ಹಣ ಉಳಿಸುವ ಅವಕಾಶ ಎಲ್ಲರಿಗೂ ಇದೆ !

Team Udayavani, Nov 12, 2018, 4:00 AM IST

hana-ulisuva.jpg

ಚಿನ್ನ ಕೊಡಿಸಿ, ಒಡವೆ ಕೊಡಿಸಿ, ಹೆಚ್ಚುವರಿ ದುಡ್ಡು ಕೊಡಿ, ತಿಂಗಳು ತಿಂಗಳೂ ಪಾಕೆಟ್‌ಮನಿ ಕೊಡಿ ಎಂದೇನೂ ಪೀಡಿಸದೆ, ಮನೆ ಖರ್ಚಿಗೆಂದು ನೀಡಿದ ಹಣದಲ್ಲೇ ಉಳಿತಾಯ ಮಾಡಿದ ಹೆಂಡತಿಯ ಬಗ್ಗೆ ಸರಸ್ವತಿಯ ಗಂಡನಿಗೆ ಅಭಿಮಾನ ಉಂಟಾಯಿತು. ತುಂಬಾ ಒಳ್ಳೇ ಕೆಲಸ ಮಾಡಿದೀಯ. ನಿನ್ನ ಹತ್ರ ಇದೆಯಲ್ಲ: ಅದಕ್ಕೆ ನಾನೇ ಐದು ಸಾವಿರ ಸೇರಿಸಿಕೊಡುತ್ತೇನೆ. ಏನು ಬೇಕಾದ್ರೂ ತಗೋ… 

ಈ ಓಲೆಗೆ 75 ಸಾವಿರ ಆಯ್ತು. ಐದು ವರ್ಷದಿಂದ ಪೋಸ್ಟ್‌ ಆಫೀಸಿನಲ್ಲಿ ಆರ್‌.ಡಿ. ಕಟಾ¤ ಇದೆ. ಹೆಚ್ಚೇನಲ್ಲ, ತಿಂಗಳಿಗೆ ಒಂದು ಸಾವಿರ. ಒಂದು ವರ್ಷಕ್ಕೆ 12 ಸಾವಿರ ಆಗ್ತಿತ್ತು. ಪೂರ್ತಿ ಐದು ವರ್ಷ ಕಟ್ಟಿದ್ನ..? ಒಟ್ಟು 60 ಸಾವಿರ ಆಯ್ತು. ಅದಕ್ಕೆ  8 ಸಾವಿರ ಬಡ್ಡಿ ಸಿಕು¤. 68 ಸಾವಿರ ಆಯ್ತಲ್ಲ, ಅದಕ್ಕೆ ಅದಕ್ಕೆ 7 ಸಾವಿರ ಸೇರಿಸಿ ಓಲೆ ತಗೊಂಡೆ. ಇದೆಲ್ಲಾ, ಪೈಸೆಗೆ ಪೈಸೆ ಸೇರಿಸಿ ಸಂಪಾದಿಸಿದ ಹಣ.

ಯಜಮಾನರು ಮನೆ ಖರ್ಚಿಗೆ ಅಂತ ಕೊಡ್ತಾ ಇರ್ತಾರಲ್ಲ? ಅದರಲ್ಲೇ ಜಿಪುಣತನ ಮಾಡಿ ಉಳಿಸಿದ ಹಣ… ಸರಸ್ವತಿ ಹೀಗಂದಾಗ ನೆರೆಹೊರೆಯವರೆಲ್ಲ  ಒಂದರೆ ಕ್ಷಣ ಬೆರಗಾದದ್ದು ನಿಜ. ಕೆಲವರಂತೂ, ಪೈಸೆ ಪೈಸೆ ಜೋಡಿಸಿದೆ ಅನ್ನುವ ಮಾತ್ತೆನೋ ನಿಜವಿರಬಹುದು. ಹಾಗಂತ, ಐದು ವರ್ಷಕ್ಕೆ 75 ಸಾವಿರ ಕೂಡಿಸಲು ಸಾಧ್ಯವಾ ಎಂದು ಪದೇ ಪದೆ ಪ್ರಶ್ನಿಸಿದ್ದೂ ಉಂಟು.

