CONNECT WITH US  

ವಾಸ್ತುವಿಗೂ, ಮನೆಯ ಸ್ವತ್ಛತೆಗೂ ಸಂಬಂಧ ಇದೆಯಾ?

ಮನೆಯ ಒಳಗಡೆಯ ಅಂದಚೆಂದ ಅಲಂಕಾರ ಪೇಂಟಿಂಗ್‌ ಉಪಕರಣಗಳ ಸೌಂದರ್ಯ ಎಲ್ಲಾ ಸರಿ. ಆದರೆ ಇವು ಒಂದು ಒಳ್ಳೆಯ ಮನೆಯನ್ನು ರೂಪಿಸಲಾರವು. ಒಳಗೆ ಕಾಪೆìಟ್‌ ಹಾಸು, ಆಧುನಿಕತೆಯಿಂದ ಸುಸಜ್ಜಿತಗೊಂಡ ಸಂಯೋಜನೆಗಳೆಲ್ಲಾ ಒಳಿತು ತರುವುದಾಗಿದ್ದರೆ ಅನೇಕಾನೇಕ ಕೋಟ್ಯಾಧಿಶರುಗಳಿಗೆ ಸುಖದ ವಿನಾ ದುಃಖ, ಒತ್ತಡ, ನಿರಾಶೆ, ಹಳಹಳಿಕೆಗಳೆಲ್ಲಾ ಇರುತ್ತಲೇ ಇರಲಿಲ್ಲ. ಹಾಗಾದರೆ ಮಾನಸಿಕ ಶಾಂತಿಗೆ ಯಾವುದು ಕಾರಣ. ಏನು? ಯಾವಾಗ? ಎಷ್ಟು? ಹೇಗೆ? ಯಾವೆಲ್ಲ ವಿಚಾರಗಳು ಯಾಕೆ ಮನಸ್ಸಿನ ಶಾಂತಿಗೆ ಒಳಿತನ್ನು ತರುತ್ತವೆ ಎಂಬುದು ಪ್ರಧಾನವಾದ ಅಂಶಗಳಾಗುತ್ತದೆ.

ನಿಜ, ಮನೆಯು ಸರಳವಾಗಿ ಗುಡಿಸಲೇ ಆಗಿದ್ದರೂ ಸರಿ ಸ್ವತ್ಛತೆಯ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲಿಸಬೇಕು. ಬೇಕಾದಲ್ಲಿ ವಸ್ತುಗಳನ್ನು ತುಂಬಿಡುವ ಎಸೆದುಬಿಡುವ ಪರಿಪಾಠ ಬೆಳೆಸಿಕೊಳ್ಳಲೇ ಬಾರದು. ಕಣ್ಣಮುಂದೇ ಇರಲಿ ಎಂದು ಇಟ್ಟರೂ ಕೂಡಾ ಯಾವುದೂ ಕಾರಣಕ್ಕೆ ಮುಖ್ಯವಾದೊಂದು ವಸ್ತು ಹಲವು ವಸ್ತುಗಳ ನಡುವೆ ಸಿಕ್ಕಿ ಎಲ್ಲೋ ಮಾಯವಾಗಿ ಬಿಡುತ್ತದೆ. ಎಲ್ಲಾ ಒಮ್ಮೆ ರಗಳೆ ಎಂದೆನಿಸಿದರೂ ಯಾವುದು ಬೇಕಾದ್ದು, ಯಾವುದು ಬೇಡದ್ದು ಎಂಬುದನ್ನು ಕೂಡಲೇ ತ್ಯಾಜ್ಯದ ಜೊತೆ ಕಳಿಸಿಬಿಡಿ. ಮನೆಯಿಂದ ದೂರಕ್ಕೆ ಒಯ್ಯಲ್ಪಡಲಿ.

