ಮೊಂಟೆತಡ್ಕದ ಶ್ರೀದುರ್ಗಾಪರಮೇಶ್ವರಿ 


Team Udayavani, Oct 21, 2017, 12:31 PM IST

7.jpg

 ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ “ಮೊಂಟೆತಡ್ಕ ಶ್ರೀದುರ್ಗಾಪರಮೇಶ್ವರಿ’ದೇವಾಲಯವಿದೆ.  “ಮೊಂಟೆ’ ಎಂದರೆ ಬಿದಿರಿನಿಂದ ತಯಾರಿಸುವ ಒಂದು ರೀತಿಯ ಸಂಗೀತ ಉಪಕರಣ. ಇದನ್ನು ಹಸುವಿನ ಕೊರಳಿಗೆ ಕಟ್ಟುತ್ತಾರೆ. ಇದು ಹೊಮ್ಮಿಸುವ ನಾದದ ಸಹಯಾದಿಂದಲೇ ಕಾಡಿನಲ್ಲಿ ಹಸು ಎಲ್ಲಿದೆ ಎಂದು ಪತ್ತೆ ಮಾಡುತ್ತಾರೆ.  ತುಳು ಭಾಷೆಯಲ್ಲಿ ಇದನ್ನು ‘ಬೊಂಕ’ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಬಿದಿರಿನಿಂದ ತಯಾರಿಸಿದ ಭಿನ್ನ ನಾದವನ್ನು ಹೊಮ್ಮಿಸುವ “ಮೊಂಟೆ’ಗಳನ್ನೇ ಭಕ್ತಾದಿಗಳು ಹರಕೆಯಾಗಿ ಸಮರ್ಪಿಸುತ್ತಿದ್ದು, ಅದೇ ಮೊಂಟೆಯ ನಾದವನ್ನು ಮಹಾಪೂಜೆಯ ಸಂದರ್ಭದಲ್ಲಿ ಹೊರಹೊಮ್ಮಿಸಲಾಗುತ್ತದೆ.

    ಶಿರಾಡಿ ಪರ್ವತದ ಮಗ್ಗುಲಲ್ಲಿ ಕಾಡಿನಿಂದದಾವೃತವಾದ ಶಿಬಾಜೆ ಗ್ರಾಮವು ನಳನಳಿಸುವ ತೋಟಗಳನ್ನು ತನ್ನ ಮೈಮೇಲೆ ಹೊದ್ದುಕೊಂಡಂತಿದೆ.   ಪ್ರಾಚೀನ ಕಾಲದಲ್ಲಿ ಋಷಿಗಳು ಲೋಕ ಮಾತೆಯಾದ ದುರ್ಗಾ ದೇವಿಗೆ ಧ್ಯಾನಿಸುವಾಗ  “ವ್ಯಾಘ್ರಾಸುರ’, ‘ಸೈರಿಭಾಸುರ’, ‘ಕ್ರೋಢಾಸುರ’ ಇವೇ ಮೊದಲಾದ ಕ್ರೂರ ರಾಕ್ಷಸರು ದಾಳಿ ಮಾಡಿದರು.  ಇಲ್ಲಿನ ಪ್ರಾಣಿ, ಪಶು, ಪಕ್ಷಿಗಳನ್ನು ಕೊಂದು ತಿನ್ನುತ್ತ ಯಾಗ ಶಾಲೆಯನ್ನು ಹಾಳುಗೆಡವಿದರು. ಆಗ ದುರ್ಗಾ ದೇವಿಯನ್ನು ಋಷಿಗಳು ಮೊರೆ ಇಟ್ಟಾಗ ಜಗನ್ಮಾತೆಯು ತನ್ನ ಪರಿವಾರದ ರಕ್ತೇಶ್ವರಿ, ಚಾಮುಂಡಿ ಮತ್ತು ಭೈರವ ಇವೇ ಮೊದಲಾದ ತನ್ನ ಗಣಗಳೊಡಗೂಡಿ ರಾಕ್ಷಸರ ಸಂಹಾರ ಮಾಡಿದಳು.  ಋಷಿಗಳನ್ನು ಕಾಪಾಡಿ ಮುಂದಕ್ಕೂ ಇಲ್ಲಿನ ಸಕಲ ಜೀವ ಸಂಕುಲವನ್ನು ಕಾಪಾಡುವ ಅಭಯವನ್ನಿತ್ತಳು. ನಂತರ ದೇವಿಯು ಇದೇ ‘ಮೊಂಟೆತಡ್ಕ’ ಎಂಬ ಸ್ಥಳದಲ್ಲಿ ಅದೃಶ್ಯಳಾದಳು ಎಂಬ ಐತಿಹ್ಯವಿದೆ.

