CONNECT WITH US  

ಮೀರಾರೋಡ್‌ ಸೈಂಟ್‌ ಜೋಸೆಫ್‌ ಇಗರ್ಜಿಯಲ್ಲಿ ಕನ್ಯಾಮೇರಿ ಜನ್ಮೋತ್ಸವ

ಮುಂಬಯಿ: ಮೀರಾ ರೋಡ್‌ ಪೂರ್ವ ಸೈಂಟ್‌  ಜೋಸೆಫ್ಸ್  ಇಗರ್ಜಿಯಲ್ಲಿ ಸೆ. 8ರಂದು ಬೆಳಗ್ಗೆ ಏಸುಕ್ರಿಸ್ತರ ಜನನಿದಾತೆ ಕನ್ಯಾಮೇರಿ ಜನ್ಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಕರ್ಮೆಲಿತ್‌ ಸಮೂಹದ ಕರ್ನಾಟಕ -ಗೋವಾ ಪ್ರಾಂತ್ಯದ ಧರ್ಮಾಧಿಕಾರಿ ವಂದನೀಯ ರೆ| ಫಾ| ಆರ್ಚಿಬಾಲ್ಡ್‌ ಗೊನ್ಸಾಲ್ವಿಸ್‌  ಅವರು ಕೃತಜ್ಞತಾ ದಿವ್ಯಪೂಜೆ ನೆರವೇರಿಸಿ ಆಶೀರ್ವಚನ ನೀಡಿ,  ಮೇರಿಮಾತೆ ಕೌಟುಂಬಿಕ ಬದುಕನ್ನು ರೂಢಿಸುವಲ್ಲಿ ವಿಭಿನ್ನ ರೀತಿಯ ಚಿಂತನೆ ಮೈಗೂಡಿದ ದೇವಮಾತೆ ಆಗಿದ್ದಾರೆ. ಏಕೆಂದರೆ ಈ ಮಾತೆ ದೇವರ ಆಶಯದ ಪೂರ್ಣತೆ ತಿಳಿದವರು. ಆದ್ದರಿಂದ ಮಾತೆ ಮರಿಯಮ್ಮರನ್ನು ಕ್ರಿಶ್ಚಿ ಯನ್ನರು ಪ್ರಧಾನವಾಗಿ ನಂಬಿ, ಆರಾಧಿಸುತ್ತಾರೆ.  ಅವರ ಆದರ್ಶಗಳು ಬಂಧುತ್ವ, ಸಹೋದರತ್ವ ಮತ್ತು ಕೂಡು ಕುಟುಂಬವಾಗಿ ಬಾಳಲು ಪ್ರೇರಕವಾಗಿವೆ. ಮನುಕುಲದ ಪೂರ್ಣತೆಯ ಬಾಳಿಗೆ ಅವರ ಜೀವನಶೈಲಿ ಪೂರಕವಾಗಿದೆ. ಮಾತೆಯ ಅನುಗ್ರಹದಿಂದ ನಾವು ಸದಾ ಹರ್ಷೋಲ್ಲಾಸದಿಂದ ಸದ್ಭಾ ವನೆಯಿಂದ ಬಾಳುತ್ತಾ ಪರರಿಗೆ ಆದರ್ಶರಾಗಬೇಕು ಎಂದು ನುಡಿದರು.

ಸಂತ ಜೋಸೆಫ್‌'ಸ್‌ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಮೆಲ್ವಿನ್‌ ಡಿಕುನ್ಹಾ ಪ್ರಾರ್ಥನೆಗೈದು ಸ್ತ್ರೀಯರು ಸಂಸ್ಕೃತಿಯ ಪ್ರತಿರೂಪವಾಗಿದ್ದು ಸಂಸ್ಕೃತಿಯೇ ಪ್ರಕೃತಿಯಾಗಿದೆ. ಆದ್ದರಿಂದ  ಪ್ರಕೃತಿ ಆರಾಧನೆಯೇ ಸ್ತ್ರೀಯರ ಗೌರವವಾಗಿದೆ. ಮಾತೆಯ ಭಕ್ತಿಯೇ ಕುಟುಂಬವನ್ನು ಒಗ್ಗೂಡಿಸುತ್ತಿದೆ ಎಂದರು.

ರೆ| ಫಾ| ಲಾರೆನ್ಸ್‌  ಡಿಕುನ್ಹಾ, ರೆ| ಫಾ| ವಾಲ್ಟರ್‌ ಡಿಸೋಜಾ, ಫಾ| ರೊನಾಲ್ಡ್‌ ಡಿ'ಸೋಜಾ, ಫಾ| ಕಾನ್ನಿಯೋ ಕಡೊlì, ಫಾ| ಲ್ಯಾನ್ಸಿ ಮೆಂಡೋನ್ಸಾ, ಫಾ| ನೆಲ್ಸನ್‌ ಕಡೋìಜಾ ಭವ್ಯ ಪೂಜೆಯಲ್ಲಿ ಸಹಭಾಗಿಯಾಗಿದ್ದರು. ಬ್ರದರ್ ಹಾಗೂ ಸ್ನೇಹಸಾಗರ್‌ ಭಗಿನಿಯರು ಸೇರಿದಂತೆ ಅಪಾರ ಸಂಖ್ಯೆಯ ಮಾತೆ ಭಕ್ತರು ಧಾರ್ಮಿಕ  ವಿಧಿ-ವಿಧಾನಗಳನ್ನು ನಡೆಸಿದರು.

