ಶ್ರೀರಂಗಪಟ್ಟಣದಲ್ಲಿದ್ದಾರೆ ಐದು ರುಪಾಯಿ ಡಾಕ್ಟರ್‌ !

Team Udayavani, Nov 17, 2018, 11:18 AM IST

54411.jpg

ಶ್ರೀರಂಗಪಟ್ಟಣದಲ್ಲಿ ವಾಸಿಸುವವರು, ಜ್ವರ, ಕೆಮ್ಮು, ತಲೆನೋವು ಮುಂತಾದ ಸಾಮಾನ್ಯ ರೋಗಗಳು ಬಂದಾಗ ಭಯ ಪಡುವ ಅಗತ್ಯವಿಲ್ಲ. ಚಿಕಿತ್ಸೆಗೆ ಹೆಚ್ಚಿನ ಖರ್ಚು ಬೀಳಬಹುದು ಎಂಬ ಯೋಚನೆಯೂ ಅವರಿಗಿಲ್ಲ. 

ಏಕೆಂದರೆ, ಪಟ್ಟಣದಲ್ಲಿ 5 ರೂ. ಪಡೆದು ಚಿಕಿತ್ಸೆ ನೀಡುವ ವೈದ್ಯರಿದ್ದಾರೆ. ಅವರ  ಹೆಸರು ಡಾ. ರಾಮಕೃಷ್ಣಯ್ಯ. 37 ವರ್ಷದಿಂದ ಅತಿ ಕಡಿಮೆ ಫೀ ಪಡೆದು ಚಿಕಿತ್ಸೆ ನೀಡುತ್ತಿರುವ ಅಪರೂಪ ವೈದ್ಯರಿವರು. 
ಈ ಹಿಂದೆ ಇವರು 2ರೂ. ಪಡೆಯುತ್ತಿದ್ದರು. ಈಗ 5 ರೂ.ಗೆ ಹೆಚ್ಚಿಸಿದ್ದಾರೆ. 

ಡಾ. ರಾಮಕೃಷ್ಣಯ್ಯ, ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದವರು.  ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌ ಪೂರೈಸಿ, 1982ರಲ್ಲಿ ಶ್ರೀರಂಗಪಟ್ಟಣಕ್ಕೆ ಬಂದರು. ಇಲ್ಲಿನ ಜಯಲಕ್ಷಿ$¾à ಚಿತ್ರಮಂದಿರ ವೃತ್ತದಲ್ಲಿ ಕಾವೇರಿ ಕ್ಲಿನಿಕ್‌ ಹೆಸರಿನ ಆಸ್ಪತ್ರೆ ತೆರೆದರು. 

ಆಗ ಕನ್ಸಲ್ಟೆàಷನ್‌ ಫೀ 2ರೂ. 
ಆಗ 2 ರೂಗೆ ಒಬ್ಬ ರೋಗಿಗೆ ಚಿಕಿತ್ಸೆ ನೀಡಿ,  ಔಷಧಿಕೊಟ್ಟು ಗುಣಪಡಿಸಲಾಗುತ್ತಿತ್ತು. ಈಗಲೂ ಅದೇ ತತ್ವವನ್ನು ಮುಂದುವರಿಸುತ್ತಿದ್ದಾರೆ. ಎಲ್ಲ ಕಡೆ ವೈದ್ಯರ ಪರೀûಾ ಶುಲ್ಕವೇ 150-200 ರೂ. ದಾಟಿರುವಾಗ ರಾಮಕೃಷ್ಣಯ್ಯ ಕೇವಲ ಮೂರು ರೂ. ಮಾತ್ರ ಹೆಚ್ಚಿಸಿದ್ದಾರೆ. ಆದರೆ, ರೋಗಿಗಳನ್ನು ನೋಡುವ ಮುತುವರ್ಜಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೀಗಾಗಿಯೇ, ಪಟ್ಟಣದಲ್ಲಿ ರಾಮಕೃಷ್ಣಯ್ಯನವರು ಐದು ರೂ. ಡಾಕ್ಟರ್‌ ಅಂತಲೇ ಮನೆ ಮಾತಾಗಿದ್ದಾರೆ.  

