CONNECT WITH US  

ಮನೆಯಲ್ಲಿ ಅತಿಥಿ ಗೃಹ ಹೇಗಿರಬೇಕು ಗೊತ್ತಾ?

ನಾವು ವಾಸಿಸುವ ಮನೆ ನಾಲ್ಕು ಗೋಡೆಗಳ ಒಂದು ಛಾವಣಿಯ ಗೂಡು ಎಂಬುದಾಗಿ ಕೇವಲ ಭಾವಿಸಬಾರದು. ಇದು ಹೃದಯ, ಹೃದಯದಲ್ಲಿ ಮನೆ ಮಂದಿ ಸಂಸ್ಥಾಪಿಸಿಕೊಂಡೆ ಇರುವ ದೇವರುಗಳ ಪವಿತ್ರವಾದದ್ದೊಂದು ಗುಡಿ. ನಮ್ಮ ಆಷೇìಯ ಪದ್ಧತಿ ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾûಾತ್‌ ಮಹೇಶ್ವರಃ ಎಂದು ಗುರುವನ್ನು ಶ್ರೇಷ್ಠ ಮಟ್ಟದಲ್ಲಿಟ್ಟಂತೆ ಅತಿಥಿ ದೇವೋಭವ ಎಂದು ಅತಿಥಿಗಳನ್ನು ದೇವರನ್ನಾಗಿ ಪರಿಗಣಿಸಿದೆ. ಇದು ಉತ್ರೇಕ್ಷೆಯ ಮಾತಲ್ಲ. ಪಿತೃ ದೇವೋಭವ, ಮಾತೃದೇವೋಭವ ಎಂದಂತೆ ಆಚಾರ್ಯ ದೇವೋಭವ ಎಂದೆನ್ನುತ್ತಾ ಅತಿಥಿ ದೇವೋಭವ ಎಂಬುದನ್ನು ಸರಿಯಾಗೇ ಗುರುತಿಸಿದೆ.

ಅತಿಥಿಗಳ ಕುರಿತು ಸುಂದರ ವ್ಯಾಖ್ಯೆಯನ್ನು ಸಾವಿರ ಶಬ್ದಗಳಲ್ಲಿ ಕಟ್ಟಿಕೊಡಬಹುದು. ಅತಿಥಿ ಧರ್ಮದ ಕುರಿತು ಒಂದು ಪ್ರತ್ಯೇಕ ವಿಸ್ತಾರದ ಗ್ರಂಥ ಬರೆಯಬಹುದು. ಇಂಥ ಅತಿಥಿಯು ಮನೆಯ ಶೋಭೆಯಾಗಿರುತ್ತಾನೆ. ಮನೆಗೆ ಬಂದ ಅತಿಥಿಗೆ ಎಂದು ತಿರುಗಿ ಹೊರಟೇನೋ ಎಂಬ ಅನುಭವ ಆಗಬಾರದು. ಹೀಗಾಗಿ ಮನೆಯು  ಅತಿಥಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಹೊಂದಿದ್ದರೆ ಒಳ್ಳೆಯದು. ಹೊಸಕಾಲದ ಸಂವಿಧಾನ ಮೊದಲಿನಂತಲ್ಲ. ಅತಿಥಿಯೂ ಪ್ರ„ವೇಸಿಯನ್ನು ಬಯಸುತ್ತಾನೆ.

ಮನೆಯ ಪಶ್ಚಿಮ ಅಥವಾ ವಾಯುವ್ಯ ಭಾಗ 
ಅತಿಥಿ ನಮ್ಮ ಪಂಚಭೂತಾತ್ಮಕ ಅಂಶಗಳ ವಿಂಗಡಣೆಯಲ್ಲಿ ನೀರಿನ ಮತ್ತು ವಾಯುವಿನ ಘಟಕಗಳಿಗೆ ಸೇರ್ಪಡೆಯಾಗುತ್ತದೆ. ನೀರು ಹಾಗೂ ವಾಯು ನಮ್ಮ ಬದುಕಿನ ಸಂಜೀವಿನಿಯಾದ ಭಾಗಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ಅತಿಥಿ ಗೃಹವನ್ನು ಪಶ್ಚಿಮದಲ್ಲೋ, ವಾಯುವ್ಯದಲ್ಲೋ ನಾವು ಕಟ್ಟುವಂತಾಗಬೇಕು. ಆಲಭಾವ, ರಜೋಭಾವಗಳ ಸಿದ್ಧಿ ವಿಶೇಷ ಬರುವುದೂ ಹಾಗೆಯೇ ಹರಿದು ಬೀಸಿ ಹೊರಟುಹೋಗುವುದು ಗಮನಾರ್ಹ. ಅತಿಥಿಯೂ ಅನಿರೀಕ್ಷಿತವಾಗಿ ಆಗಮಿಸಿ ಮತ್ತೆ ಬಹುಕಾಲ ನಿಲ್ಲದೆ ಹೊರಡುವವನು. ಆದರೆ ಬಂದಾಗಲೆಲ್ಲಾ ಹೊಸ ನಿಯಮ, ಹೊಸ ಸಲಹೆ ಹೊಸ ಚೈತನ್ಯ ಒದಗಿಸಲಾರದೆ ಹೊರಡನು. ಅತಿಥಿ ದೇವನಾದಾಗ ಇದು ನಿಜಕ್ಕೂ ಸಾಧ್ಯ. ಅನ್ಯ ವಿಕೃತಿಯ ಪರಿಗಳು ಬೇರೆ. ವಿಕೃತಿ ದುರದೃಷ್ಟದ ಫ‌ಲವಾಗಿರುತ್ತದೆ. 