ಸೈಂಟ್‌  ಜೋಸೆಫ್‌ ಕೊಂಕಣಿ ವೆಲ್ಫೆàರ್‌ ಅಸೋಸಿಯೇಶನ್‌ನ ಸಹಯೋಗದೊಂದಿಗೆ ಕೊಂಕಣಿ ಪೂಜೆ ನೆರವೇರಿತು. ಪೂಜೆಯ ಬಳಿಕ ಭವ್ಯ ಮೆರವಣಿಗೆಯಲ್ಲಿ ವೆಲಂಕಣಿ ಮಾತೆಯ ಅಲಂಕೃತ ಪುತ್ಥಳಿಯೊಂದಿಗೆ ನೆರೆದ ಭಕ್ತ ಸಮೂಹ ಹಬ್ಬದ ಸಂಭ್ರಮವನ್ನು ನಗರಾದ್ಯಂತ ಪಸರಿಸುತ್ತಾ ಶುಭಹಾರೈಸಿದರು. ರಾಬರ್ಟ್‌  ಭಂಡಾರಿ ಅವರು ಸುಮಾರು 180 ಕೆಜಿ ಗಾತ್ರದ ಬೃಹದಾಕಾರದ ಕೇಕ್‌ ಪ್ರಾಯೋಜಿಸಿದ್ದು ಗುರುಗಳು ಕೇಕ್‌ ಕತ್ತರಿಸಿ ಮರಿಯ ಮಾತೆಯ  ಜನ್ಮೋತ್ಸವ ಸಂಭ್ರಮಿಸಿದರು.

ಅಸೋಸಿಯೇಶನ್‌ನ ಆಧ್ಯಾ ತ್ಮಿಕ ನಿರ್ದೇಶಕ ಫಾ| ಮೆಲ್ವಿನ್‌ ಡಿಕುನ್ಹಾ ನಿರ್ದೇಶನದಲ್ಲಿ ಆಚರಿಸ ಲ್ಪಟ್ಟ ವಾರ್ಷಿಕ ಉತ್ಸವದಲ್ಲಿ ಅಸೋ ಸಿಯೇಶನ್‌ ಅಧ್ಯಕ್ಷ ಡೈಗೋ ರೋಡ್ರಿಗಸ್‌, ಉಪಾಧ್ಯಕ್ಷ ವಿಲ್ಸನ್‌ ಡಿ'ಸೋಜಾ, ಕೋಶಾಧಿಕಾರಿ ಲಾರೇನ್ಸ್‌ ಮಥಾಯಸ್‌, ಜತೆ ಕಾರ್ಯದರ್ಶಿ ಜೆರಾಲ್ಡ್‌ ಡಿ'ಸೋಜಾ, ಜತೆ ಕೋಶಾಧಿಕಾರಿ ಜೋನ್‌ ಕೊರೆಯಾ, ಸಾಂಸ್ಕೃತಿಕ  ಕಾರ್ಯದರ್ಶಿ ಜೊಸ್ಸಿ ಗೊನ್ಸಾಲ್ವಿಸ್‌, ಜತೆ ಕಾರ್ಯದರ್ಶಿ ವಿಕ್ಟರ್‌ ಮಸ್ಕರೇನಸ್‌, ಮಾಜಿ ಪದಾಧಿಕಾರಿಗಳಾದ ಜೋನ್‌ ಕ್ರಾಸ್ತ, ಅರುಣ್‌ ನೊರೋನ್ಹಾ, ಡೆನಿಸ್‌ ರೆಬೆಲ್ಲೋ, ವಿಲ್ಡಾ ಸೆರಾವೋ ಸೇರಿದಂತೆ ಇತರ ಸದಸ್ಯರು ಪಾಲ್ಗೊಂಡ‌ು ಕರ್ನಾಟಕ ಕರಾವಳಿ ಕೊಂಕಣಿ ಕ್ರೈಸ್ತ ಜನತೆ ರೂಢಿಸಿರುವ ಈ ಸಾಂಪ್ರದಾಯಿಕ ಹಬ್ಬವನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರಕೃತಿ ಉತ್ಸವವಾಗಿ ಸಂಭ್ರಮಿಸಿದರು. 

ಚಿತ್ರ - ವರದಿ : ರೋನ್ಸ್‌ ಬಂಟ್ವಾಳ್‌


Trending videos

Back to Top