ನೋಡಿ ನಮ್ಮ ಸ್ನೇಹಿತರೊಬ್ಬರ ಮನೆ ಒಳ್ಳೆಯ ಸ್ನೇಹಿತ ಮನೆತನ ದೊಡ್ಡದು ಆಸ್ತಿವಂತ ಸ್ಥಿತಿವಂತ. ಆದರೆ ಆಸ್ತಿಯ ವಿಚಾರದಲ್ಲಿ ಯುಕ್ತವಾದ ನಿಶ್ಚಿತ ಸಂಧಾನವನ್ನು ಮಾಡಿಕೊಳ್ಳಲು ದಾಯಾದಿಗಳು ಅವಕಾಶ ಕೊಡುತ್ತಿಲ್ಲ. ಒಂದು ವಿಸ್ತಾರವಾದ ಜಾಗೆಯನ್ನು ಬ್ಯಾಂಕ್‌ ಒಂದಕ್ಕೆ ಅನುಕೂಲಕರ ರೀತಿಯಲ್ಲಿ ಯುಕ್ತವಾಗಿ, ಸೂಕ್ತವಾಗಿ ಮಾಡಿಕೊಡುವ ಎಲ್ಲಾ ಅವಕಾಶ ಖರ್ಚುವೆಚ್ಚವನ್ನೂ ಈ ನಮ್ಮ ಗೆಳೆಯ ಪೂರೈಸಿದರು. ಪ್ರತಿತಿಂಗಳ ಬಾಡಿಗೆ ಅರವತ್ತು ಸಾವಿರ ಎಂಬುದೂ ನಿಶ್ಚಿತವಾಯ್ತು. ಅರವತ್ತು ಸಾವಿರದಲ್ಲಿ ಉತ್ತಮವಾದ ರೀತಿಯಲ್ಲಿ ಬದುಕಿ ಬಾಳೂವುದೆಂಬ ಕನಸನ್ನು ಗೆಳೆಯ ಕಾಣುತ್ತಲೇ ಇದ್ದ. ಆದರೆ ದಾಯಾದಿಗಳ ಜೊತೆಯಲ್ಲೇ ಎಲ್ಲಾ ವ್ಯಾವಹಾರಿಕ ವಹಿವಾಟಿಗಳೂ ನಡೆಯುತ್ತಿದ್ದವು.
ಎಲ್ಲರ ಮನೆಗಳು ಬೇರಾಗಿದ್ದರೂ ವಹಿವಾಟುಗಳು ಎಲ್ಲರ ಒಕ್ಕೂಟದ ಪಾಲುದಾರಿಕೆಯಲ್ಲಿತ್ತು. ಬ್ಯಾಂಕಿಗೆ ಎಂದು ರೂಪಿಸಿಕೊಟ್ಟ ಸ್ಥಳ ಮಾತಿನ ಪ್ರಕಾರ ಒಂದು ಪ್ರತ್ಯೇಕ ಖಾಲಿ ಕಾಗದದಲ್ಲಿ ಎಲ್ಲರೂ ಸಹಿ ಹಾಕಿಕೊಟ್ಟ ಆಧಾರದ ಪ್ರಕಾರ ನಮ್ಮ ಈ ಗೆಳೆಯನಿಗೆ ಸೇರುವಂತದಿತ್ತು. 

