ಗೋ ಪ್ರೋ ಫ್ಯೂಷನ್ ಕೆಮರಾ
Team Udayavani, May 11, 2018, 3:31 PM IST
ಅಮೆರಿಕನ್ ಟೆಕ್ನಾಲಜಿ ಕಂಪೆನಿಯ ಅತ್ಯಾಧುನಿಕ ಕೆಮರಾ ಗೋ ಪ್ರೋ ಫ್ಯೂಷನ್. ಗೋ ಪ್ರೋ ಕಂಪೆನಿಯ ವಿಶಿಷ್ಟವಾದ ಕೆಮರಾ ಇದಾಗಿದ್ದು, 360 ಡಿಗ್ರಿ ಚಲಿಸುತ್ತದೆ. 30ಫೀಟ್ ದೂರದ 5.2 ಕೆ ಕ್ವಾಲಿಟಿ ವಿಡಿಯೋವನ್ನು ಚಿತ್ರೀಕರಿಸಿಕೊಳ್ಳಲಿದೆ. ಈ ಕೆಮರಾದ ಒಟ್ಟು ಬೆಲೆ 60,000ರೂ. ಇದರ ಜತೆಗೆ ಅಸ್ಸೆ ಸೆರಿ, ಯುಎಸ್ಬಿ ಕೇಬಲ್ ಹಾಗೂ ಫ್ಯೂಜನ್ ಗ್ರಿಫ್ ಕೂಡ ಸಿಗಲಿದೆ.
ಇದು ವಾಯಿಸ್ ಕಂಟ್ರೋಲ್, ಅಡ್ವಾನ್ಸ್ಡ್ ವಿಡಿಯೋ ಸಹಿತ ಚಿತ್ರೀಕರಿಸಿದ ವಿಡಿಯೋಗಳನ್ನು ಸ್ಮಾರ್ಟ್ಫೋನ್ಗಳಿಗೆ ಇಂಟರ್ನೆಟ್ ಇಲ್ಲದೆಯೇ ಅಪ್ಲೋಡ್ ಮಾಡಬಹುದಾಗಿದೆ. ಕೆಮರಾದಿಂದ ರಾತ್ರಿ, ಹಗಲು, ಸಂಜೆ ಅಥವಾ ಯಾವಾಗಲಾದರೂ ಫೋಟೋ ತೆಗೆದದ್ದು ಕೂಡ ಸ್ಪಷ್ಟವಾಗಿ ಹಾಗೂ 74×75 x 40 ಎಂಎಂನಲ್ಲಿ ಬರುತ್ತವೆ. ಈ ಕೆಮರಾದಲ್ಲಿರುವ ಮತ್ತೊಂದು ಅತ್ಯಾಧುನಿಕ ವಿಶೇಷತೆ ಎಂದರೆ ಇದು ವಾಟರ್ ಪ್ರೂಫ್ ಆಗಿದ್ದು, ಸುಮಾರು 5 ಮೀಟರ್ ನೀರಿನಲ್ಲಿ ಇಟ್ಟರೂ ಇದಕ್ಕೆ ಏನೂ ಆಗುವುದಿಲ್ಲ. ಹಾಗಾಗಿ ಇದನ್ನು ಅಂಡರ್ ವಾಟರ್ ಫೋಟೋಗ್ರಫಿಗೆ ಬಳಸಬಹುದಾಗಿದೆ.
ಈ ಕೆಮರಾದಲ್ಲಿಯುಎಸ್ಬಿ-ಸಿ ಫೊರ್ಟ್, ವೈಫೈ, ಬ್ಲೂಟೂಥ್, ಮತ್ತು ಜಿಪಿಎಸ್ ಸಂಪರ್ಕದ ಅವಕಾಶವೂ ಇದೆ. ಇದು ಸುಮಾರು 2,620 ಎಂಎಎಚ್ ಲಿಥೀನೇಯಂ ರಿಮ್ಯೂವೇಬಲ್ ಬ್ಯಾಟರಿ ಹಾಗೂ ಯುಎಚ್ಎಸ್-1 ರೇಟಿಂಗ್ನ 2 ಮೈಕ್ರೋ ಎಸ್ಡಿ ಕಾರ್ಡ್ ಅನ್ನು ಒಳ ಗೊಂಡಿದೆ. ಇದರ ಜತೆಗೆ 2 ಎಲ್ಇಡಿ ಹಾಗೂ 360 ಡಿಗ್ರಿ ರೆಕಾರ್ಡ್ ಸಾಮರ್ಥ್ಯದ 4 ಮೈಕ್ರೋಫೋನ್ ಜತೆಗೆ ಕೆಮರಾದಲ್ಲಿ ಮಾಡುವ ವಿಡಿಯೋ ಅನ್ನು ಲೈವ್ ಆಗಿ ನೋಡಬಹದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