    ಹಿಂದಿನ ಕಾಲದಲ್ಲಿ ಈ ಗ್ರಾಮದಲ್ಲಿ ವಾಸವಿದ್ದ ಬಿಲ್ಲವ ಜಾತಿಯ “ಕುಮಾರ’ ಎಂಬಾತನು ಇಲ್ಲಿನ ದಟ್ಟ ಕಾನನದ ಮಧ್ಯೆ ಇದ್ದ ಈಚಲ ಮರದಿಂದ ಸೇಂದಿಯನ್ನು ತೆಗೆದು ಮಣ್ಣಿನ ಮಡಕೆಯಲ್ಲಿಟ್ಟು ಅದನ್ನು ಹಳ್ಳಿಯಲ್ಲಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದನು. ಹೀಗಿರಲೊಂದು ದಿನ ಮರದಿಂದ ಶೇಂದಿಯನ್ನು ಹೊತ್ತು ಕುಮಾರನು ಕೆಳಗಿಳಿಯುತ್ತಿರುವ ಸಂದರ್ಭದಲ್ಲಿ ವನದುರ್ಗೆಯು ಉಯ್ನಾಲೆಯಾಡುತ್ತಾ, ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿರುವ ದೃಶ್ಯವನ್ನು ನೋಡಿ ಮೂಕ ವಿಸ್ಮಿತನಾಗುತ್ತಾನೆ. ಆಕೆಯ ಸಮೀಪಕ್ಕೆ ಹೋಗಲು ಧೈರ್ಯವಿಲ್ಲದೇ ಮರದ ಮರೆಯಲ್ಲಿ ನಿಂತು ದೇವಿಯ ಪ್ರಭೆ ಮತ್ತು ರೂಪ ಲಾವಣ್ಯವನ್ನು ನೋಡುತ್ತಾನೆ. ಹೀಗೆ ಪ್ರತೀ ದಿನ ದೇವಿಯನ್ನು ನೋಡುತ್ತಾ ಮನೆಗೆ ತಡವಾಗಿ ಮನೆಗೆ ಬರುತ್ತಿರುವುದನ್ನು ಗಮನಿಸಿದ ಕುಮಾರನ ಹೆಂಡತಿ “ಕುಮಾರಿ¤’ಯು ಅನುಮಾನಗೊಂಡು ಮಾರನೇ ದಿನ ಗಂಡನನ್ನು ಹಿಂಬಾಲಿಸಿಕೊಂಡು ಹೋದಳು. ಅಲ್ಲಿ ದೇವಿಯ ರೂಪವನ್ನು ನೋಡುತ್ತಾ ನಿಂತಿರುವ ಗಂಡನನ್ನು ಕಂಡು ತನ್ನ ಗಂಡ ಯಾವುದೋ ಒಬ್ಬ ಹೆಣ್ಣಿನಲ್ಲಿ ಅನುರಕ್ತನಾಗಿರುವನೆಂದು ಭಾವಿಸಿದಳು.  ಅವನನ್ನು ಕೆಟ್ಟ ಶಬ್ದಗಳಿಂದ ಬೈಯ್ಯಲಾರಂಭಿಸಿದಳು. ಗಂಡ ಹೆಂಡತಿ ಇಬ್ಬರಿಗೂ ಕಂಡು ಕ್ರೋಧಗೊಂಡ ವನದುರ್ಗೆಯು ಇಬ್ಬರೂ ಕಲ್ಲಾಗಿ ಹೋಗುವಂತೆ ಶಪಿಸುತ್ತಾಳೆ. ಈ ದಂಪತಿಗೆ ತನ್ನ ಮುಖ ದರ್ಶನವಾಗಬಾರದೆಂದು ದೇವಿಯು ಕೋಪದಿಂದ ಉತ್ತರಾಭಿಮುಖವಾಗಿ ಮುಖ ತಿರುಗಿಸಿ ಅಲ್ಲೇ ಸ್ಥಿರವಾಗಿ ನಿಂತಳೆಂದು ಎನ್ನುವ ಮತ್ತೂಂದು ಕತೆಯೂ ಇದೆ. 

    ಈ ದೇವಾಲಯದ ಪೂಜೆಯ ಸಂದರ್ಭದಲ್ಲಿ ಭಕ್ತಾದಿಗಳು ವಿವಿಧ ಸಂಗೀತ ವಾದ್ಯಗಳನ್ನು ಮೊಳಗಿಸುವಾಗ ಅದರ ಜೊತೆಗೆ ಅಲ್ಲಿ ನೇತುಹಾಕಲಾಗಿರುವ ಮೊಂಟೆಗಳನ್ನು ಕೈಗಳಿಂದ ಅಲ್ಲಾಡಿಸುತ್ತಾರೆ. ಆಗ ವೈವಿಧ್ಯಮಯವಾದ ನಾದವು ಹೊರಹೊಮ್ಮುತ್ತದೆ. ಬಿದಿರಿನ ಮೊಂಟೆಯ ನಾದದಿಂದ ಸಂತುಷ್ಟಳಾಗುವ ವನದುರ್ಗೆಯು ನೆಲೆಸಿರುವ ಈ ಸ್ಥಳಕ್ಕೆ ‘ಮೊಂಟೆತಡ್ಕ’ವೆಂಬ ಸ್ಥಳನಾಮವು ಪ್ರಾಪ್ತವಾಗಿದೆ. ವಿವಿಧ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ರೋಗಗ್ರಸ್ತಾಂಗಗಳ ಬೆಳ್ಳಿಯ ಅಥವಾ ಚಿನ್ನದ ಪ್ರತಿರೂಪವನ್ನು ಹಾಗೂ ಶ್ವಾಸಕೋಶದ ವ್ಯಾಧಿ ಪೀಡಿತರು ಬೆಳ್ಳಿಯ ಸರಿಗೆ ಅಥವಾ ಬಾಯ ಹಗ್ಗವನ್ನು ಹರಕೆಯನ್ನಾಗಿ ಒಪ್ಪಿಸುವ ಪದ್ಧತಿ ಇದೆ. ಇಲ್ಲಿ ಕುಂಕುಮಾರ್ಚನೆ ಮಾಡಿಸಿದರೆ ಶೀಘ್ರವಾಗಿ ಕಂಕಣಬಲ ಕೂಡಿಬರುವುದೆಂಬ ನಂಬಿಕೆಯೂ ಇದೆ. 

ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Jharkhand 32 crore discovery case: Two arrested

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.