CONNECT WITH US  

ಕೋಳಿ ಸಾಕಾಣಿಕೆದಾರರು ಸಂಘಟಿತರಾಗಲಿ  

ಕೋಲಾರ: ಲಾಭದಾಯಕವಾದ ಕೋಳಿ ಸಾಕಾಣಿಕೆ ಕಡೆ ರೈತರು ಹೆಚ್ಚಿನ ಒಲವು ತೋರುತ್ತಿದ್ದು, ಈ ಉದ್ಯಮದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಾಕಾಣಿಕೆದಾರರು ಸಂಘಟಿತರಾಗಬೇಕು. ಕೃಷಿಯಾಗಿ ಪರಿಗಣಿಸುವತ್ತ ಚಿಂತನೆ ನಡೆಯಬೇಕೆಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಸಲಹೆ ನೀಡಿದರು.

ನಗರದಲ್ಲಿ ನಡೆದ ಫೌಲಿó ಫಾರಂ ಮತ್ತು ಬ್ರಿàಡರ್ಸ್‌ ಅಸೋಸಿಯೇಷನ್‌ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿನ ಸಂಕಷ್ಟದಿಂದಾಗಿ ರೈತರು ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆಯ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಪೊÅàತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಪಡೆದ ಸಾಲ ಪೂರ್ತಿ ಪಾವತಿಸಿ: ಕೋಳಿ ಸಾಕಾಣಿಕೆ ಕಸುಬು ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದರೆ ಮತ್ತಿನ್ನಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕುಗಳು ನೀಡುವ ಸೌಲಭ್ಯದಿಂದಲೂ ಯಾವುದೇ ಅನುಕೂಲವಿಲ್ಲ. ಪಡೆದ ಸಾಲವನ್ನು ಪೂರ್ತಿ ಪಾವತಿಸಬೇಕು. ಯಾವುದೇ ಸಹಾಯಧನ ಯೋಜನೆಗಳ ನೆರವೂ ಈ ಉದ್ಯಮಕ್ಕೆ ಇಲ್ಲ ಎಂದು ವಿಷಾದಿಸಿದರು.

ನಿರ್ಬಂಧ ಹೇರಿದರೆ ಹೇಗೆ?: ಬೆಳೆಗೆ ಬೆಲೆ ಸಿಗದೇ, ಮಳೆಯಿಲ್ಲದೇ ಕೃಷಿ ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವುದರಿಂದಲೇ ಜನತೆ ಕೋಳಿ ಸಾಕಾಣಿಕೆಯತ್ತ ಮುಖ ಮಾಡುತ್ತಿದ್ದಾರೆ. ಈ ರೈತರಿಗೆ ಉತ್ತೇಜನ ನೀಡುವುದು ಬಿಟ್ಟು ನಿರ್ಬಂಧ ಹೇರಿದರೆ ಹೇಗೆ ಎಂದು ಪ್ರಶ್ನಿಸಿದರು.

ಮೊದಲು ಸಂಘಟಿತರಾಗಿ: ಸಾರ್ವಜನಿಕರಿಗೆ ತೊಂದರೆ ನೀಡಲು ಯಾರೂ ಕೋಳಿ ಫಾರಂ ನಡೆಸುತ್ತಿಲ್ಲ. ಸಾಮಾಜಿಕ ಜವಾಬ್ದಾರಿಯಿಂದ ಯಾರಿಗೂ ತೊಂದರೆಯಾಗದಂತೆ ಊರಿನಿಂದ ಆಚೆಗೆ ಫಾರಂ ನಿರ್ಮಾಣ ಮಾಡಲಾಗುತ್ತಿದೆ. ಆದರೂ, ಕೆಲವರು ಕಿರುಕುಳ ನೀಡುವುದು ಮುಂದುವರಿದಿದೆ. ಇದರಿಂದ ಮುಕ್ತಿ ಸಿಗಬೇಕಾದರೆ ಮೊದಲು ನೀವೆಲ್ಲಾ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

ರೈತರ ಕಡೆಗಣನೆ: ಕೋಳಿ ಸಾಕಾಣಿಕೆದಾರ ಮುರಳಿ ರೆಡ್ಡಿ ಮಾತನಾಡಿ, ಕೋಳಿ ಸಾಕಾಣಿಕೆದಾರರಿಗೆ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಇದು ಯಾವ ಒಂದು ಕ್ಷೇತ್ರಕ್ಕೆ ಸೇರುತ್ತದೆ ಎಂಬ ಗೊಂದಲದಲ್ಲಿ ರೈತರು ಇದ್ದಾರೆ. ಇಲಾಖಾ ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 

ಕೋಳಿ ಸಾಕಾಣಿಕೆಯಲ್ಲಿ ಸೋಲಾರ್‌ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಸರಬರಾಜು ಮಾಡಬೇಕು. ಬೇರೆ ರೈತರು ಸೋಲಾರ್‌ ಪದ್ಧತಿ ಅಳವಡಿಸಲು ಬೆಸ್ಕಾಂ ಮತ್ತು ಸರ್ಕಾರ ಉತ್ತೇಜನ ನೀಡಬೇಕು. ಇದರಿಂದ ವಿದ್ಯುತ್‌ ಉಳಿಕೆಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಂಎಸ್‌ಐಎಲ್‌ ಮಾಜಿ ಅಧ್ಯಕ್ಷ ಅನಿಲ್‌ ಕುಮಾರ್‌, ಕೆ.ಚಂದ್ರಾರೆಡ್ಡಿ, ಜಿಪಂ ಸದಸ್ಯ ಕೆ.ಎಸ್‌.ನಂಜುಂಡಪ್ಪ, ಮುಖಂಡ ಮುನಿರತ್ನಂನಾಯ್ಡು, ವಕ್ಕಲೇರಿ ರಾಮು, ಬ್ಯಾಲಹಳ್ಳಿ ಶಂಕರೇಗೌಡ, ಕೋಳಿ ಸಾಗಾಣಿಕೆದಾರರಾದ ನಂಜುಡಪ್ಪ, ರಾಮು, ಹರೀಶ್‌, ಆನಂದರೆಡ್ಡಿ, ಕೆ.ಚಂದ್ರಾರೆಡ್ಡಿ, ಗೋಪಾಲಕೃಷ್ಣ, ಪ್ರಸನ್ನ, ರವಿ ಮತ್ತಿತರರು ಹಾಜರಿದ್ದರು. 


Trending videos

Back to Top