CONNECT WITH US  

ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಜಾತ್ರಾ ಕುಸ್ತಿ

ನಂಜನಗೂಡು (ಸುತ್ತೂರು): ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ನಡೆದ ಕುಸ್ತಿಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ
ಮಾಡಿದವು.

ಪ್ರಾರಂಭದಲ್ಲಿ ನಡೆದ ಅರ್ಧ ತಾಸಿನ ಸಮಯದ ಕುಸ್ತಿಯು ಮೈಸೂರಿನ ಫೈಲ್ವಾನ್‌ ಸೈಯ್ಯದ್‌ ಜಮೀಲ್‌ ಹಾಗೂ ಬೆಂಗಳೂರಿನ ಪೈ.
ಕಾಂತರಾಜು ನಡುವೆ ನಡೆದು ಇಬ್ಬರು ಸಮಬಲ ಸಾಧಿಸಿದರು. ನಂತರ ಆರಂಭವಾಗಿದ್ದು ಎರಡು ರಾಜ್ಯಗಳ ಮಲ್ಲರ ನಡುವೆ. ಮಹಾರಾಷ್ಟ್ರದ
ಕೊಲ್ಲಾಪುರದ ಗಂಗಾವೇಷ್‌ ತಾಲೀಮ್‌ ಪೈ. ಸಿಕಂದರ್‌ ಹಾಗೂ ಕರ್ನಾಟಕ ಕುಮಾರ ಪ್ರಶಸ್ತಿ ವಿಜೇತ ವೆಂಕಟೇಶ ಪಾಟೀಲ್‌ ಜಾತ್ರಾ ಕುಸ್ತಿಯ
ಗೆಲುವಿಗಾಗಿ ಖಾಡಾ ಖಾಡಿಯಾಗಿ ತೀವ್ರ ಸ್ಪರ್ಧೆ ನಡೆಸಿದರು.

ನಾಲ್ಕು ದಶಕಗಳ ಕಾಲ ಕೇಂದ್ರ ಹಾಗೂ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ರಾಜಕೀಯದ ಚದುರಂಗದ ಪಟ್ಟುಗಳನ್ನು ಹಾಕುತ್ತ ಬಂದ ರಾಜ್ಯದ ಕಂದಾಯ ಸಚಿವ ವಿ. ಶ್ರೀನಿವಾಸ್‌ ಪ್ರಸಾದ್‌ ಸಮ್ಮುಖದಲ್ಲಿ ವೀರಾವೇಶದಿಂದ ತಮ್ಮದೇ ಆದ ಕುಸ್ತಿ ಕಲೆಯ ಪಟ್ಟುಗಳ ಮೂಲಕ ಮದ ಗಜಗಳಂತೆ ಒಬ್ಬರ ಮೇಲೊಬ್ಬರು ತಮ್ಮ ಶಕ್ತಿ ಸಾಮರ್ಥ್ಯಗಳ ಕಲಾ ಚಾಕಚಕ್ಯತೆ ಪ್ರದರ್ಶನ ನಡೆಸಿದರು. 

ಒಂದು ಗಂಟೆಗಳ ಕಾಲ ನಡೆದ ಈ ಕುಸ್ತಿಯಲ್ಲಿ ಇಬ್ಬರು ಫೈಲ್ವಾನರು ತಮ್ಮದೇ ಆದ ಪಟ್ಟು ಮರು ಪಟ್ಟುಗಳನ್ನು ಹಾಕುತ್ತ ಅರ್ಧ ಗಂಟೆಗಳ
ಕಾಲ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಮಲ್ಲಯುದ್ಧದಲ್ಲಿ ಅತೀ ಕ್ಲಿಷ್ಟ ಎನ್ನಲಾದ ಜನಿವಾರದ ಪಟ್ಟುಗಳನ್ನೂ ಸಹ ಹಾಕಿದರು. ಕೊನೆಗೂ ಎರಡು ರಾಜ್ಯಗಳ ಕುಸ್ತಿ ಹೋರಾಟ ಸಮಬಲಗೊಂಡಿತು.

ಮಠಗಳಿಂದ ಸಂಸ್ಕೃತಿ ಉಳಿವು: ಅಂದು ರಾಜ ಮಹಾರಾಜರು, ಇಂದು ಮಠಾಧೀಶರು ಭಾರತಿಯ ಕಲೆ ಸಂಸ್ಕೃತಿಗಳನ್ನು ಉಳಿಸಿ
ಬೆಳೆಸುತ್ತಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್‌.ಮೋಹನ್‌ ಕುಮಾರ್‌ ಅಭಿಪ್ರಾಯ ಪಟ್ಟರು. 

ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸುತ್ತೂರಿನ ಜಾತ್ರಾ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾತನಾಡಿ,
ಜಾತಿ, ಮತ- ಪಂಥಗಳೆನ್ನದೇ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತಿರುವುದು ಸುತ್ತೂರು ಮಠದ ಹೆಗ್ಗಳಿಕೆಯಾಗಿದೆ ಎಂದರು. 

ರಾಜ್ಯ ವಿಧಾನ ಪರಿಷತ್ತಿನ ಉಪ ಸಭಾಪತಿ ಮರಿ ತಿಬ್ಬೆಗೌಡ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಂದಾಯ ಸಚಿವ ವಿ. ಶ್ರೀನಿವಾಸ್‌
ಪ್ರಸಾದ್‌, ವಸ್ತುಪ್ರದರ್ಶನದ ಅಧ್ಯಕ್ಷ ಆರ್‌. ಮೂರ್ತಿ, ಕೋಯಮೂತ್ತೂರಿನ ಶಾಸಕ ದಾಮೋದರ್‌, ಮಲ್ಲನಮೂಲೆ ಮಠಾಧ್ಯಕ್ಷ
ಶ್ರೀಚನ್ನಬಸವ ಸ್ವಾಮಿಗಳು, ವಾಟಾಳು ಪೀಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

Trending videos

Back to Top