CONNECT WITH US  

30 ದಿನದೊಳಗೆ ವಿವಾಹ ನೋಂದಣಿ ಕಡ್ಡಾಯ

ನವದೆಹಲಿ: ಅನಿವಾಸಿ ಭಾರತೀಯರು ವಿವಾಹವಾದ 30 ದಿನಗಳೊಳಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿಫ‌ಲವಾದರೆ ಅವರ ಪಾಸ್‌ಪೋರ್ಟ್‌ ಹಿಂಪಡೆಯಲು ಅವಕಾಶ ಕಲ್ಪಿಸಿರುವ ಹೊಸ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.

ಅನಿವಾಸಿ ಭಾರತೀಯರು ವಿವಾಹದ ನೆಪದಲ್ಲಿ ಮಾಡುತ್ತಿರುವ ಮೋಸ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಮೋಸ ಮಾಡಿದವರ ಸ್ವತ್ತುಗಳನ್ನು ಜಪ್ತಿ ಮಾಡಲೂ ನ್ಯಾಯಾಲಯಕ್ಕೆ ಅವಕಾಶ ನೀಡಿದೆ.

ಭಾರತದಲ್ಲಿ ಅಥವಾ ಹೊರ ದೇಶಗಳಲ್ಲಿ ಭಾರತೀಯ ಮಹಿಳೆಯನ್ನು ವಿವಾಹವಾದರೂ ಇದು ಅನ್ವಯವಾಗುತ್ತದೆ. ರಾಜ್ಯಸಭೆಯಲ್ಲಿ ಇದು ಅನುಮೋದನೆ ಪಡೆಯುವ ಸಾಧ್ಯತೆ ಕಡಿಮೆಯಾಗಿದ್ದು, ಜೂನ್‌ 3 ರಂದು ಮರುಆರಂಭವಾಗುವ ಬಜೆಟ್‌ ಅಧಿವೇಶನದಲ್ಲಿ ಇದು ಚರ್ಚೆಗೆ ಒಳಗಾಗುವ ಸಾಧ್ಯತೆಯಿದೆ.


Trending videos

Back to Top