CONNECT WITH US  

ಆಧುನಿಕ ಉಪಕರಣಗಳು ಮತ್ತು ಮನೆ

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ.

ಹೆಚ್ಚು ಹೆಚ್ಚು ಆಧುನೀಕರಣ ಮನೆಯ ವಿಷಯದಲ್ಲಿ ಹೊಸ ಹೊಸ ಸಾಮಗ್ರಿಗಳನ್ನು ತುಂಬಿಕೊಳ್ಳಲು ಅನಿವಾರ್ಯವಾದೊಂದು ಸನ್ನಿವೇಶವನ್ನು ನಿರ್ಮಿಸುತ್ತ ಹೋಗುತ್ತದೆ.

ನಿಜ ಹೇಳಬೇಕಂದರೆ ಆಧುನಿಕತೆ ಸಮಾಜದ ಸಂಪನ್ನತೆಯನ್ನು ವರ್ಧಿಸುತ್ತ ಹೋಗಬೇಕಿತ್ತು. ಆದರೆ ನಾವು ಇಂದು ಬದುಕುತ್ತಿರುವ ಸಮಾಜ ಆಧುನಿಕತೆಗೆ ತೆರೆದುಕೊಂಡಂತೆ ಅನಿಸುತ್ತದೆಯೇ? ದೂರದ ಅಮೆರಿಕಾ ಎಷ್ಟು ಹತ್ತಿರವಾಗಿದೆಯೆಂದರೆ ಅಮೆರಿಕದವರಿಗೂ ಭಾರತ ಅಪರಿಚಿತವಾದೊಂದು ದೇಶವಲ್ಲ. ಇದು ತಮಗೆ ಬೇಕೆಂದಾಗ ದೇಶ ಅನಿವಾರ್ಯವಾಗಿ ನಾವು ಆಶ್ರಯಿಸಿ ಇರಬೇಕಾದ ದೇಶ ಎಂಬ ಅವರ ಮನೋಭಾವವನ್ನು ಗಮನಿಸುತ್ತಾ ಎಷ್ಟು ಹತ್ತಿರ ತಲುಪಕೂಡದೋ ಅಷ್ಟು ಹತ್ತಿರ ಬರುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಅಮೆರಿಕಾ ಹತ್ತಿರವಾದದ್ದು. ನಮ್ಮನ್ನು ನಾವು ನಮಗೆ ಬೇಕಾದುದಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ ನಮ್ಮ ಮನೆಗಳನ್ನು.

ಈ ಕಾರಣದಿಂದ ನಮ್ಮ ಮನೆಗಳು ನಮಗೆ ಜೀವನೋಲ್ಲಾಸವನ್ನು ಚಿಮ್ಮಿಸುವ ವಿಚಾರದಲ್ಲಿ ಕಟ್ಟಲ್ಪಡದೆ ಸಂಯೋಜಿಸಲ್ಪಡದೆ ಮನೆಮನೆಯ ಶಾಂತಿ ಹಾಗೂ ನೆಮ್ಮದಿಗಳು ಒಂದು ರೀತಿಯ ಶುಷ್ಕ ನೆಲೆಯಲ್ಲಿ ಸಪ್ಪೆಯಾಗತೊಡಗಿದೆ. ಶುಷ್ಕ ನೆಲೆಗಳೇ ನಮ್ಮ ಆಧುನಿಕತೆಯನ್ನು ಪ್ರತಿಪಾದಿಸುತ್ತಿರುವ ಕೀಲಿ ಕೈಗಳಾಗಿರುವುದರಿಂದ ನಮ್ಮ ಸಾಂಸ್ಕೃತಿಕ ಚೌಕಟ್ಟು ಸಮತೋಲನ ಕಳೆದುಕೊಂಡಿದೆ. ಆಧುನಿಕ ಉಪಕರಣಗಳಾದ ಟೀ, ಓವನ್‌ ಮೈಕ್ರೋವೇವ್‌, ಗೀಸರ್‌, ಲಿಫ್ಟ್, ವ್ಯಾಕ್ಯೂಮ್‌ ಕ್ಲೀನರ್‌ ಇತ್ಯಾದಿ ಇತ್ಯಾದಿ ಅಸಂಪ್ರದಾಯಿಕವಾದ ರೀತಿಯಲ್ಲಿ ಮನೆಯಲ್ಲಿ ಬಿದ್ದುಕೊಂಡಿರುತ್ತದೆ. 

ಇದರಿಂದಾಗಿ ವಿವಿಧ ರೀತಿಯ ನಕಾರಾತ್ಮಕ ಸ್ಪಂದನಗಳು ಮನೆಯನ್ನು ಆಕ್ರಮಣ ಮಾಡಿ ಹಿಂಸಿಸುತ್ತದೆ. ಉದಾಹರಣೆಗೆ ಹಾಗೂ ಗ್ಯಾಸಿನ ಒಲೆಯ ಗ್ಯಾಸಿನ ಸಿಲಿಂಡರ್‌ ಅಂತರಗಳು ಸದಾ ಮುಖ್ಯವಾದ ಸ್ವಿಚ್‌ ಒಂದು ಟೀವಿಯಲ್ಲಿ ವಿಸಿಆರ್‌ ಇತ್ಯಾದಿಗಳು ಆರಿಸದೇ ಇರುವುದು ತಪ್ಪುದಿಕ್ಕಿನಲ್ಲಿ ಟೀವಿಯನ್ನೋ ವಿಸಿಆರ್‌ ಅನ್ನೋ ಕೂಡಿಸುವುದು ಓವನ್‌ ಅಥವಾ ಮೈಕ್ರೋವೇವ್‌ ಉಪಕರಣಗಳನ್ನು ತಪ್ಪಾದ ಕಡೆ ಸಂಯೋಜಿಸುವುದು ಗೀಸರ್‌ ಅನ್ನು ಒಂದೆಡೆ ಬಚ್ಚಲಿಗೆ ತಗುಲಿ ಹಾಕುವುದು ಇತ್ಯಾದಿ ಸರಿಯಾದ ರೀತಿಯಲ್ಲಿ ನಡೆದಿರುವುದಿಲ್ಲ.

