CONNECT WITH US  

ಉ.ಪ್ರ : ಲೋಕ ಕಲ್ಯಾಣ ಮಿತ್ರರ ನೇಮಕಾತಿಗೆ ಮಾಯಾವತಿ ಟೀಕೆ

ಲಕ್ನೋ : ಜನರಿಗೆ ಸರಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಬ್ಲಾಕ್‌ ಮಟ್ಟದಲ್ಲಿ "ಲೋಕ ಕಲ್ಯಾಣ ಮಿತ್ರ' ರನ್ನು ನೇಮಿಸುವ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

"ಲೋಕ ಕಲ್ಯಾಣ ಮಿತ್ರರನ್ನು ನೇಮಿಸುವ ಬಿಜೆಪಿ ಸರಕಾರದ ಈ ಕ್ರಮದಿಂದ ಅನಗತ್ಯವಾಗಿ  ಸರಕಾರದ ಹಣ ಖರ್ಚಾಗುವುದರ ಹೊರತು ಬೇರೇನೂ ಲಾಭವಾಗುವುದಿಲ್ಲ. ಇದರಿಂದ ಬಡವರಿಗೆ, ಜನರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ' ಎಂದು ಮಾಯಾವತಿ ಹೇಳಿದ್ದಾರೆ.

ಲೋಕ ಕಲ್ಯಾಣ ಮಿತ್ರರನ್ನು ನೇಮಿಸುವಲ್ಲಿ  ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗೆ ತನ್ನ ತಳ ಮಟ್ಟದ ಕಾರ್ಯಕರ್ತರಲ್ಲಿ ಯಾವುದೇ ಹುರುಪು, ಉಲ್ಲಾಸ ಇಲ್ಲವೆಂಬ ಅಭಿಪ್ರಾಯ ಇರುವುದು ಸ್ಪಷ್ಟವಾಗುತ್ತದೆ ಎಂದು ಮಾಯಾವತಿ ಹೇಳಿದ್ದಾರೆ. 


Trending videos

Back to Top