CONNECT WITH US  

ಹಿಂದೂಗಳ ಜನಸಂಖ್ಯೆ ಕಡಿಮೆಯಾಗಲು ನಪುಂಸಕತೆಯೇ ಕಾರಣ !ತೊಗಾಡಿಯಾ

ಸೂರತ್‌ : ಹಿಂದೂಗಳ ಜನಸಂಖ್ಯೆ ಕಡಿಮೆಯಾಗಲು ಹಿಂದೂ ಗಂಡಸರಲ್ಲಿ ಬೆಳೆಯುತ್ತಿರುವ ನಪುಂಸಕತೆಯೇ ಕಾರಣ ಎಂದು ವಿಶ್ವಹಿಂದು ಪರಿಷತ್‌ ನಾಯಕ ಪ್ರವೀಣ್‌ ತೊಗಾಡಿಯಾ ಇನ್ನೊಂದು ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ. ಅಲ್ಲದೆ ಸ್ವತಃ ವೈದ್ಯರಾಗಿರುವ ತೊಗಾಡಿಯಾ ಅವರು ಯುವಕರಿಗೆ ಪುರಷತ್ವ ಪಡೆದು ಹೆಚ್ಚೆಚ್ಚು ಮಕ್ಕಳನ್ನು ಪಡೆಯಲು ಔಷಧಿಯೊಂದನ್ನೂ ಬಿಡುಗಡೆ ಮಾಡಿದ್ದಾರೆ. 

ಗುಜರಾತ್‌ನ ಭಾರುಚ್‌ ಜಿಲ್ಲೆಯಲ್ಲಿ ಸಂಘದ ಸಭೆಯೊಂದರಲ್ಲಿ ಮಾತನಾಡಿದ ತೋಗಾಡಿಯಾ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ  ಬೆಳೆಯುತ್ತಿರುವುದನ್ನು ತಡೆಯಲು ಹಿಂದೂ  ದಂಪತಿಗಳು ಹೆಚ್ಚೆಚ್ಚು ಮಕ್ಕಳನ್ನು ಪಡೆಯಬೇಕೆಂದು  ಕರೆ ನೀಡಿದ್ದಾರೆ. 

ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುತ್ತಿರುವುದು  ಮತ್ತು ಲವ್‌ ಜಿಹಾದ್‌ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗುತ್ತಿದೆ.ಅಲ್ಲದೆ ಹಿಂದೂ ಗಂಡಸರಲ್ಲಿ ಬೆಳೆಯುತ್ತಿರುವ  ನಪುಂಸಕತೆಯೂ  ಜನಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ ಎಂದರು

ತಂಬಾಕು ಸೇವನೆಯೂ ನಪುಂಸಕತ್ವಕ್ಕೆ ಕಾರಣವಾಗುತ್ತದೆ ಹಾಗಾಗಿ ಹಿಂದೂ ಯುವಕರು ಅದನ್ನು ತ್ಯಜಿಸಲು ತೊಗಾಡಿಯಾ ಕರೆ ನೀಡಿದರು. 

ಇದೇ ವೇಳೆ ತಾನೇ ತಯಾರಿಸಿದ ಔಷಧಿಯನ್ನು ತೋರಿಸಿದ ತೊಗಾಡಿಯಾ ಈ ಔಷಧಿಗೆ ಮಾರುಕಟ್ಟೆಯಲ್ಲಿ 600 ರೂಪಾಯಿ ಬೆಲೆ ಇದೆ ,ನಾನು ನಿಮಗೆ ಇಲ್ಲಿ 500 ರೂಪಾಯಿಗೆ ನೀಡುತ್ತೇನೆ. ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಿಮ್ಮ ಹೆಂಡತಿಗೆ ಕೊಡಿ . ಆಹಾರದ ಜೊತೆ ಸೇವಿಸಿ ಸಧೃಡರಾಗಿ ಉಳಿದು ಹೆಚ್ಚೆಚ್ಚು ಮಕ್ಕಳನ್ನು ಪಡೆಯಿರಿ ಎಂದರು.

ಸಮಾರಂಭದಲ್ಲಿ 50 ಕ್ಕೂ ಹೆಚ್ಚು ಯುವಕರಿಗೆ ಧರ್ಮ ರಕ್ಷಣೆಗಾಗಿ ತ್ರಿಶೂಲ ದೀಕ್ಷೆ ನೀಡಲಾಯಿತು. 

Trending videos

Back to Top