CONNECT WITH US  

ಪತ್ನಿ ಆತ್ಮಹತ್ಯೆಗೈದು 5 ತಿಂಗಳಲ್ಲಿ ಪತಿಯೂ ನೇಣಿಗೆ ಶರಣು 

ಕುಂದಾಪುರ: ಸುಮಾರು 5 ತಿಂಗಳ ಹಿಂದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿಯೇ ಪತಿಯೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 17ರ ರಾತ್ರಿ ಅಲ್ಬಾಡಿಯಲ್ಲಿ ಸಂಭವಿಸಿದೆ. 

ಅಲಾºಡಿ ಗ್ರಾಮದ ತೊನ್ನಾಸೆ ನಿವಾಸಿ ನರಸಿಂಹ ಆಚಾರ್ಯ ಅವರ ಪುತ್ರ ಪ್ರಭಾಕರ ಆಚಾರ್ಯ (35)  ನೇಣಿಗೆ ಶರಣಾದವರು. ತಂದೆ, ಚಿಕ್ಕಪ್ಪ ಹಾಗೂ ಮತ್ತೋರ್ವರ ಬೆದರಿಕೆ ಮತ್ತು ಮಾನಸಿಕ ಹಿಂಸೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು, ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೆ ಪ್ರೇರಣೆ, ಬೆದರಿಕೆ ಹಾಗೂ ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ತಂದೆ ನರಸಿಂಹ ಆಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದು, ಚಿಕ್ಕಪ್ಪ ಶಂಕರ ಆಚಾರ್ಯ ಹಾಗೂ ಚೂರಿ ಶಂಕರ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 

  ನಾಲ್ಕು ವರ್ಷ ಹಿಂದೆ ಮದುವೆ
ಪ್ರಭಾಕರ ಆಚಾರ್ಯ ಹಾಗೂ ಕಾರ್ಕಳ ಕುಚ್ಚಾರಿನ ಪವಿತ್ರಾ ಅವರ ವಿವಾಹ 4 ವರ್ಷಗಳ ಹಿಂದೆ ಜರಗಿದ್ದು, ಈ ದಂಪತಿಗೆ  ಇಬ್ಬರು ಮಕ್ಕಳಿದ್ದಾರೆ.

Trending videos

Back to Top