ದಾಸೋಹ ನಿಲಯಕ್ಕೆ ಶತಕದ ಸಂಭ್ರಮ


Team Udayavani, Sep 15, 2018, 5:01 PM IST

1000.jpg

  ಅದು 1957ನೇ ಇಸ್ವಿ. ಒಂದು ಶ್ರಾವಣದ ಮುಂಜಾನೆ ಸೂರ್ಯನ ಹೊನ್ನಕಿರಣ ಮುರುಘಾ ಮಠದ ಕಳಸದ ಮೇಲೆ ಗೋಚರಿಸಿರಲಿಲ್ಲ. ಕಲಬುರ್ಗಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಲ್ಲಿನ ಕ್ವಾರಿಯಲ್ಲಿ ಕಲ್ಲು ಒಡೆಯುತ್ತಿದ್ದ ಬಡ ಪೋಷಕರಿಬ್ಬರು ತಮ್ಮ ಮಗನನ್ನ ಓದಿಸಿ ದೊಡ್ಡವನನ್ನಾಗಿ ಮಾಡಬೇಕೆಂದು ದೊಡ್ಡ ಟ್ರಂಕ್‌ನೊಂದಿಗೆ ಮುರುಘಾಮಠದ ಬಾಗಿಲಲ್ಲಿ ಕುಳಿತದ್ದರು. ಪ್ರಸನ್ನ ಚಿತ್ತರಾಗಿ ಮಠದ ಒಳಗಡೆಯಿಂದ ಬಂದ ಮೃತ್ಯುಂಜಯ ಅಪ್ಪಗಳು, ಅವರತ್ತ ದಿವ್ಯದೃಷ್ಟಿ ನೆಟ್ಟರು. ಹತ್ತಿರ ಬಂದು, ಮುಗುಳ್ನಗೆಯೊಂದಿಗೆ ಮಗುವನ್ನ ಪ್ರೀತಿಯಿಂದ ತಮ್ಮ ಬಳಿ ಕರೆದರು, ತಲೆಯ ಮೇಲೆ ಕೈಯಾಡಿಸಿದರು. ಏನು ನಿನ್ನ ಹೆಸರು ? ಎಂದು ಕೇಳಿದರು. ಬಸ್ಯಾರಿ ಎಂದು ಒರಟು ಭಾಷೆಯಲ್ಲಿ ನುಡಿದ ಹುಡುಗ. ತಕ್ಷಣವೇ ಸ್ವಾಮೀಜಿಗಳು, ಅಲ್ಲಪ್ಪ, ಇನ್ನ ಮುಂದ ನೀನು ಬಸವರಾಜ. ಒಳಗ ಹೋಗು, ಸ್ನಾನ ಮಾಡಿ ಪ್ರಸಾದ ತಗೋ ಅಂದ್ರು. ಬಡ ತಂದೆತಾಯಿಯ ಬಾಯಿಂದ ಯಾವುದೇ ಮಾತು ಬರುವ ಮುನ್ನವೇ ಮೃತ್ಯುಂಜಯ ಸ್ವಾಮೀಜಿಗಳು ಅವರು ಬಂದ ಕಾರಣವನ್ನು ತಿಳಿದು ವಿದ್ಯಾರ್ಥಿಗೆ ಓದುವುದಕ್ಕೆ ವ್ಯವಸ್ಥೆ ಮಾಡಿದ್ದರು.  

ಇಂತಿಪ್ಪ ಬಸವರಾಜ ಓದಿ ದೊಡ್ಡವನಾಗಿ ಇಂಗ್ಲೆಂಡಿನ ಜೀವ ರಾಸಾಯನಿಕ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಇದೀಗ ಮುಂಬೈನಲ್ಲಿ ವಾಸವಾಗಿದ್ದಾರೆ. 

