CONNECT WITH US  

ನಡುಗುವ ಮನೆಗೆ ವಿಮೆ

ಕೊಡಗು, ಮಡಿಕೇರಿ, ಕೇರಳಗಳಲ್ಲಿ ಭೂಮಿ ಬಾಯಿ ಬಿಟ್ಟಿದೆ. ಮನೆ, ಮಠ ಎಲ್ಲವೂ ನೀರ ಪಾಲಾಗಿದೆ. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಜ್ಞಾಪಕ ಬರುವುದು ವಿಮೆ. ಅದರಲ್ಲೂ ಈಗ ನಿರಾಶ್ರಿತರಾಗಿರುವ ಎಲ್ಲರಿಗೂ ಮನೆ ವಿಮೆ ಇದ್ದಿದ್ದರೆ ಹೇಗಿರುತ್ತಿತ್ತು? ಬನ್ನಿ ಈ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ.

ವಿಮೆಯಲ್ಲಿ ಎಷ್ಟು ವಿಧ?
ಯಾವುದೇ ಬಗೆಯ ತೊಂದರೆ ಎದುರಾಗಲಿ, ಆಗೆಲ್ಲಾ ಮನುಷ್ಯ ಇನ್ಶೂರೆನ್ಸ್ಮಾಡಿÕದೀನಿ. ಹೇಗೆ ಬಚಾವಾಗಬಹುದು ಅಂದುಕೊಳ್ಳುತ್ತಾನೆ. ಮಕ್ಕಳ ಮದುವೆ ಸಂದರ್ಭಕ್ಕೆ, ನಿವೃತ್ತಿ ನಂತರದ ಬದುಕಿಗೆ, ಆಸ್ಪತ್ರೆ ಖರ್ಚಿಗೆ ವಿಮೆ ಇರುವಂತೆಯೇ ಮನೆಗೂ ಇದೆ. ಹೋಂ ಇನ್ಶೂರೆನ್ಸ್ ಎಂದೇ ಹೆಸರಾಗಿರುವ ಈ ವಿಮೆಯಲ್ಲಿ ಮೂರು ವಿಧಗಳಿವೆ.  
1) ಬರೀ ಕಟ್ಟಡಕ್ಕೆ ಅಥವಾ 
2) ಕಟ್ಟಡ ಹಾಗೂ ಮನೆಯೊಳಗಿನ ಸಾಮಾನುಗಳನ್ನು ಒಳಗೊಂಡಂತೆ ವಿಮೆ ಪಡೆಯಬಹುದು 
3) ಮನೆಯೊಳಗಿನ ಬೆಲೆಬಾಳುವ ಸಾಮಗ್ರಿಗಳಿಗೆ ಮಾತ್ರ ವಿಮೆ ಮಾಡಿಸಬಹುದು. 
ಒಂದು ಪಕ್ಷ ನೀವು ಸಾಲ ಮಾಡಿ ಮನೆ ಕಟ್ಟಿದಲ್ಲಿ ನಿಮಗೆ ಸಾಲಕೊಟ್ಟ ಬ್ಯಾಂಕು ವಿಮೆ ಮಾಡಿಸಿರುತ್ತದೆ. ಆಗ ಮನೆಯೊಳಗಿನ ಸಾಮಗ್ರಿಗಳಿಗೆ ಮಾತ್ರ ನೀವು ವಿಮೆ ಮಾಡಿಸಿದರೆ ಸಾಕು. ಮನೆಯೊಳಗಿನ ಬೆಲೆ ಬಾಳುವ ವಸ್ತುಗಳು ಎಂದರೆ ಅದರ ವಿವರವನ್ನು ವಿಮಾ ಕಂಪನಿಗೆ ನೀಡುವ ಅವಶ್ಯಕತೆಯಿಲ್ಲ. ನಿಮ್ಮ ಮನೆಯಲ್ಲಿರುವ ವಸ್ತುಗಳ ಬೆಲೆಗಳನ್ನು ನೀವೇ ನಿರ್ಧರಿಸಿ ಅಷ್ಟು ಮೊತ್ತಕ್ಕೆ ವಿಮೆ ಪಡೆದರಾಯಿತು.

ಗೊತ್ತಿರಲಿ; ನಿಮ್ಮ ಮನೆಗೆ ಐವತ್ತು ವರ್ಷ ಆಯಸ್ಸು ಆಗಿದ್ದರೆ ವಿಮೆ ಸಿಗುವುದಿಲ್ಲ. 

ಬಾಡಿಗೆ ಮನೆಯಲ್ಲಿದ್ದರೆ ?
ಖಂಡಿತ ವಿಮೆ ಇದೆ. ಆದರೆ ಕಟ್ಟಡಕ್ಕೆ ವಿಮೆ ಸಿಗುವುದಿಲ್ಲ. ಆದರೆ,  ಆಕಸ್ಮಿಕ, ಅವಘಡಗಳು ಸಂಭವಿಸಿ, ಅದರಿಂದ ಉಪಕರಣಗಳು,ಆಭರಣಗಳು,ಫ‌ರ್ನಿಚರ್‌ಗಳು ಹಾನಿಗೀಡಾಗಬಹುದು. ಇವಕ್ಕೆ ವಿಮೆ ಮಾಡಿಸಿಕೊಳ್ಳಬಹುದು. 

