CONNECT WITH US  

ಜಾತಕ ಫ‌ಲ 

ಶೂರ್‌ಸಿಂಗ್‌, ಮೈಸೂರು
 ಸ್ವಾಮಿ, ನನ್ನ ಮತ್ತು ಪತ್ನಿಯ ಜಾತಕಗಳನ್ನು ಕಳುಹಿಸುತ್ತಿದ್ದೇನೆ. ನಮ್ಮದು ಒಂದು ಬಟ್ಟೆಯ ವ್ಯಾಪಾರ ಇದೆ. ಪರವಾಗಿಲ್ಲ. ಮನೆಯಲ್ಲಿಯೇ ನಡೆಸುತ್ತಿದ್ದೇವೆ. ಒಂದು ಹೊಸ ಕಾಲದ ರೀತಿ ನೀತಿಗೆ ಒಪ್ಪುವ ರೀತಿಯಲ್ಲಿ ಬಟ್ಟೆಯ ಶೋರೂಮ್‌ ತೆರೆಯಬೇಕೆಂದಿದ್ದೇವೆ. ಮಕ್ಕಳು ಚಿಕ್ಕವರು. ಸರಿಯಾಗಿ ಓದುತ್ತಿಲ್ಲದ ಮಗ. ಮಾತು ಕೇಳುವುದಿಲ್ಲ. ಮಗಳು ಪರವಾಗಿಲ್ಲ. ಭವಿಷ್ಯ ಹೇಗಿದೆ? ಒಳ್ಳೆಯದಾದೀತೇ?
  ಮಕ್ಕಳ ಜಾತಕಗಳನ್ನು ನೀವು ಕಳುಹಿಸಿಲ್ಲ. ನಿಮ್ಮಗಳ ಜಾತಕಗಳನ್ನು ಗಮನಿಸಿದಾಗ ಮಕ್ಕಳ ವಿಚಾರದಲ್ಲಿ ಕೆಲವು ವಿಚಾರಗಳನ್ನು ನೀವು ಗ್ರಹಿಸಲೇ ಬೇಕಾಗಿದೆ. ಆರೋಗ್ಯ ಹಾಗೂ ಮನೋ ವೈಜ್ಞಾನಿಕ ತಳಹದಿಯ ಮೇಲೆ ಮಕ್ಕಳನ್ನು ನಿಯಂತ್ರಿಸುವ ಕೆಲಸ ಮುಖ್ಯವಾಗಬೇಕು. ರಾಹು ಹಾಗೂ ಕುಜ ಗ್ರಹಗಳು, ಕೆಲ ಮಟ್ಟಿಗೆ ಕೇತು ಹಾಗೂ ಶನಿ ಗ್ರಹಗಳು ದುರ್ಬಲತೆ ಪಡೆದಿದೆ. ಶೋರೂಮಿಗಾಗಿ ಧನ ವ್ಯಯ ಮಾಡಿ ವ್ಯಾಪರವನ್ನು ಗಟ್ಟಿಗೊಳಿಸಿಕೊಳ್ಳುವ ವಿಚಾರಕ್ಕೆ ಅವಸರ ಬೇಡ. ನವಗ್ರಹ ಪೀಡಾ ನಿವಾರಣಾ ಸ್ತೋತ್ರ 3 ತಿಂಗಳು (ಪ್ರತಿ ದಿನ 7ಆವರ್ತಗಳಂತೆ) ಓದಿ. ಕೆಲವು ವಿಚಾರಗಳು ನಿಮಗೆ ಪ್ರೇರಣಾ ಸ್ವರೂಪದಲ್ಲಿ ದಕ್ಕಲಿದೆ. ಗಡಿಬಿಡಿಯನ್ನು ಮಾತ್ರ ಕೈ ಬಿಡಿ. ಎತ್ತಿಹಿಡಿಯುವ ಗ್ರಹಗಳಿದ್ದರೂ ಎಚ್ಚರಿಕೆ ಬೇಕು. 