ಗಮನಾರ್ಹವಾಗಿ ಅತಿಥಿಯ ಕೊಠಡಿಯಲ್ಲಿ ಚಿಕ್ಕ ಪುಟ್ಟ ಮರಮುಟ್ಟಿನ ಉಪಕರಣಗಳು ಟೇಬಲ್‌, ಕುರ್ಚಿ, ನೀರನ್ನು ಇರಿಸುವ ಸ್ಟೂಲು, ಚಿಕ್ಕ ಕಪಾಟುಗಳ ರೀತಿಯಲ್ಲಿ ವ್ಯವಸ್ಥೆಗೊಂಡಿರುತ್ತದೆ. ಅತಿಥಿಯ ರೂಮಿನ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳತ್ತ ಇವನ್ನು ಸ್ಥಾಯಿಗೊಳಿಸಬೇಕು. ಮಲಗುವ ಮಂಚ ಅತಿಥಿಯ ಶಿರೋಭಾಗ ಪಶ್ಚಿಮದತ್ತ. ವಿಶ್ರಾಂತಿಯ ಸಂದರ್ಭದಲ್ಲಿ ಬಳಕೆಯಾಗುವಂತೆ ಇದ್ದರೆ ಒಳಿತು. ಅತಿಥಿ ಎಂದೂ ಖಾಯಂ ಆದ ಗೃಹ ಸದಸ್ಯನಲ್ಲ. (ಉಳಿಯುವ ವಿಚಾರದಲ್ಲಿ ಹೃದಯದಲ್ಲಿ ಸದಾ ಇರುತ್ತಾನೆ. ಏಕೆಂದರೆ ಅವನೂ ದೇವನಾಗಿದ್ದಾನೆ) ಬಾಗಿಲಿನ ಭಾಗ ಕಿಟಕಿಯ ಭಾಗಗಳು ಅತಿಥಿಗೆ ಅಡ್ಡಿಯಾಗದ ಹಾಗೆ ಪರಿಣಾಮಕಾರಿಯಾಗಿ ಮಲಗುವ ಮಂಚ ಪೂರ್ಣ ದಕ್ಷಿಣದ ಆಯ್ಕೆಯಾಗಿ ಉತ್ತರಕ್ಕೆ ತಲೆ ಹಾಕಬಾರದು. ಇದ್ದರೂ ಸ್ವಾಗತಾರ್ಹವೇ. ಅಪಚಾರ ಏನೂ ಇಲ್ಲ ಎಂಬುದನ್ನೂ ಗಮನಿಸಿ.

ಅನಪೇಕ್ಷಿತ ದೀಪಗಳ ವ್ಯವಸ್ಥೆ
ವಿದ್ಯುತ್‌ ಉಪಕರಣಗಳ ವ್ಯವಸ್ಥೆ ಬೇಡ. ಅತಿಥಿಗೆ ತೀವ್ರವಾದ ಬೆಳಕು ವಿದ್ಯುತ್‌ ಉಪಕರಣಗಳ ಅನಾವಶ್ಯಕ ಕಿರಿಕಿರಿಯ ಅವಶ್ಯಕತೆ ಇಲ್ಲ. ಹೀಗಾಗಿ ಅಥಿತಿಯ ವಿಶ್ರಾಂತಿಗೆ ಅತಿಥಿ ಗೃಹ ಪ್ರಧಾನವಾದ ಗಮನವನ್ನು ಕೊಡುವಂತಾಗಲಿ. ಅಥಿತಿ ಕೋಣೆಯಲ್ಲಿ ಕನ್ನಡಿಯ ವ್ಯವಸ್ಥೆ ವೈವಿಧ್ಯಮಯವಾದ ವಿನ್ಯಾಸಗಳಿಂದ ತುಂಬಿರಲೇ ಬಾರದು. ಅದು ಅತಿಥಿತಿಯ ಮೂಲಕವಾಗಿ ಒಂದು ಆತಂಕದ ಅಲೆಯನ್ನು ಮನೆಯಲ್ಲಿ ಸೃಷ್ಟಿಸಿಬಿಡುತ್ತದೆ. ಕನ್ನಡಿಯ ವಿಚಾರವು ಯಾವಾಗಲೂ ತನ್ನ ಪಾತಳಿಗೆ ಬಂದಿದ್ದನ್ನು ತೂರಿಬಿಡುವುದು. ಈ ವಿಚಾರವನ್ನು ತುಂಬಾ ವಿಶದವಾಗಿ ಇನ್ನೊಮ್ಮೆ ಚರ್ಚಿಸೋಣ..

 ಹಾಂ! ಅತಿಥಿ ಕೋಣೆಯನ್ನು ಬಹುಕಾಲ ಖಾಲಿ ಇಡಬಾರದು. ಅತಿಥಿಯ ಮೂಲಕ ಬಳಕೆಯಾಗಿದ್ದಲ್ಲಿ ಕೋಣೆಯಲ್ಲಿ ತಾಜಾ ಹೂವುಗಳನ್ನು ಇಡುವುದು ಸೂಕ್ತ. ಕಿಟಕಿಗಳನ್ನು ತೆರೆದಿಡುವುದು ಮತ್ತೆ ಮುಚ್ಚಿಡುವುದು ಆಗಬೇಕು. ನಿರಭ್ರವಾದ ಶುಭ್ರ ಗಾಳಿ, ಬೆಳಕು ಈ ಕೋಣೆಯಲ್ಲಿ ಆಸ್ತಿತ್ವವನ್ನು ಕಂಡುಕೊಳ್ಳಬೇಕು.

- ಅನಂತಶಾಸ್ತ್ರಿ


Trending videos

Back to Top