ಹೀಗಾಗಿ ಆ ಎಲ್ಲಾ ಸಹಿ ಹಾಕಿದ ಗಟ್ಟಿ ಆಧಾರದ ಕಾಗದದ ಬಲದಿಂದಲೇ ಗೆಳೆಯ ಬ್ಯಾಂಕಿಗೆ ಅವಶ್ಯವಾದ ಮಾರ್ಪಾಟುಗಳನ್ನು ಒಟ್ಟೂ ಇಪ್ಪತ್ತೆ„ದು ಲಕ್ಷ ವೆಚ್ಚ ಮಾಡಿ ಹಸ್ತಾಂತರ ಮಾಡಿಕೊಟ್ಟ ಮೇಲೆ ದಾಯಾದಿಗಳು ಬರುವ ಬಾಡಿಗೆಗೆ ತಾವೂ ಪಾಲುದಾರರು ಎಂದು ಧ್ವನಿಗೂಡಿಸಿದರು. ಈ ನಮ್ಮ ಗೆಳೆಯ ದಾಯಾದಿಗಳು ಒಗ್ಗೂಡಿ ಇವನ ಸುಪರ್ದಿಗೆ ಎಂದು ನಿರ್ಣಯಕ್ಕೆ ಬಂದು ಸಹಿ ಹಾಕಿದ ಕಾಗದದ ಪ್ರತ್ಯೇಕ ಪತ್ರ ಈಗ ನಮ್ಮ ಗೆಳೆಯನಿಗೆ ಹುಡುಕಲಾಗುತ್ತಿಲ್ಲ. ಇಲ್ಲೇ ಇಟ್ಟಿದ್ದೆ. ಇವುಗಳ ನಡುವೆಯೇ ಇತ್ತು ಎಂದು ಹುಡುಕುತ್ತಲೇ ಇದ್ದಾನೆ. ಒಂದು ವರ್ಷದಿಂದ ಹುಡುಕುತ್ತಿದ್ದಾನೆ. ವೈಯುಕ್ತಿಕ ಹೆಸರಿನಲ್ಲಿ ಸಾಲ ಇದೆ. ಬಾಡಿಗೆಯನ್ನೀಗ ಎಲ್ಲರೂ ಒಟ್ಟುಗೂಡಿ ಪಡೆಯುತ್ತಿದ್ದಾರೆ. ನಮ್ಮ ಗೆಳೆಯನಿಗೆ ಬರೀ ಐದು ಸಾವಿರ ಸಿಗುತ್ತಿದೆ. ತುಂಬುವ ಬಡ್ಡಿಯೇ 25 ಸಾವಿರ ಇದೆ. ಬರುವ ಅರವತ್ತು ಸಾವಿರ ಬಾಡಿಗೆಯಲ್ಲಿ ಸಾಲಕ್ಕೆ 25 ಸಾವಿರ ಕಟ್ಟಿ ಉಳಿದ 35 ಸಾವಿರದಲ್ಲಿ ಜೀವನ ನಡೆಸುವ ಅವನ ಯೋಜನೆ ಕುಸಿದು ಬಿದ್ದಿದೆ. ಮನೆಯಲ್ಲಿ ಯುಕ್ತತೆ ಹಾಗೂ ಸೂಕ್ತ ಜೋಡಣೆ ಸಾಧ್ಯವಾಗದಿದ್ದಲ್ಲಿ ಎಲ್ಲರೂ ಸಹಿ ಹಾಕಿದ್ದ ಪತ್ರ ಕಳೆದುಹೋಗುತ್ತಿರಲಿಲ್ಲ. ಅನೇಕಾನೇಕ ವಾಸ್ತು ದೋಷಗಳು ಇವನು ನಮ್ಮಿà ಗೆಳೆಯ ವಾಸಿಸುತ್ತಿರುವ ಮನೆಯಲ್ಲಿ ಅಂತರ್ಗತವಾಗಿದ್ದರಿಂದ ಅವನ ಮನಸ್ಸು ಸ್ಥಿಮಿತದಲ್ಲಿಲ್ಲ. ಕಾಗದ ಪತ್ರ ಕಳೆಯುವಂಥ ಪರಿಸ್ಥಿತಿ ನಿರ್ಮಾಣವಾಯ್ತು. ಹೀಗಾಗಿ ಸ್ವತ್ಛತೆ, ಮನೆಯ ಶಾಂತಿಯ ದೃಷ್ಟಿಯಿಂದ ಮುಖ್ಯ. ಉಳಿದ ವಿವರಗಳನ್ನು ಮುಂದಿನ ವಾರ ಚರ್ಚಿಸೋಣ. 

ಅನಂತಶಾಸ್ತ್ರೀ


Trending videos

Back to Top