ಪಲ್ಲವಿ ಸುಜಯೀಂದ್ರ, ಹಾವೇರಿ
 ನನ್ನ ಮಗನಿಗೀಗ 33 ವರ್ಷ. ಅಮೇರಿಕಾದಲ್ಲಿದ್ದಾನೆ. ಮದುವೆ ಬೇಡ ಎಂದು ಮುಂದೂಡುತ್ತಿದ್ದಾನೆ. ಕಾಲಾನುಕ್ಕಾಲಕ್ಕೆ ಎಲ್ಲವೂ ಆದರೆ ಚೆನ್ನ? ಯಾಕೆ ವಿಳಂಬ? ಪರಿಹಾರ ಏನು?
 ನಿಮ್ಮ ಮಗನ ಜಾತಕ ಪರಿಶೀಲಿಸಲಾಗಿ ಮದುವೆಯಾಗುವುದಿಲ್ಲ ಎಂಬ ಜಾತಕವಲ್ಲ ಇದು. ಆದರೆ ನಾವು ತಿಳಿದಂತೆ ಜನರೆದುರು ತಾಳಿ ಕಟ್ಟಿ, ವಾಲಗ ಊದಿಸುವ ಕ್ರಿಯೆ ಎಂದರೇ ಮದುವೆ ಎಂದು ತಿಳಿಯದಿರಿ. ಹೆಣ್ಣಿನ ಸಂಪರ್ಕಕ್ಕೆ ಬಂದು ಕೊಂಡಿ ತಪ್ಪಿದೆ ಮಗನ ಜಾತಕದ ಪ್ರಕಾರ. ನೀವು ಎಷ್ಟು ಸೂಕ್ಷ್ಮವಾಗಿ ಇದನ್ನು ಅರಿಯಲು ಸಾಧ್ಯವಾಗುತ್ತೋ ಪ್ರಯತ್ನಿಸಿ ನೋಡಿ. ಬಾಳ ಸಂಗಾತಿಯ ವಿಚಾರದಲ್ಲಿ ತೊಡಕುಗಳಿವೆ. ಸ್ವಯಂವರ ಪಾರ್ವತಿ ಸಿದ್ಧಿ ಪಠಣ ಮಾಡಲಿ. ನಿಮ್ಮ ಮಗನ ವಿಚಾರದಲ್ಲಿ ಸಮಾಧಾನ ಹಾಗೂ ತಾತ್ವಿಕ ನೆಲೆಯಲ್ಲಿ ಪ್ರಯೋಗಶೀಲರಾಗಿ ವಿಶ್ಲೇಷಣೆ ನಡೆಸಿ. ಅವಸರಿಸಬೇಡಿ. 

 ಅನುಷ್ಕಾ, ಸ್ಯಾಂಡಿಯಾಗೋ, ಅಮೇರಿಕಾ
  ನಾನು ಕೈ ತುಂಬ ಸಂಬಳದ ಕೆಲಸದಲ್ಲಿದ್ದೇನೆ. ಅದೇನೋ ಏನೋ ಮ್ಯಾಥೊÂà ಎಂಬ ಹುಡುಗನೊಡನೆಸಂಪರ್ಕ ಬಂತು. ಮದುವೆಯೂ ಆದೆ. ಆದರೆ ಈತ ವಿಚಿತ್ರವಾದ ನಡವಳಿಕೆಯೊಂದಿಗೆ ಮುಜುಗರ ಹುಟ್ಟಿಸುತ್ತಾನೆ. ಲೈಂಗಿಕ ವಿಚಾರಗಳಲ್ಲಿ ವಿಪರೀತ ವಿಕ್ಷಿಪ್ತ. ನಾನು ಇವನ ಜೊತೆಗಿನ ಸಂಬಂಧದಿಂದ ಹೊರಬರುವ ರೀತಿ ಹೇಗೆ? ಸಲಹೆಗಳೇನು?
 ನೀವು ಅವಸರ ಮಾಡಿದ್ದೀರಿ. ನಿಮ್ಮ ಜಾತಕ ಕುಂಡಲಿಯ ಹಲವು ವಿಚಾರಗಳು ಬಹು ಚಿಕಿತ್ಸಕ ರೀತಿಯಲ್ಲಿ ವಿಶ್ಲೇಷಣೆಗೆ ಒಳಪಡಬೇಕಾಗುವ ರೀತಿಯದ್ದು. ನೀವ ಕೇಳಿದಷ್ಟೇ ಸಾಲುಗಳ ಪ್ರಶ್ನೆಯಲ್ಲಿ ಸಮಸ್ಯೆಗಳಿಲ್ಲ. ಇದನ್ನು ಮೀರಿ ಸಮಸ್ಯೆ ಹೆಡೆ ಎತ್ತಿದೆ? ಇಲ್ಲೀಗ ಉತ್ತರಿಸುವುದ ಶಿಷ್ಟತೆಯ ದೃಷ್ಟಿಯಿಂದ ಕಠಿಣವಾಗಿದೆ. ನ್ಯಾಯಾಲಯದ ಮೊರೆ ಹೋಗಬಹುದು. ನಿಮಗೆ ಜಯವಿದೆಯಾದರೂ ಪ್ರಸ್ತುತದ ಶನಿಕಾಟದಿಂದಾಗಿ ಶನೈಶ್ಚರನಿಗೆ ಶರಣಾಗಿ. ಮುಖ್ಯವಾಗಿ ರಾಹು ಗ್ರಹದ, ಶುಕ್ರಗ್ರಹದ ವಿಚಾರಗಳು ಜಿಣಕುಗಳನ್ನು ಹೊಂದಿರುವುದರಿಂದ ನಿಮ್ಮ ವಿಚಾರವನ್ನು ಸೂಕ್ತವಾಗಿ ಮಂಡಿಸುವ ಲಾಯರ್‌ ಸಿಕ್ಕಿದರೆ ಕೋರ್ಟಿನಲ್ಲಿ ಜಯ ಪಡೆಯಬಹುದು. ವೈವಾಹಿಕ ಜೀವನ ದಾರುಣವೇ ಎಚ್ಚರ ಇರಲಿ. 
 

ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ: Email: bahumukhi@manipalmedia.com

ಮೊ: 8147824707


Trending videos

Back to Top