ನು ಕೇಳಲಾಗಿದೆಯಂತೆ.
ಸಾಂಗಾತಿಯ ಮೇಲೆ ಲೈಂಗಿ ಕಕ್ರಿಯೆಗಾಗಿ ಒತ್ತಡ ಹೇರುವುದು ಸರಿಯಲ್ಲ, ಹೀಗೆ ಒತ್ತಾಯಾದ ಸೆಕ್ಸ್ ನಡೆಸುವುದರಿಂದ ಸಂಬಂಧ ಉತ್ತಮವಾಗುವುದಿಲ್ಲ ಎಂದು ಮ್ಯೂಸಿ ಹೇಳಿದ್ದಾರೆ.