CONNECT WITH US  

ದಿಲ್ಲಿ ಈಗ ವಿಶ್ವದ ಗರಿಷ್ಠ ವಾಯು ಮಾಲಿನ್ಯದ ನಗರವಲ್ಲ : WHO ವರದಿ

ಹೊಸದಿಲ್ಲಿ : ಭಾರತದ ರಾಜಧಾನಿ ದಿಲ್ಲಿ ಈಗ ವಿಶ್ವದ ಗರಿಷ್ಠ ಮಾಲಿನ್ಯದ ನಗರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ಇಂದು ಗುರುವಾರ ಬಿಡುಗಡೆಗೊಂಡಿರುವ ವಿಶ್ವದ ಮಹಾ ನಗರಗಳ ವಾಯು ಗುಣಮಟ್ಟದ ಅಂಕಿ ಅಂಶಗಳ ಆಧಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ದಿಲ್ಲಿಗೆ ' ಕ್ಲೀನ್‌ ಸರ್ಟಿಫಿಕೇಟ್‌ ' ನೀಡಿದೆ.

ವಿಶ್ವದ 103 ದೇಶಗಳ 3,000 ನಗರಗಳ ಪೈಕಿ ದಿಲ್ಲಿಯ ವಾಯು ಗುಣಮಟ್ಟವು 2.5 ಪಿಎಂ (ಫೈನ್‌ ಪಾರ್ಟಿಕ್ಯುಲೇಟ್‌ ಪೊಲ್ಯುಶನ್‌) ಪ್ರಮಾಣದಲ್ಲಿದ್ದು ಆ ಪ್ರಕಾರ ದಿಲ್ಲಿ 11ನೇ ಸ್ಥಾನದಲ್ಲಿದೆ. ಇದೇ ರೀತಿ ಪಿಎಂ 10 (ಕೋಯರ್ಸ್‌ ಪೊಲ್ಯುಶನ್‌ ಪಾರ್ಟಿಕಲ್ಸ್‌) ಪ್ರಮಾಣದ ಆಧಾರದಲ್ಲಿ ದಿಲ್ಲಿಯು 25ನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.

2014ರ ಬಳಿಕ ದಿಲ್ಲಿಯ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಯಾಗಿರುವುದು ಈ ಅಂಕಿ ಅಂಶಗಳಿಂದ ಸಾಬೀತಾಗಿದೆ. 2014ರಲ್ಲಿ ದಿಲ್ಲಿಯ ವಾಯು ಗುಣಮಟ್ಟವು ಪಿಎಂ 2.5ರ ಮಟ್ಟದಲ್ಲಿ ಅತ್ಯಂತ ಕಳಪೆಯಾಗಿದ್ದು ವಿಶ್ವದ ಅತ್ಯಧಿಕ ವಾಯು ಮಾಲಿನ್ಯದ ಮಹಾನಗರಿ ಎಂಬ ಕುಖ್ಯಾತಿಯನ್ನು ಪಡೆದಿತ್ತು.

ಆದರೆ ಆ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೇವಲ 1,600 ನಗರಗಳನ್ನು ಮಾತ್ರವೇ ಅವಲೋಕನಕ್ಕೆ ಗುರಿಪಡಿಸಿತ್ತು. ಈ ಬಾರಿ ಅದು ಇನ್ನೂ 1,400 ನಗರಗಳನ್ನು ಸೇರಿಸಿಕೊಂಡು ತನ್ನ ಅವಲೋಕನ ನೆಲೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದೆ. ಹಾಗಾಗಿ ದಿಲ್ಲಿಯು ಹೊಂದಿದ್ದ ಕುಖ್ಯಾತಿಯ ಅಗ್ರ ಪಟ್ಟ ಈಗ ತೊಲಗಿದೆ; ಪರಿಣಾಮವಾಗಿ ವಿಶ್ವದ ಅತ್ಯಧಿಕ ವಾಯು ಮಾಲಿನ್ಯದ ನಗರಗಳ ಪೈಕಿ ದಿಲ್ಲಿ ಈಗ 11ನೇ ಕ್ರಮಾಂಕದಲ್ಲಿದೆ.

Trending videos

Back to Top