ಒಂದು ಮಾತು  ನೆನಪಲ್ಲಿರಲಿ:  ಹಣ ಉಳಿಸಬೇಕು. ಹಾಗೆ ಉಳಿಸಿದ ಹಣದಿಂದ ಏನಾದರೂ ಖರೀದಿಸಬೇಕು ಎಂಬ ಗಟ್ಟಿ ನಿರ್ಧಾರ ಮನಸ್ಸಿಗೆ ಬಂದುಬಿಟ್ಟರೆ, ಉಳಿತಾಯ ಮಾಡುವುದಕ್ಕೂ ಹಲವು ದಾರಿಗಳು ಗೋಚರಿಸುತ್ತವೆ.. ಸತ್ಯ ಸಂಗತಿ ಏನು ಗೊತ್ತೆ..? ಉಳಿತಾಯ ಮಾಡಬೇಕು. ಹಾಗೆ ಉಳಿಸಿದ ಹಣದಿಂದ ಉಂಗುರ, ಸರ, ರೇಷ್ಮೆ ಸೀರೆ ಅಥವಾ ದೊಡ್ಡ ಟಿ.ವಿ.. ಹೀಗೆ ಏನನ್ನಾದರೂ ಖರೀದಿಸಬೇಕು ಎಂದು ಯೋಚಿಸುವ ಹೆಂಗಸರು ಪ್ರತಿಯೊಂದು ಮನೆಯಲ್ಲೂ ಇರುತ್ತಾರೆ.

ಆದರೆ ಉಳಿತಾಯ ಮಾಡಲು ಹಣವೇ ಉಳಿಯಲಿಲ್ಲ  ಎಂದೋ, ಯಜಮಾನರು ಹೆಚ್ಚು ಹಣ ಕೊಡಲಿಲ್ಲ ಎಂದೋ ಎಲ್ಲರೂ ದೂರು ಹೇಳುತ್ತಾರೆ. ವಾಸ್ತವ ಹೀಗಿದ್ದರೂ, ಮಧ್ಯಮ ವರ್ಗದ ಗೃಹಿಣಿಯಾಗಿರುವ ಸರಸ್ವತಿ, ಪ್ರತಿ ತಿಂಗಳೂ ಪೋಸ್ಟ್‌ ಆಫೀಸಿನಲ್ಲಿ ಆರ್‌.ಡಿ. ಕಟ್ಟಲು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಸರಸ್ವತಿ, ವಾರಕ್ಕೆ ಮೂರು ಬಾರಿ ತರಕಾರಿ ಖರೀದಿಯ, ದಿನಸಿ ಸಾಮಾನು ತರುವ ನೆಪದಲ್ಲಿ ಅಂಗಡಿಗೆ ಹೋಗುತ್ತಾಳೆ.

ಹೀಗೆ ಹೋದಾಗಲೆಲ್ಲ, ಮಕ್ಕಳೊಂದಿಗೆ ಹೊಟ್ಟೆ ಬಿರಿಯುವಂತೆ ಐಸ್‌ಕ್ರೀಂ, ಚಾಟ್ಸ್‌, ಬೇಕರಿ ಉತ್ಪನ್ನಗಳನ್ನು ತಿನ್ನುವುದು ಆಕೆಗೆ ಅಭ್ಯಾಸವೇ ಆಗಿಹೋಗಿತ್ತು. ಕೆಲವೊಮ್ಮ ಬೇಕರಿಗೆ ಕೊಡುತ್ತಿದ್ದ ಹಣವೇ ವಾರಕ್ಕೆ 300 ರುಪಾಯಿ ಆಗುತ್ತಿತ್ತು. ಹೀಗೆ, ಪ್ರತಿವಾರವೂ ಹಣ ಖರ್ಚುಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಅದೇ ಹಣವನ್ನು ಉಳಿತಾಯ ಮಾಡಿದರೆ ಹೇಗೆ ಎಂದು  ಸರಸ್ವತಿ ಯೋಚಿಸಿದಳು.

