CONNECT WITH US  

ನ.28:ಡಾ| ವಿ.ಕೃ.ಗೋಕಾಕ ಸಾಹಿತ್ಯ ಮತ್ತು ಬದುಕು-ವಿಚಾರ ಸಂಕಿರಣ

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಮತ್ತು ಡಾ| ವಿ. ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಹಾವೇರಿ ಜಂಟಿಯಾಗಿ  ನ. 28ರಂದು ಮಾಟುಂಗ ಪಶ್ಚಿಮದ ಸಂಘದ ಸಮರಸ ಭವನದಲ್ಲಿ ಸಂಜೆ 5 ಗಂಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ವಿ. ಕೃ. ಗೋಕಾಕ  ಸಾಹಿತ್ಯ ಬದುಕು  ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸತೀಶ ಕುಲಕರ್ಣಿ ಮತ್ತು ಮೈಲಾರಪ್ಪ ತಳ್ಳಳ್ಳಿ  ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ಜರಗಲಿದ್ದು,  ಮುಖ್ಯ ಉಪಾನ್ಯಾಸಕರಾಗಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ  ಹಾಗೂ ನಿವೃತ್ತ, ಹಿರಿಯ ಐ. ಎ. ಎಸ್‌. ಅಧಿಕಾರಿ, ವಿ. ಕೃ. ಗೋಕಾಕ ಟ್ರಸ್ಟಿನ ಹಿರಿಯ ಸದಸ್ಯ ಅನಿಲ್‌ ಗೋಕಾಕ್‌  ಭಾಗವಹಿಸಲಿದ್ದಾರೆ.  ನಾಡೋಜ ಡಾ| ಪಾಟೀಲ ಪುಟ್ಟಪ್ಪ  ಅಧ್ಯಕ್ಷತೆ ವಹಿಸಲಿದ್ದಾರೆ. ಗೋಕಾಕರ ಕವಿತೆಗಳ ವಾಚನ ಕಾರ್ಯಕ್ರಮವನ್ನು ಮುಂಬಯಿಯ  ರಂಗ ಕಲಾವಿದರು ಮತ್ತು ಕವಿಗಳು ಪ್ರಸ್ತುತಪಡಿಸಲಿದ್ದಾರೆ.

ಡಾ| ಪಾಟೀಲ ಪುಟ್ಟಪ್ಪ 

ಕನ್ನಡದ ಪ್ರಸಿದ್ಧ ಲೇಖಕ, ಪತ್ರಕರ್ತರಾದ 94ರ ಹರೆಯದ ಪಾಟೀಲ ಪುಟ್ಟಪ್ಪನವರು ಮೂಲತಃ ಧಾರವಾಡದವರು. ಕ್ಯಾಲಿಪೋರ್ನಿಯ  ವಿವಿ, ಲಾಸ್‌ ಎಂಜಲೀಸ್‌ನಿಂದ 1949ರಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕನ್ನಡ ದಿನ ಪತ್ರಿಕೆ ವಿಶ್ವವಾಣಿ ಮತ್ತು ವಾರಪತ್ರಿಕೆ ಪ್ರಪಂಚದ  ಸ್ಥಾಪಕ ಸಂಪಾದಕರಾಗಿದ್ದರು. 1940 -1950 ನೇ ಸಾಲಿನಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಿ ಇದ್ದ ಪ್ರದೇಶಗಳ ಏಕೀಕರಣಕ್ಕಾಗಿ ಹಾಗೂ ಕನ್ನಡ ಭಾಷಾ ಚಳವಳಿ ಹೂಡಿದ ಹೋರಾಟಗಾರರು. ಕಳೆದ 30 ವರ್ಷಗಳಿಂದ ಧಾರವಾಡದ  ವಿದ್ಯಾವರ್ಧಕ  ಸಂಘದ ಅಧ್ಯಕ್ಷರಾಗಿದ್ದಾರೆ.

1962ರಿಂದ 1974ರ ವರೆಗೆ  ರಾಜ್ಯಸಭೆಯಲ್ಲಿ ಕರ್ನಾಟಕದ  ಪ್ರತಿನಿಧಿಯಾಗಿದ್ದರು. ಕನ್ನಡ ವಾಚ್‌ ಡಾಗ್‌  ಕಮಿಟಿ(ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ)ಯ ಮೊದಲ ಅಧ್ಯಕ್ಷರಾಗಿದ್ದರು.    2003ರಲ್ಲಿ  70 ನೆಯ ಸಾಹಿತ್ಯ ಸಮ್ಮೇಳನದ ಇವರು ಅಧ್ಯಕ್ಷರಾಗಿದ್ದರು.  ಹಲವಾರು ಪ್ರತಿಷ್ಠಿತ ಬಹುಮಾನಗಳಿಂದ ಪುರಸ್ಕೃತರಾಗಿರುವ ಇವರು ನಾಡೋಜ ಬಿರುದು ಪಡೆದವರು.