ಅಲ್ಲಮಪ್ರಭು ಪಾಟೀಲ್‌ಗೆ ಈಗ 40 ವರ್ಷಗಳಿರಬಹುದು. ಅಮೇರಿಕಾದ ಫ್ಲೋರಿಡಾದಲ್ಲಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಬಡ್ತಿ ಹೊಂದಿ ನಾಲ್ಕು ವರ್ಷಗಳಾಗಿವೆ. ತಾಂತ್ರಿಕ ಶಿಕ್ಷಣ ಮುಗಿಸಿ 2001 ರಲ್ಲಿಯೇ ಅಮೇರಿಕಾದ ಫ್ಲೆ$çಟ್‌ ಏರುವಾಗ ತನ್ನ ಎಲ್ಲ ಗೆಳೆಯರಿಗೆ ಕರೆ ಮಾಡಿದ್ದ ಪಾಟೀಲ್‌, ತನಗೆ ವಿದೇಶದಲ್ಲಿ ಕೆಲಸ ಸಿಕ್ಕ ಖುಷಿಯನ್ನು ಹಂಚಿಕೊಳ್ಳುವಾಗ ಮೊದಲು ಶರಣು ಹೇಳಿದ್ದು ಈ ಮುರುಘಾಮಠದ ದಾಸೋಹ ಪರಂಪರೆಗೆ. ಮುರುಘಾಮಠ ಇಲ್ಲದೇ ಇದ್ದಿದ್ದರೆ ನಾನು ಅಮೇರಿಕಾದಲ್ಲಿ ಉದ್ಯೋಗ ಪಡೆಯುತ್ತಿರಲಿಲ್ಲ ಎಂದು ಆತ ಹೇಳಿದ ಮಾತನ್ನ ಅನೇಕರು ತಮ್ಮ ಭಾಷಣದಲ್ಲಿ ಇಂದಿಗೂ ಪ್ರಸ್ತಾಪಿಸುತ್ತಾರೆ. 

ಹೀಗೆ ಮುರುಘಾಮಠದ ಮುರುಘರಾಜೇಂದ್ರ ಪ್ರಸಾದ ಮತ್ತು ಉಚಿತ ವಿದ್ಯಾರ್ಥಿನಿಲಯದಲ್ಲಿದ್ದು ಅಕ್ಷರ,ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಬದುಕು ಕಟ್ಟಿಕೊಟ್ಟಿಕೊಂಡ ಎಲ್ಲರದ್ದೂ ಒಂದೊಂದು ಕಥೆಗಳಿವೆ. 

ಮುರುಘಾಮಠದಲ್ಲಿ ಓದಿರುವ ವಿಜ್ಞಾನಿಗಳು ಸಾವಿರ, ಸುಜ್ಞಾನಿಗಳು ಸಾವಿರ, ಅಧಿಕಾರಿಗಳು ಸಾವಿರ, ಅಜ್ಞಾನದಿಂದ ಹೊರಬಂದು ಬದುಕು ಕಂಡುಕೊಂಡ ಸರದಾರರು ಲಕ್ಷ ಲಕ್ಷ ಜನ. ಪ್ರಸಾದ ನಿಲಯವನ್ನೇ ನಂಬಿಕೊಂಡ 47 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.  ಇವರೆಲ್ಲರ ಕಥೆಯೂ ಸುಖಾಂತ್ಯದಲ್ಲಿಯೇ ಅಂತ್ಯಕಂಡಿವೆ. ಅರ್ಥಾರ್ಥ್,  ಈ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಓದಿದ ಎಲ್ಲ ವಿದ್ಯಾರ್ಥಿಗಳೂ ಸಮಾಜದಲ್ಲಿ ಒಂದಲ್ಲ ಒಂದು ಉತ್ತಮ ಸ್ಥಾನ, ಉದ್ಯೋಗ ಪಡೆದುಕೊಂಡಿದ್ದಾರೆ. 

ಹೌದು…,18ನೇ ಶತಮಾನದಿಂದಲೂ ಶಿಕ್ಷಣದಲ್ಲಿ ಹಿಂದುಳಿದಿದ್ದ ಧಾರವಾಡ ಇಂದು ವಿದ್ಯಾಕಾಶಿಯಾಗಿ ಬೆಳೆದು ನಿಂತಿದ್ದರ ಹಿಂದೆ ಸ್ಫೂರ್ತಿಯ ಸೆಲೆಯಾಗಿದ್ದು ಮುರುಘಾಮಠವೇ.

 ಏಕೆಂದರೆ ಮುರುಘಾಮಠದ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳೇ ಓದಿ ಬೆಳೆದು ಅಧಿಕಾರಿಗಳಾಗಿ, ರಾಜಕಾರಣಿಗಳಾಗಿ, ವಕೀಲರಾಗಿ, ಹೋರಾಟಗಾರರಾಗಿ ಧಾರವಾಡಕ್ಕೆ ಕರ್ನಾಟಕ ಕಲಾ ಮಹಾವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಮುನ್ನುಡಿ ಬರೆದರು. 

