CONNECT WITH US  

ಟ್ಯಾಂಕರ್‌ ಬಾಕಿ ಬಿಲ್‌ ಪಾವತಿಗೆ ಒತ್ತಾಯ

ಕೋಲಾರ: ನಗರಸಭೆ ಸೂಚನೆಯಂತೆ ನಾಗರಿಕರಿಗೆ ನೀರು ಪೂರೈಕೆ ಮಾಡಿರುವ ಬಾಡಿಗೆ ಟ್ಯಾಂಕರ್‌ಗಳ 13 ತಿಂಗಳ ಬಾಕಿ ಬಿಲ್‌ ಕೂಡಲೇ ಪಾವತಿಸುವಂತೆ ಒತ್ತಾಯಿಸಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಾಂ ಧಿನಗರ ನಾರಾಯಣಸ್ವಾಮಿ ಮತ್ತಿತರರು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಗಾಂಧಿ ನಗರ ನಾರಾಯಣಸ್ವಾಮಿ, ಕೋಲಾರ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ನೀರಿಗೆ ಹಾಹಾಕಾರ ಎದುರಾಗಿತ್ತು.

ಆಗ ಜಿಲ್ಲಾಡಳಿತ, ನಗರಸಭೆ ಜಂಟಿಯಾಗಿ ಖಾಸಗಿ ಟ್ಯಾಂಕರ್‌ಗಳಿಂದ ನೀರಿನ ಸೌಲಭ್ಯ ಪಡೆದುಕೊಂಡಿದ್ದರು. 13 ತಿಂಗಳು ಟ್ಯಾಂಕರ್‌ಗಳಿಂದ ನೀರು ಪೂರೈಸಿರುವ ಟ್ಯಾಂಕರ್‌ ಮಾಲಿಕರು  ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಲ್ಲದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹೇಳಿದರು.

ನಗರಸಭೆ ಆಡಳಿತ ಟ್ಯಾಂಕರ್‌ ಮಾಲಿಕರಿಂದ ಬಿರು ಬೇಸಿಗೆಯಲ್ಲಿ ನಾಗರಿಕರಿಗೆ ನೀರು ಪೂರೈಸಿ ಇದೀಗ ನಮಗೆ ಹಣ ಪಾವತಿಸದ ಕಾರಣ ಸಾಕಷ್ಟು ತೊಂದರೆಯಾಗಿದೆ. ನಗರಸಭೆ ತಾಂತ್ರಿಕ ಇಲಾಖೆಯ ಕೆಲವು ಅಧಿ ಕಾರಿಗಳು ವರ್ಗಾವಣೆಯಾಗಿರುವುದರಿಂದ ಈಗಿರುವ ಅ ಧಿಕಾರಿಗಳಿಗೆ ಕೂಡಲೇ ನೀರಿನ ಬಿಲ್‌ ಪಾವತಿಸಲು ಸೂಚನೆ ನೀಡಬೇಕೆಂದು ಮನವಿ ಮಾಡಿದರು. 

ಸಚಿವರು ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಧಿಕಾರಿ ಜೆ.ಮಂಜುನಾಥ್‌ರಿಗೆ ಸೂಚಿಸಿದರು. ಈ ವೇಳೆ ನಗರಸಭೆ ಸದಸ್ಯರಾದ ವೆಂಕಟೇಶಪತಿ, ನದೀಂ, ಅಸ್ಲಂ, ಟ್ಯಾಂಕರ್‌ ಮಾಲಿಕ ಪಿ.ವಿ.ರಮಣ ಮತ್ತಿತರರಿದ್ದರು.


Trending videos

Back to Top