ಡಾ|  ಜಿ. ಎನ್‌. ಉಪಾಧ್ಯ

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ  ಮುಖ್ಯಸ್ಥರಾಗಿರುವ ಇವರು ಮೂಲತಃ ಉಡುಪಿ ತಾಲೂಕಿನ ಕೋಟದವರು. ಮುಂಬಯಿ ವಿವಿಯಿಂದ ಎಂ. ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ರ್‍ಯಾಂಕ್‌ನೊಂದಿಗೆ ಗಳಿಸಿಕೊಂಡರು. "ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಅವರ ಪಿ. ಎಚ್‌. ಡಿ. ಮಹಾಪ್ರಬಂಧ.  ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ  ಕೆಲವು ವರ್ಷ ಉಪ ಸಂಪಾದಕರಾಗಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರ, ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮೊದಲಾದ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಮಹಾ ರಾಷ್ಟ್ರ ಸರಕಾರದ ಗುಪ್ತಚರ ಇಲಾಖೆ ಮೊದಲಾದ ಉನ್ನತ ಸಂಸ್ಥೆಗಳಲ್ಲಿ ವಿಷಯ ತಜ್ಞರಾಗಿ,  ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಶಿಕ್ಷಣ ವಿಭೂಷಣ ಪ್ರಶಸ್ತಿ ಪುರಸ್ಕೃತ ಅವರು ಅಭಿಜಿತ್‌ ಪ್ರಕಾಶನದ ಮೂಲಕ 50ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.

ಅನಿಲ್‌ ವಿ. ಗೋಕಾಕ

ಅನಿಲ್‌ ವಿನಾಯಕ ಗೋಕಾಕರು ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ. ಎ. ಪದವೀಧರರು.  ಇವರು 1964ರಿಂದ ಮಹಾರಾಷ್ಟ್ರ ವಲಯದ  ಭಾರತೀಯ ಆಡಳಿತ ಸರ್ವೀಸ್‌ನಲ್ಲಿ, ಮಹಾರಾಷ್ಟ್ರ ಸರಕಾರ ಮತ್ತು ಭಾರತ ಸರಕಾರದ ಆಡಳಿತ ವಿಭಾಗದಲ್ಲಿ, ಮಹಾರಾಷ್ಟ್ರ ಸರಕಾರದ ಆಧೀನದಲ್ಲಿ 1970ರಿಂದ 1972ರ ವರೆಗೆ ಧುಳೆ ಹಾಗೂ 1979ರಿಂದ 1981ರ ವರೆಗೆ ಥಾಣೆಯ ಕಲೆಕ್ಟರರಾಗಿ, ಮಹಾರಾಷ್ಟ್ರ ಹೌಸಿಂಗ್‌ ಮತ್ತು ಏರಿಯಾ ಡೆವಲೆಪ್‌ ಮೆಂಟ್‌ ಅಥಾರಿಟಿ  ಉಪಾಧ್ಯಕ್ಷ ಹಾಗೂ ಮುಖ್ಯ  ಅಧಿಕಾರಿಯಾಗಿ, ಕಾಡು ಕೃಷಿ ಉದ್ಯೋಗದ ಕಾರ್ಯದರ್ಶಿಯಾಗಿದ್ದರು. ಭಾರತ ಸರಕಾರದ ಆಧೀನದಲ್ಲಿರುವ ಭಾರತ ಸರಕಾರದ ಇಂಡಸ್ಟ್ರಿಯಲ್‌ ಡೆವೆಲಪ್‌ಮೆಂಟ್‌ ವಿಭಾಗದ ಜತೆ ಕಾರ್ಯದರ್ಶಿ, ಪುಡ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ಇದರ  ಮ್ಯಾನೇಜಿಂಗ್‌ ಡೈರೆಕ್ಟರ್‌, ಭಾರತ ಸರಕಾರದ ಗೊಬ್ಬರೋದ್ಯೋಗದ ಕಾರ್ಯದರ್ಶಿಯಾಗಿದ್ದರು. ರಿಸರ್ವ್‌ ಬ್ಯಾಂಕಿನ ಆರ್ಥಿಕ ವ್ಯವಹಾರ ಮತ್ತು  ಆರ್ಥಿಕ ವಂಚನೆಗಳ ಪರಿಹಾರದ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.   ಐnಛusಠಿrಜಿಚl ಖಜಿcknಛಿss ಟf ಐnಛಜಿಚ, ಖಛಿlಜಿcಟಞಞunಜಿcಚಠಿಜಿಟns ಜಿn ಐnಛಜಿಚ  ಕೃತಿಗಳು ಪ್ರಕಟಗೊಂಡಿವೆ. ಪ್ರೊ| ಗೋಕಾಕ ಅವರ ಭಾರತ ಸಿಂಧು ರಶ್ಮಿ ಗ್ರಂಥದ ಸಂಪಾದಕತ್ವವನ್ನು ಮಾಡಿದ್ದಾರೆ. 2005ರಿಂದ 2008ರ ವರೆಗೆ ಶ್ರೀ ಸಾಯಿ ವಿವಿ ಪುಟ್ಟಪರ್ತಿಯ ಕುಲಪತಿ ಆಗಿದ್ದರು. ಪ್ರಸ್ತುತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಗೋಸ್ಕರ ದ ಇಂಡಿಯನ್‌ ನ್ಯಾಷನಲ್‌ ಟ್ರಸ್ಟ್‌' ಮತ್ತು ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಡ್ಮಿನಿಸ್ಟ್ರೇಷನ್‌  ಕರ್ನಾಟಕ ಪ್ರಾದೇಶಿಕ ವಿಭಾಗ  ಬೆಂಗಳೂರು  ಇಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

Trending videos

Back to Top