ವಿದ್ಯೆ ಸಿಕ್ಕುವ ಹುಬ್ಬಳ್ಳಿ-ಧಾರವಾಡ ನಗರಕ್ಕೆ ದಟ್ಟ ದರಿದ್ರ ಹಳ್ಳಿಗಳಲ್ಲಿ ಜೀವನ ಮಾಡುತ್ತಿದ್ದ ಬಡ ಮಕ್ಕಳನ್ನು ತಂದೆ ತಾಯಿ ಓದಲು ಕಳುಹಿಸುವುದೇ ಆಗ ದೊಡ್ಡ ಸವಾಲಾಗಿತ್ತು. ಆದರೆ ತಮ್ಮ ಮಕ್ಕಳು ಓದದಿದ್ದರೂ ಮುರುಘಾಮಠದಲ್ಲಿನ ಸಂಸ್ಕಾರ ಅವರ ಬದುಕಿಗೆ ಒಂದು ಆದರ್ಶ ಮಾರ್ಗ ನೀಡುತ್ತದೆ ಎನ್ನುವ ಅಚಲ ನಂಬಿಕೆಯಿಂದ ಪೋಷಕರು ತಮ್ಮ ಮಕ್ಕಳನ್ನು ಮುರುಘಾಮಠಕ್ಕೆ ಓದಲು ಕಳುಹಿಸಿ ಬಿಡುತ್ತಿದ್ದರು. 

ಇಂತಿಪ್ಪ ಮುರುಘಾಮಠದ ವಿದ್ಯಾರ್ಥಿ ನಿಲಯ ಮತ್ತು ಪ್ರಸಾದ ನಿಲಯಕ್ಕೆ ಇದೀಗ ಬರೊಬ್ಬರಿ 100 ವರ್ಷಗಳು ತುಂಬಿವೆ. ಬಡತನ, ಸಿರಿತನ, ಜಾತಿಮತ,ಪಂಥಗಳ ಬೇಧವನ್ನು ಲೆಕ್ಕಿಸದೇ ಇಲ್ಲಿದ್ದುಕೊಂಡು ಓದಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮತ್ತು ದೇಶದ ವಿವಿಧೆಡೆ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುರುಘಾಮಠದ ಹಳೆ ವಿದ್ಯಾರ್ಥಿ ವೃಂದ ಇದೀಗ ಸಂಭ್ರಮದಲ್ಲಿದೆ.

ಮುರುಘಾಮಠದ ದಾಸೋಹ ಭವನ 
ದಕ್ಷಿಣ ಕರ್ನಾಟಕ ಭಾಗದಲ್ಲಿ ದಾಸೋಹ ಪರಂಪರೆ ಎಂದರೆ ಮೊದಲು ನೆನಪಿಗೆ ಬರುವುದು ತುಮಕೂರಿನ ಸಿದ್ದಗಂಗಾ ಮಠ. ಅಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಯಾವುದೇ ಜಾತಿಮತ ಪಂಥಗಳಿಲ್ಲದೇ ಒಟ್ಟಿಗೆ ಸೇರಿ ವಿದ್ಯೆ,ಪ್ರಸಾದ ಪಡೆಯುತ್ತಾರೆ. ಅದಕ್ಕೂ ಮುಂಚಿತವಾಗಿಯೇ, ಅಂದರೆ 1800ನೇದ ಸಂದರ್ಭದಲ್ಲಿಯೇ  ಹಳೆ ಮೈಸೂರು ಭಾಗದಲ್ಲಿ ಅನೇಕ ಧರ್ಮಪ್ರವರ್ತಕರು ಅಕ್ಷರ ಮತ್ತು ಅನ್ನ ದಾಸೋಹ ಆರಂಭಿಸಿದ್ದರು. ಅಲ್ಲಿನ ಸ್ಥಿತಿವಂತ ಲಿಂಗಾಯತ ಮುಖಂಡರು, ಜಮೀನುದಾರರು, 1873 ರಲ್ಲಿ ಮೈಸೂರಿನಲ್ಲಿ ವೀರಮ್ಮ ಎಂಬುವವರು ಪ್ರಸಾದ ನಿಲಯ ಆರಂಭಿಸಿದ್ದರು. ಅದೇ ರೀತಿ ಕಬ್ಬಳ್ಳಿ ಚೆನ್ನಬಸಪ್ಪ, ಅರಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಿಕ್ಕ ಬಸಮ್ಮ, ತಿಪಟೂರಿನ ಗುರುಪಾದಪ್ಪನವರು, ಬಸವಯ್ಯನವರು,ಗುಬ್ಬಿ ತೋಟದಪ್ಪ, ಕಂಬಿ ಸಿದ್ದರಾಮಣ್ಣ, ಕೆ.ಪಿ.ಪುಟ್ಟಣ್ಣಶೆಟ್ಟಿ ಅವರುಗಳು ದಾಸೋಹ ಪರಂಪರೆ ಮತ್ತು ಬಡಮಕ್ಕಳ ಶಿಕ್ಷಣಕ್ಕೆ ಕೊಂಚ ಶ್ರಮಿಸಿದ್ದರು. 

ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ದೊಡ್ಡ ಪ್ರಯತ್ನಗಳು ನಡೆದಿರಲಿಲ್ಲ. ಹಡೇìಕರ್‌ ಮಂಜಪ್ಪ ಮತ್ತು ಶಿರಸಂಗಿ ಲಿಂಗರಾಜರು ಮಾತ್ರ ಸಣ್ಣ ಪ್ರಯತ್ನ ಮಾಡಿದ್ದರೂ ಅವು ಯಶಸ್ವಿಯಾಗಿರಲಿಲ್ಲ. 

ಆಗ ಈ ಭಾಗದ ಬಡ ಮಕ್ಕಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯೊಂದಿಗೆ ಅಕ್ಷರ ಕಲಿಸುವ ಪರಿಕಲ್ಪನೆಯೊಂದಿಗೆ ಆರಂಭಗೊಂಡಿದ್ದೇ ಮುರುಘಾಮಠದ ದಾಸೋಹ ಭವನ. 1917 ರಲ್ಲಿ 25 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಪ್ರಸಾದ ನಿಲಯ ಮತ್ತು ವಿದ್ಯಾರ್ಥಿನಿಲಯ, 1962ರ ಹೊತ್ತಿಗೆ ಪ್ರತಿವರ್ಷ 300 ವಿದ್ಯಾರ್ಥಿಗಳ ಗಡಿ ದಾಟಿತು. 70 ದಶಕದಲ್ಲಿ ಪ್ರತಿವರ್ಷವೂ 500 ಮತ್ತು 80-90ರ ದಶಕದಲ್ಲಿ ಪ್ರತಿವರ್ಷವೂ 750 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡಲು ಮುರುಘಾಮಠ ವ್ಯವಸ್ಥೆ ಮಾಡಿತು. 

63 ಪುರಾತನರ ಹೆಸರಿನಲ್ಲಿ ಮೊದಲು 63 ದೈತ್ಯ ಕೋಣೆಗಳನ್ನು ಒಳಗೊಂಡ ವಿದ್ಯಾರ್ಥಿನಿಲಯ ಸ್ಥಾಪನೆಯಾಯಿತು. ಇದನ್ನು ಕಟ್ಟಲು ಮೃತ್ಯುಂಜಯ ಅಪ್ಪಗಳು ಹೆಗಲಿಗೆ ಜೋಳಿಗೆ ಹಾಕಿದರು. ಇದು 126 ಕೋಣೆಗಳಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಸಾದ ನೀಡಲು ಮತ್ತು ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಬೇಕು ಎಂದು ಪಣತೊಟ್ಟು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜೋಳ,ಅಕ್ಕಿ,ಬೇಳೆ,ಬೆಲ್ಲದ ಆದಿಯಾಗಿ ಎಲ್ಲವನ್ನು ತಂದು ಪ್ರಸಾದ ನಿಲಯವನ್ನು ಮುನ್ನಡೆಸಿದರು. 

ಸಣ್ಣದಾದ ಈ ಸಂಸ್ಥೆ ಹೆಮ್ಮರವಾಗಿ ಬೆಳೆದು, ಸಾವಿರಾರು ವಿದ್ಯಾರ್ಥಿಗಳಿಗೆ ನೂರು ವರ್ಷಗಳಿಂದ ಅನ್ನ ಅರಿವು ನೀಡಿದೆ. ಅದರಿಂದಾಗಿ ಅನೇಕ ಬಡ ವಿದ್ಯಾರ್ಥಿಗಳು ಓದಿ ಪದವಿ ಪಡೆದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು. ಇದರ ಶ್ರೇಯಸ್ಸೆಲ್ಲ ಮೃತ್ಯುಂಜಯ ಶ್ರೀಗಳಿಗೆ ಸಲ್ಲುತ್ತದೆ. ಮೃತ್ಯುಂಜಯ ಸ್ವಾಮಿಗಳ ನಂತರ ಏಳು ಜನ ಸ್ವಾಮೀಜಿಗಳು ಪೀಠಾಧಿಪತಿಗಳಾಗಿದ್ದಾರೆ. ಈಗಿರುವ ಮಲ್ಲಿಕಾರ್ಜುನ ಸ್ವಾಮಿಗಳು ಮುರುಘಮಠದ ವೈಭವವನ್ನು ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. 