ವಿದ್ಯುತ್‌ನಿಂದ ನಡೆಯುವ ಉಪಕರಣಗಳನ್ನು ನಿರ್ದಿಷ್ಟವಾಗಿ ಇದೇ ದಿಕ್ಕಿನಲ್ಲಿ ಸಂಯೋಜಿಸಲ್ಪಡುವ ವಿಚಾರ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಗೊಂಡಿಲ್ಲ ಉರಿ ಎದ್ದು ಬೆಂಕಿಯನ್ನು ಕಣ್ಣಲ್ಲಿ ಕಾಣುವ ಒಲೆ ಗ್ಯಾಸ್‌ ಒಲೆಗಳನ್ನು ಆಗ್ನೇಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಸರಿ. ಆದರೆ ವಿದ್ಯುತ್‌ ನಿಣದ ನಡೆಯುವ ಉಪಕರಣಗಳನ್ನು ಪಶ್ಚಿಮ ಭಾಗಗಳನ್ನು ವಿಶೇಷವಾಗಿ ನೈಋತ್ಯವನ್ನು ಆಕ್ರಮಿಸುವಂತಿದ್ದರೆ ಸೂಕ್ತ. ಈ ಸಂದರ್ಭದಲ್ಲಿ ಹೈಟೆನÒನ್‌ ವಿದ್ಯುತ್‌ ಕಂಬಗಳು ಹೈಟೆನ್‌ ಲೋಡಿರುವ ವೈರುಗಳು ಜಾಲಾಡಿಕೊಂಡಿರುವ ಮನೆಯ ಹೊರವಲಯದ ಜೋಡಣೆಗಳ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯುತ್‌ ಬಗೆಗೆ ಸೂಕ್ತ ಮಾಹಿತಿ ಇರುವ ತಜ್ಞರಿಂದ ಪಶ್ಚಿಮವೂ ತೊಂದರೆಗೆ ಈಡಾಗುವ ಬಿಂದುವೇ ಎಂಬುದನ್ನು ತಿಳಿದುಕೊಳ್ಳಿ. ಟೀವಿಯನ್ನಾಗಲೀ ಕಂಪ್ಯೂಟರ್‌ನ್ನಾಗಲೀ ಮಲಗುವ ಕೋಣೆಯಲ್ಲಿ ಇಡಲೇ ಕೂಡದು. ಇದು ಮಾನಸಿಕವಾದ ಅಂತರ್‌ ವಲಯವನ್ನು ಮೆದುಳಿನ ಸೂಕ್ಷ್ಮ ಕೋಶಗಳನ್ನು ಬಾಧಿಸುವ ವಿಚಾರವಾಗಿರುವುದರಿಂದ ಟೀ ಕಂಪ್ಯೂಟರ್‌ ಹಾಗೂ ಮೊಬೈಲ್‌ ವಿಷಯದಲ್ಲಿ ಟೆಲಿಫೋನಿನ ಲ್ಯಾಂಡ್‌ ಲೈನ್‌ ವಿಚಾರದಲ್ಲಿ ಎಚ್ಚರವಾಗಿರಿ.

ಅನಪೇಕ್ಷಿತ ವಿಚಾರವನ್ನು ತಿಳಿದು ಜಾಗರೂಕತೆಯಿಂದ ವರ್ತಿಸಿ. ಇನ್ನು ಎಷ್ಟೇ ಆದರೂ ಉಂಟಾಗುವ ಪಡಿಪಾಟಲುಗಳಿಂದಾಗಿ ದೇವರ ಮನೆಯಲ್ಲಿ ದೇವರ ಪೀಠ ಇರಿಸುವ ಕಟ್ಟೆಯ ಕೆಳಗಡೆ ಹವಳವನ್ನು ಇಟ್ಟು ಕಟ್ಟೆ ಕಟ್ಟುವುದು ಸೂಕ್ತ ವಿಚಾರ. ಧರಣಿ ಗರ್ಭಸಂಭೂತನಾದ ಅಂಗಾರಕನೇ ವಿದ್ಯುತ್‌ ಉಪಕರಣಗಳ ವಿಷಯದಲ್ಲಿ ನಿಯಂತ್ರಣಕ್ಕಾಗಿ ಜವಾಬ್ದಾರಿಯನ್ನು ಹೊತ್ತ ಗ್ರಹವಾದ್ದರಿಂದ ಹವಳವು ಪ್ರಧಾನವಾದ ದೇವರ ಕೋಣೆಯಲ್ಲಿ ಸೇರಿಕೊಂಡಿರುವುದು ಸೂಕ್ತವಾಗಿದೆ.

ಅನಂತಶಾಸ್ತ್ರಿ
ಮೊ: 8147824707

Trending videos

Back to Top