CONNECT WITH US  

ಹೋಳಿ ವೇಳೆ ಸಂಭಾವ್ಯ ಉಗ್ರ ದಾಳಿ : ದಿಲ್ಲಿಯಲ್ಲಿ 2,500 ಛಾಯಾ ಸೈನಿಕರು

ಹೊಸದಿಲ್ಲಿ : ಹೋಳಿ ಹಬ್ಬದ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿ ನಡೆಯುವ ಭೀತಿ ಇರುವ ಹಿನ್ನೆಲೆಯಲ್ಲಿ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದ್ದು ಸುಮಾರು 2,500 ಛಾಯಾ ಸೈನಿಕರನ್ನು ಮಹಾ ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ದಿಲ್ಲಿಯ ಪ್ರಮುಖ ಹೊಟೇಲುಗಳು ಮತ್ತು ಆಸ್ಪತ್ರೆಗಳ ಮೇಲೆ ಉಗ್ರ ದಾಳಿ ನಡೆಯುವ ಸಂಭವವಿದೆ ಎಂಬ ಗುಪ್ತಚರ ದಳದ ಮಾಹಿತಿಯಯನ್ನು ಅನುಸರಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಮಾಜಿ ಪಾಕ್‌ ಸೈನಿಕನೋರ್ವ ತನ್ನ ಆರು ಮಂದಿ ಸಹಚರ ಉಗ್ರರೊಂದಿಗೆ ಕಳೆದ ವಾರ ಪಂಜಾಬ್‌ ಮೂಲಕ ಭಾರತಕ್ಕೆ ಒಳನುಸುಳಿ ಬಂದಿರುವ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ದಿಲ್ಲಿ, ಪಂಜಾಬ್‌ ಮತ್ತು ಅಸ್ಸಾಂ ಪೊಲೀಸರನ್ನು ಜಾಗೃತಗೊಳಿಸಲಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ದಿಲ್ಲಿಯಲ್ಲೂ ಉಗ್ರರು ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳ ಮುನ್ನೆಚ್ಚರಿಕೆ ನೀಡಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕಟಿಸಿರುವ ವರದಿಯ ಪ್ರಕಾರ ದಿಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆಯನ್ನು ತಡೆಯುವ ಸಲುವಾಗಿ ಸುಮಾರು 2,500 ಅರೆ ಸೈನಿಕ ಸಿಬಂದಿಗಳನ್ನು ನಿಯೋಜಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

Trending videos

Back to Top