CONNECT WITH US  

ಮೀನು ಗುಣಮಟ್ಟ  ಖಾತ್ರಿಗೆ ಕಾನೂನು

ತಿರುವನಂತಪುರದಲ್ಲಿ ನಡೆದ ಕೇರಳ ಸಚಿವ ಸಂಪುಟ ಸಭೆ ನಿರ್ಣಯ

ಕಾಸರಗೋಡು: ರಾಸಾಯನಿಕ ಮಿಶ್ರಿತ ಮೀನು ಮಾರಾಟ ವಿರುದ್ಧ ಕಠಿನ ಕ್ರಮಕ್ಕೆ ಕೇರಳ ಸರಕಾರ ಮುಂದಾಗಿದೆ. ಗುಣಮಟ್ಟ ಕಾಪಾಡಲು ಹರಾಜು, ಮಾರಾಟ ಕೇಂದ್ರಗಳನ್ನು ನಿಯಂತ್ರಿಸುವ ಕಾನೂನು ಜಾರಿಗೆ ತಿರುವನಂತಪುರದಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಈ ಕುರಿತು ಕರಡು ವಿಧೇಯಕಕ್ಕೆ ಸಂಪುಟ ಸಭೆ ಅಂಗೀಕಾರ ನೀಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ  ಫಾರ್ಮಲಿನ್‌ ಮಿಶ್ರಿತ ಮೀನು ಪತ್ತೆಯಾದ ಹಿನ್ನೆಲೆಯಲ್ಲಿ ನೂತನ ಕಾನೂನು ರೂಪಿಸಲು ಸರಕಾರ ಮುಂದಾಗಿದೆ. ಇದಲ್ಲದೆ ಮೀನು ಕಾರ್ಮಿಕರಿಗೆ ನ್ಯಾಯಬೆಲೆ ಖಾತರಿ ಪಡಿಸುವ ವ್ಯವಸ್ಥೆಗಳನ್ನು ಜಾರಿಗೆ ತರಲು ಕಾನೂನಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೀನು ಹಿಡಿದು ಮಾರಾಟ ಮಾಡುವವರಿಗೆ ಬೆಲೆ ನಿಗದಿಪಡಿಸಲು ಸಾಧ್ಯವಾಗುವ ರೀತಿಯಲ್ಲಿ ಕಾನೂನು ರೂಪಿಸಲಾಗುವುದು. ಮೀನುಗಾರಿಕಾ ಬಂದರು, ಜೆಟ್ಟಿ, ಮೀನು ಮಾರುಕಟ್ಟೆ ಮುಂತಾದೆಡೆಗಳಲ್ಲಿ ಮೀನು ಏಲಂ ಪಕ್ರಿಯೆಯ ಮೇಲೆ ಪ್ರಸ್ತುತ ಯಾವುದೇ ನಿಯಂತ್ರಣಗಳಿಲ್ಲ. ಆದುದರಿಂದ ಮೀನು ಕಾರ್ಮಿಕರಿಂದ ಮಧ್ಯವರ್ತಿಗಳಾದ ಹರಾಜುಗಾರರು ಭಾರೀ ಮೊತ್ತದ ಕಮಿಷನ್‌ ವಸೂಲಿ ಮಾಡುತ್ತಾರೆ. ಇದನ್ನು ಪರಿಹರಿಸಲು ಮೀನು ಹರಾಜು ಪ್ರಕ್ರಿಯೆಯನ್ನು ನಿಯಂತ್ರಿಸಲು ತೀರ್ಮಾನಿಸಲಾಗಿದೆ.

ಮೀನು ಏಲಂನಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿ ಸರಕಾರವು ನಿಯೋಜಿಸುವ ಅಧಿಕಾರಿಗಳಿಂದ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನುಮತಿ ಪತ್ರದಲ್ಲಿ ದಾಖಲಿಸಿದ ಸ್ಥಳದಲ್ಲಿ ಮಾತ್ರವೇ ಹರಾಜು ನಡೆಸಲು ಒಪ್ಪಿಗೆ ಇರಲಿದೆ.

ಜೆಟ್ಟಿಗಳ ನಿರ್ವಹಣೆ ಸಮಿತಿ
ಮೀನುಗಾರಿಕಾ ಜೆಟ್ಟಿಗಳ ನಿರ್ವಹಣೆಗೆ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷರು ಅಥವಾ ಪ್ರತಿನಿಧಿ ಅಧ್ಯಕ್ಷರಾಗಿರುವ ಆಡಳಿತ ಸಮಿತಿ ರೂಪಿಸಲಾಗುವುದು. ಅಧಿಕಾರಿಗಳು, ಜನಪ್ರತಿನಿಧಿಗಳು ಇದರಲ್ಲಿ ಸದಸ್ಯರಾಗಿರುವರು. ಮೀನುಗಾರಿಕಾ ಬಂದರುಗಳು ಮತ್ತು ಸಾರ್ವಜನಿಕರ ಮಾಲಕತ್ವದಲ್ಲಿರುವ ಮೀನು ಮಾರುಕಟ್ಟೆಗಳ ನಿರ್ವಹಣೆಗೂ ಆಡಳಿತ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

Trending videos

Back to Top