ಹಾಗಂತ ಆಕೆ ಬೇಕರಿಗೆ ಹೋಗುವುದನ್ನು ನಿಲ್ಲಿಸಿಬಿಡಲಿಲ್ಲ. ಪ್ರತಿವಾರ ಹೋಗುವ ಬದಲು 15ದಿನಕ್ಕೊಮ್ಮ ಹೋಗುವುದನ್ನು ಅಭ್ಯಾಸ ಮಾಡಿಕೊಂಡಳು. ಬೇಕರಿ ತಿನಿಸಿನಿಂದ ಆರೋಗ್ಯ ಕೆಡುತ್ತೆ. ಹಾಗಾಗಿ ಅದನ್ನು ಅವಾಯ್ಡ ಮಾಡೋಣ ಎಂದು ಮಕ್ಕಳಿಗೂ ವಿವರಿಸಿ ಹೇಳಿದಳು. ಪರಿಣಾಮ, ಒಂದು  ತಿಂಗಳಿಗೆ 500 ರುಪಾಯಿ ಉಳಿತಾಯವಾಯಿತು!

ಇನ್ನು ತರಕಾರಿ, ದಿನಸಿ ಪದಾರ್ಥ ತರುವ ಸಂದರ್ಭದಲ್ಲಿ  500 ರುಪಾಯಿ ಉಳಿಸುವುದು ಸರಸ್ವತಿಗೆ ಕಷ್ಟವಾಗಲಿಲ್ಲ.  ಅಡುಗೆಗೆ ವಿಪರೀತ ಎಣ್ಣೆ ಬಳಸ್ತಾ ಇದೀಯ. ಕಡಿಮೆ ಎಣ್ಣೆ  ಬಳಸಿ ಎಂದು ಡಾಕ್ಟರೇ ಹೇಳಿದ್ದಾರಲ್ಲ ಎಂದು ಅದೊಮ್ಮೆ ಸರಸ್ವತಿಯ ಗಂಡನೇ ಆಕ್ಷೇಪದ ದನಿಯಲ್ಲಿ ಹೇಳಿದ.  ಅಂದಿನಿಂದ, ಅಡುಗೆಗೆ ಬಳಸುವ ಎಣ್ಣೆಯ ಪ್ರಮಾಣವನ್ನು ಒಂದು ಪ್ಯಾಕ್‌ ಕಡಿಮೆ ಮಾಡಲಾಯಿತು. ಇದರಿಂದ ಭರ್ತಿ ನೂರು ರುಪಾಯಿ ಸರಸ್ವತಿಯ ಕೈಸೇರಿತ್ತು.

ಹೀಗೆ, ಒಂದೊಂದೇ ಚಿಕ್ಕ ಮೊತ್ತ ಜೊತೆಯಾದಾಗ, ಅದನ್ನೆಲ್ಲ ಒಟ್ಟು ಸೇರಿಸಿ ಪೋಸ್ಟ್‌ ಆಫೀಸಿನಲ್ಲಿ ಆರ್‌.ಡಿ.ಖಾತೆಗೆ ಹಾಕಿದಳು ಸರಸ್ವತಿ. ಗೃಹಿಣಿಯ ಪಟ್ಟ ಅವಳಿಗೆ ಶಾಶ್ವತವಾಗಿ ಇದ್ದುದರಿಂದ, ತರಕಾರಿ ತರುವ, ದಿನಸಿ ಖರೀದಿಸುವ ಕೆಲಸವೂ ಅವಳದ್ದೇ ಆಗಿದ್ದರಿಂದ, ಯಾವುದೇ ತೊಂದರೆಯಿಲ್ಲದೆ ಪ್ರತಿ ತಿಂಗಳೂ ಒಂದೊಂದು ಸಾವಿರ ರುಪಾಯಿ ಅವಳ ಕೈ ಸೇರತೊಡಗಿತು.