ಉಚಿತ ಸೇವೆ ಉಂಟು
ಕೆಲವು ಬಡ ರೋಗಿಗಳು ಕಣ್ಣೀರಿಡುತ್ತಾ ಬರುತ್ತಾರೆ.  ಅಂಥವರಿಂದ ರಾಮಕೃಷ್ಣಯ್ಯನವರು ಹಣ ಪಡೆಯುವುದಿಲ್ಲ.  ಸಂಘಸಂಸ್ಥೆಗಳು ಬಡವರಿಗಾಗಿ ಏರ್ಪಡಿಸುವ ಆರೋಗ್ಯ ಶಿಬಿರಗಳಲ್ಲೂ ಈ ಡಾಕ್ಟರ್‌ ಉತ್ಸಾಹದಿಂದ ಪಾಲ್ಗೊಂಡು ಉಚಿತ ಚಿಕಿತ್ಸೆ ನೀಡುತ್ತಾರೆ.  ಈ ತನಕ ಲಕ್ಷಾಂತರ ಮಂದಿಗೆ ಚಿಕಿತ್ಸೆ  ನೀಡಿರುವ ರಾಮಕೃಷ್ಣಯ್ಯನವರಿಗೆ ಈ ವೃತ್ತಿಯ ಬಗ್ಗೆ ವಿಶೇಷ ಅಭಿಮಾನವಿದೆ. ಗ್ರಾಮೀಣ ಪ್ರದೇಶದ  ರೋಗಿಗಳಿಗೆ  ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಲು ಹಣ ಎಲ್ಲಿಂದ ಬರಬೇಕು?  ಸಣ್ಣ ಗ್ರಾಮದಲ್ಲಿ ಒಬ್ಬ ರೈತನ ಮಗನಾಗಿ  ಹುಟ್ಟಿ ಬೆಳೆದು ನಾನು ವೃತ್ತಿ ಜೀವನ ಆರಂಭಿಸುವಾಗ  ಇಲ್ಲಿನ ಜನರ ಸ್ಥಿತಿ, ಹಣ ಕಾಸಿನ ತೊಂದರೆ ಇವೆಲ್ಲವನ್ನೂ ನೋಡಿದ್ದೇನೆ. ಈಗಲೂ ಪರಿಸ್ಥಿತಿ ಏನೂ ಬದಲಾಗಿಲ್ಲ. 
 ನಮ್ಮ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಿ ಅವರ ಯೋಗಕ್ಷೇಮದ ಬಗ್ಗೆ ಹೆಚ್ಚು ಕೇರ್‌ ತಗೋಬೇಕು ಎಂಬ ಆಸೆ-ಕನಸು  ನನಗಿತ್ತು. ಅದನ್ನು ನನಸು ಮಾಡಿಕೊಂಡಿದೀನಿ. ಸ್ವಲ್ಪ ಮನದಲ್ಲಿ ಆಳವಾಗಿ ಬೇರೂರಿತ್ತು. ನಮ್ಮ ಗ್ರಾಮ ಸುತ್ತಲಮುತ್ತಲ ಗ್ರಾಮದ ಜನರ ಈ ಸೇವೆಗೆ ಮಾಡುವ ಅಪರೂಪದ ಅವಕಾಶ ಸಿಕ್ಕಿದೆಯಲ್ಲ, ಅದು ನನ್ನ ಅದೃಷ್ಟ ಎನ್ನುತ್ತಾ ಸಾರ್ಥಕತೆಯನ್ನು ವ್ಯಕ್ತಪಡಿಸುತ್ತಾರೆ ಡಾ.ರಾಮಕೃಷ್ಣಯ್ಯ.

ಗಂಜಾಂ ಮಂಜು 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.