CONNECT WITH US  

ಹಿಂದೂ ಪುರುಷ, ಹಿಂದೂ ಮಹಿಳೆ ಅಂತೆಲ್ಲಾ ಇಲ್ಲ: ಸುಪ್ರೀಂ

ಹೊಸದಿಲ್ಲಿ: ಹಿಂದೂ ಧರ್ಮದಲ್ಲಿ ಹಿಂದೂ ಪುರುಷ ಅಥವಾ ಹಿಂದೂ ಮಹಿಳೆ ಎಂಬ ಹೆಸರುಗಳು ಇಲ್ಲ. ಹಿಂದೂ ಎಂದರೆ ಹಿಂದೂ ಎಂತಲೇ ಅರ್ಥ ಎಂದು ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೂ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದೇಗುಲಗಳಲ್ಲಿ ಆರಾಧನೆ ಮಾಡುವ ಹಕ್ಕನ್ನು ಮಹಿಳೆಯರಿಗೆ ನಿರಾಕರಿಸಿದರೆ ಸಂವಿಧಾನದಲ್ಲಿನ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಎಚ್ಚರಿಸಿದೆ.

ಆದರೆ ಇದಕ್ಕೆ ತದ್ವಿರುದ್ಧವಾದ ವಾದ ಮಂಡಿಸಿರುವ ಶಬರಿಮಲೆ ಅಯ್ಯಪ್ಪ ದೇಗುಲ ಮಂಡಳಿ ಹಾಗೂ ಕೇರಳ ಸರಕಾರ, ಶತಮಾನಗಳಿಂದಲೂ ಮಹಿಳೆಯರಿಗೆ ಅಯ್ಯಪ್ಪ ದೇಗುಲದಲ್ಲಿ ನಿಷೇಧ ಪಾಲಿಸಿಕೊಂಡು ಬರಲಾಗಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ದೇಗುಲದಲ್ಲಿರುವ ಅಯ್ಯಪ್ಪ ಬ್ರಹ್ಮಚಾರಿ. ಮಗುವಿಗೆ ಜನ್ಮನೀಡುವ ಸಾಮರ್ಥ್ಯ ಹೊಂದಿರುವ ಮಹಿಳೆಯರು ದೇಗುಲಕ್ಕೆ ಬಂದರೆ ಅಪವಿತ್ರವಾಗುತ್ತದೆ ಎಂದು ಹೇಳಿವೆ. ಆದರೆ ಈ ವಾದ ಸಂಪ್ರದಾಯ ಹಾಗೂ ಆಚರಣೆ ಆಧರಿತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Trending videos

Back to Top