ಐದು ವರ್ಷ ತುಂಬುವವರೆಗೂ ಯಾವುದೇ ಗುಟ್ಟಬಿಡದಿದ್ದ ಆಕೆ, ಆರ್‌.ಡಿ. ಖಾತೆಯ ಕಡೆಯ ಕಂತನ್ನೂ  ತುಂಬಿದ ನಂತರ, ಗಂಡನಿಗೆ ವಿಷಯ ತಿಳಿಸಿದಳು. “ಇದೆಲ್ಲಾ ನಾನೇ ಉಳಿಸಿದ ಹಣವಾದ್ದರಿಂದ ನನಗಿಷ್ಟವಾದ ವಸ್ತು ತಗೊಳೆ¤àನೆ’ ಅಂದಳು. ಚಿನ್ನ ಕೊಡಿಸಿ, ಒಡವೆ ಕೊಡಿಸಿ, ಹೆಚ್ಚುವರಿ ದುಡ್ಡು ಕೊಡಿ, ತಿಂಗಳು ತಿಂಗಳೂ ಪಾಕೆಟ್‌ಮನಿ ಕೊಡಿ ಎಂದೇನೂ ಪೀಡಿಸದೆ, ಮನೆ ಖರ್ಚಿಗೆಂದು ನೀಡಿದ ಹಣದಲ್ಲೇ ಉಳಿತಾಯ ಮಾಡಿದ ಹೆಂಡತಿಯ ಬಗ್ಗೆ ಸರಸ್ವತಿಯ ಗಂಡನಿಗೆ ಅಭಿಮಾನ ಉಂಟಾಯಿತು. ತುಂಬಾ ಒಳ್ಳೇ ಕೆಲಸ ಮಾಡಿದೀಯ.

ನಿನ್ನ ಹತ್ರ ಇದೆಯಲ್ಲ: ಅದಕ್ಕೆ ನಾನೇ ಐದು ಸಾವಿರ ಸೇರಿಸಿಕೊಡುತ್ತೇನೆ. ಏನು ಬೇಕಾದ್ರೂ ತಗೋ… ಅಷ್ಟೇ ಅಲ್ಲ, ಮುಂದಿನ ತಿಂಗಳಿಂದ ಮನೆ ಖರ್ಚಿಗೆ ಇನ್ನೂ ಒಂದ್ಸಾವಿರ ಜಾಸ್ತಿ ದುಡ್ಡು ಕೊಡ್ತೇನೆ. ಹೊಸದೊಂದು ಆರ್‌.ಡಿ. ಹಾಕು ಎಂದು ಅವನು  ಪ್ರೋತ್ಸಾಹದ ಮಾತುಗಳನ್ನಾಡಿದ. ಸರಸ್ವತಿಯಂತೆಯೇ ಹಣ ಉಳಿಸುವ ಮತ್ತು ಗಳಿಸುವ  ಅವಕಾಶ  ಎಲ್ಲ ಗೃಹಿಣಿಯರಿಗೂ ಇದೆ. ಅವರೆಲ್ಲ  ಮನೆ ಖರ್ಚಿಗೆ ಕೊಡ್ತಾ ಇರುವ ಹಣ ಸಾಕಾಗ್ತಿಲ್ಲ ಎಂದು ದೂರುವುದನ್ನು ಬಿಟ್ಟು, ಉಳಿತಾಯ ಮಾಡಲು ಇರುವ ದಾರಿಗಳತ್ತ ತಿರುಗಿ ನೋಡಬೇಕಷ್ಟೆ……

* “ಹಣ’ಮೇಶ್

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.