ಯಾವುದಕ್ಕೆ ವಿಮೆ?
ವಾಸದ ಮನೆಗಳಿಗೆ ಮಾತ್ರ ಇದು ಲಭ್ಯ. ಒಂದೊಮ್ಮೆ ಅಂಗಡಿಮುಂಗಟ್ಟುಗಳಿಗೆ ಕಟ್ಟಡ ಬಳಸಿಕೊಂಡಲ್ಲಿ ಆಗ ಅದಕ್ಕೆ ಉದ್ದಿಮೆದಾರ ವಿಮಾ ಪಾಲಿಸಿ ಪಡೆಯಬಹುದು. ಇದನ್ನು ಹೊರತುಪಡಿಸಿ ಬೆಂಕಿ,ಸಿಡಿಲು,ನ್ಪೋಟ,ವಿಮಾನ ಪತನದಿಂದಾದ ಹಾನಿ,ದೊಂಬಿ,ಗಲಾಟೆ, ವಿದ್ವಂಸಕ ಕೃತ್ಯ, ಬಿರುಗಾಳಿ, ಸೈಕ್ಲೋನ್‌,ನೆರೆಹಾವಳಿ,ಭೂಕಂಪ ಮತ್ತು ಕಳ್ಳತನಗಳಿಂದ ಆದ ಹಾನಿಗೆ ಈ ವಿಮೆ ಅನ್ವಯಿಸುತ್ತದೆ. 

ವಿಮೆ ಮೊತ್ತ ನಿರ್ಧರಿಸುವುದು ಹೇಗೆ?
ಮನೆ ಎಷ್ಟು ವಿಸ್ತೀರ್ಣವಿದೆ ಹಾಗೂ ಅದನ್ನು ಕಟ್ಟಲು ಪ್ರಸ್ತುತ ತಗಲುವ ವೆಚ್ಚ ಎಷ್ಟು ಎನ್ನುವುದರ ಆಧಾರದ ಮೇಲೆ ವಿಮೆ ನಿಗದಿಯಾಗುತ್ತದೆ. ಒಂದು ಪಕ್ಷ ಬಿಲ್ಡಿಂಗ್‌ ಹಳೆಯದಾಗಿದ್ದರೆ  ಸವಕಳಿ ಕಳೆದು ಅದರ ವ್ಯಾಲ್ಯೂ ನಿರ್ಧರಿಸಲಾಗುತ್ತದೆ. 
 
ಯಾವುದಕ್ಕೆ ವಿಮೆ ಅನ್ವಯಿಸುವುದಿಲ್ಲ?
ಅಕ್ರಮವಾಗಿ ಸಂಪಾದಿಸಿದ ವಸ್ತುಗಳು, ದಾಖಲೆಗಳು, ವಾಹನಗಳು, ಶೇರು ಪತ್ರಗಳು, ಹಣ, ಸಾಕು ಪ್ರಾಣಿಗಳು, ಬಂಗಾರದ ಗಟ್ಟಿ ಇನ್ನಿತರೆ ದಾಖಲೆಗಳಿಗೆ ವಿಮೆ ಅನ್ವಯವಾಗುವುದಿಲ್ಲ. 30 ದಿನಕ್ಕಿಂತ ಹೆಚ್ಚು ಸಮಯ ಮನೆ ಬಾಗಿಲು ಹಾಕಿ ಹೋಗಿದ್ದರೆ, ಆಗ ಕಳ್ಳತನವಾದಲ್ಲಿ ಆಗಲೂ ವಿಮೆ ಅನ್ವಯಿಸುವುದಿಲ್ಲ. 

ಈ ವಿಮೆ ವಾಸಯೋಗ್ಯಕ್ಕೆ ಮಾತ್ರ. ಅದರಲ್ಲಿ ವಾಣಿಜ್ಯ ಚಟುವಟಿಕೆ ಮಾಡಿದರೆ ಆ ಭಾಗ ವಿಮೆ ವ್ಯಾಪ್ತಿಗೆ ಬರುವುದಿಲ್ಲ. 
ವಿಮೆ ಇರುವಾಗಲೇ ಮನೆ ಮಾರಾಟ ಮಾಡಿದರೆ?

ಮನೆ ವಿಮೆಯ ಅವಧಿ ಒಂದು ವರ್ಷದಿಂದ ಐವತ್ತು ವರ್ಷಗಳವರೆಗೆ ಇರುತ್ತದೆ. ಇದಕ್ಕಿಂತ ಹೆಚ್ಚು ಮೊತ್ತಕ್ಕೆ ಪಾಲಿಸಿ ಮಾಡಿಸಿದ್ದೇ ಆದರೆ ಪ್ರೀಮಿಯಂನಲ್ಲಿ ರಿಯಾಯಿತಿ ಕೂಡ ಸಿಗಬಹುದು. ಮೊತ್ತ ಹೆಚ್ಚಾಗಲೂ ಬಹುದು. ವಿಮೆ ಪಡೆದ ಮನೆ ಮಾರಾಟ ಮಾಡಿದಲ್ಲಿ ಇನ್ನುಳಿದ ಅವಧಿಯ ವಿಮಾ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ. ಅಥವಾ ವಿಮೆಯು ನಿಮಗೆ ಅವಶ್ಯವಿಲ್ಲವೆಂದು ಯಾವಾಗ ಬೇಕಿದ್ದರೂ ಕಟ್ಟಿರುವ ಮುಂದಿನ ಪ್ರೀಮಿಯಂ ಹಣವನ್ನು ವಾಪಸ್ಸು ಪಡೆಯಬಹುದು.

- ಆರ್‌.ಕೆ. 

Trending videos

Back to Top