ಜಾನಪದದ ಭಾಗವಾದ ಮುರುಘಾಮಠ 
ಉತ್ತರ ಕರ್ನಾಟಕದ ಜಾನಪದ ಸಂಸ್ಕೃತಿಕ ವಿವಿಧ ಆಯಾಮಗಳಲ್ಲಿಯೂ ತನ್ನ ಬೇರುಗಳನ್ನು ಚಾಚಿಕೊಂಡಿದೆ. ಮುರುಘಾಮಠದ ಜಾತ್ರೆ ಉತ್ತರ ಕರ್ನಾಟಕದ ಜನಪದರ ಕಲಾ ಪ್ರದರ್ಶನ ವೇದಿಕೆಯಾಗಿ ಕೆಲಸ ಮಾಡಿದೆ. ಎತ್ತು ಚೆಕ್ಕಡಿ ಹೂಡಿ, ಹೋಳಿಗೆ ಮಾಡಿಕೊಂಡು ಅಜ್ಜನ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ಮನೆಯ ದೇವರ ಕೋಣೆಯಲ್ಲಿ ಮುರುಘಾಮಠದ ಸ್ವಾಮೀಜಿಗಳ ಫೋಟೋಗಳು ರಾರಾಜಿಸುತ್ತಿವೆ. 

ಹಾಡುವ ಹಾಡುವ ಕಲಾವಿದರು, ಹೆಜ್ಜೆ ಹಾಕುವ ಯುವಕರು, ಒಗಟು ಹೇಳುವ ವಿಕಟರಿಗೂ ಮುರುಘಾಮಠದ ಜಾತ್ರೆ ನೂರು ವರ್ಷಗಳಿಂದ ವೇದಿಕೆ ಕಲ್ಪಿಸಿದೆ. 

ಅತ್ತ ಮುಂಬೈ 650 ಕಿ.ಮೀ. ದೂರ…. ಇತ್ತ ಮೈಸೂರು 500 ಕಿ.ಮೀ…, ನಡುವೆ ಯಾವ ಕಾಲೇಜು ಇಲ್ಲ. ಅಕ್ಷರ ಕಲಿಯುವುದು ದೂರದ ಮಾತು ಓದನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು ಉತ್ತರ ಕರ್ನಾಟಕ ಭಾಗದ ಜನರಿಗೆ. ಇಂತಹ ಸಂದರ್ಭದಲ್ಲಿ ಆರಂಭಗೊಂಡಿದ್ದು ಕರ್ನಾಟಕ ಕಲಾ ಮಹಾವಿದ್ಯಾಲಯ. ನಂತರ ಕರ್ನಾಟಕ ವಿಶ್ವವಿದ್ಯಾಲಯ. ಶಿಕ್ಷಣ ಸಂಸ್ಥೆಗಳೇನೋ ಆರಂಭಗೊಂಡವು. ಆದರೆ ಓದಲು ಬಂದ ವಿದ್ಯಾರ್ಥಿಗಳು ಉಳಿದುಕೊಳ್ಳುವುದು ಎಲ್ಲಿ ? ಎಂಬ ಪ್ರಶ್ನೆ ಮಕ್ಕಳ ಪೋಷಕರನ್ನ ಕಾಡುತ್ತಿತ್ತು. ಆಗ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಯ ಬಡ-ತಂದೆತಾಯಿಗಳಿಗೆ ಆಸರೆಯಾಗಿ ನಿಂತಿದ್ದು ಅಣ್ಣ ಬಸವಣ್ಣನ ದಾಸೋಹ ಪರಿಕಲ್ಪನೆಯಲ್ಲಿ ಬೆಳೆದು ಬಂದ ಮುರುಘಾಮಠವೆಂಬ ವಾತ್ಸಲ್ಯಧಾಮ. 

*ಪ್ರಸ್ತುತ ವಿದ್ಯಾರ್ಥಿ ನಿಲಯದಲ್ಲಿ ಇರುವ ಇದ್ಯಾರ್ಥಿಗಳು 350.
*ಈ ವರೆಗೂ ಮುರುಘಾಮಠದಲ್ಲಿದ್ದು ಓದಿದ ವಿದ್ಯಾರ್ಥಿಗಳ ಸಂಖ್ಯೆ 50 ಸಾವಿರಕ್ಕೂ ಅಧಿಕ. 
*ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ವಿದೇಶದಲ್ಲಿದ್ದಾರೆ ಅಪಾರ ಭಕ್ತರು. 

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.