ಮಟನ್ ಖೀಮಾ

ಏನೇನು ಬೇಕು?: ಮಟನ್ ಖೀಮಾ 1 ಕೆ. ಜಿ, ಬೆಣ್ಣೆ, ಗಟ್ಟಿ ಮೊಸರು: ಅರ್ಧ ಲೀಟರ್, ಬೆಣ್ಣೆ ಒಂದು ಕಪ್, 3 ಈರುಳ್ಳಿ, 2 ಟೊಮ್ಯಾಟೊ, 3 ಚಮಚ ಮೆಣಸಿನ ಪುಡಿ, ಲವಂಗ, ಎಲೆ,ಚೆಕ್ಕೆ, ಏಲಕ್ಕಿ, 7 ಹಸಿಮೆಣಸು, ಕೊತ್ತಂಬರಿ ಸೊಪ್ಪು 1 ಬೌಲ್, ಉಪ್ಪು, ಎಣ್ಣೆ.
ಮಾಡೋದು ಹೇಗೆ?:
-ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಚಕ್ಕೆ, ಲವಂಗ, ಏಲಕ್ಕಿ, ಎಲೆ, ಹಸಿಮೆಣಸು ಹಾಕಿ ತಿರುವಿ
-1 ನಿಮಿಷ ಬಿಟ್ಟು ಈರುಳ್ಳಿ, ಹಾಕಿ ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
-ಇದಕ್ಕೆ 1 ಕಪ್ ನೀರು ಹಾಕಿ ಕುದಿಸಿ ಪಕ್ಕಕ್ಕಿಡಿ.
-ಇನ್ನೊಂದು ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಹಾಕಿ ಬಿಸಿಯಾದಾಗ ಖೀಮಾ ಹಾಕಿ ತಿರುವಿ.
- ಅರ್ಧ ಬೆಂದಾಗ ಟೊಮ್ಯಾಟೋ ಹಾಕಿ. ನಂತರ ಬೆಣ್ಣೆಹಾಕಿ ಹುರಿಯಿರಿ.
-ಮುಕ್ಕಾಲಂಶ ಬೆಂದ ಮೇಲೆ ಮೊದಲೇ ರೆಡಿ ಮಾಡಿರುವ ಸ್ಪೈಸಿ ಮಿಶ್ರಣ ಹಾಕಿ.
- ಸ್ವಲ್ಪ ಬಿಸಿಯಾಗುತ್ತಿರುವಾಗ ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ತಿರುವಿ. ತಳಹತ್ತಲು ಬಿಡಬೇಡಿ.
-ಇದಕ್ಕೆ ಮೊಸರು ಹಾಕಿ ಸಿಮ್ನಲ್ಲಿಡಿ. ಸ್ವಲ್ಪ ಗಾಳಿಯಾಡುವಂತೆ ಬಾಣಲೆಯ ಮುಚ್ಚಲ ಹಾಕಿ.
- ಖೀಮಾ ಸಂಪೂರ್ಣವಾಗಿ ಬೆಂದಾಗ ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ.
ಇದನ್ನು ಚಪಾತಿ, ರೊಟ್ಟಿ ಜೊತೆ ಬಿಸಿ ಇರುವಾಗಲೇ ತಿನ್ನಲು ರುಚಿ.