CONNECT WITH US  

ಬೆಳ್ತಂಗಡಿ: ಸಾರ್ವಜನಿಕ ಶನಿಪೂಜೆ, ಧಾರ್ಮಿಕ ಸಭೆ 

ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೋಮನಾಥ ಬಂಗೇರ ಮಾತನಾಡಿದರು.

ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬಿಲ್ಲವ ಮಹಿಳಾ ವೇದಿಕೆ, ಯುವ ಬಿಲ್ಲವ ವೇದಿಕೆ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ 164ನೇ ಗುರುಪೂಜೆ ಪ್ರಯುಕ್ತ ಸಾರ್ವಜನಿಕ ಶನಿಪೂಜೆ, ಧಾರ್ಮಿಕ ಸಭೆ ನಡೆಯಿತು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಸೋಮನಾಥ ಬಂಗೇರ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ನರೇಶ್‌ ಕುಮಾರ್‌ ಸಸಿಹಿತ್ಲು ಧಾರ್ಮಿಕ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್‌, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್‌ ಕುಮಾರ್‌ ಉಪ್ಪಾರ್‌, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಗೌರವಾಧ್ಯಕ್ಷ ಜಗದೀಶ್‌ ಬಂಗೇರ, ಕುವೆಟ್ಟು ಅಧ್ಯಕ್ಷ ಉಮೇಶ್‌ ಕುಮಾರ್‌, ಕಾರ್ಯದರ್ಶಿ ಸುಕೇಶ್‌ ಪೂಜಾರಿ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಾ ಎಂ. ಬಂಗೇರ, ಕಾರ್ಯದರ್ಶಿ ವಿಮಲಾ ಜೆ. ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್‌ ಪೂಜಾರಿ ಅನಿಲ, ಕಾರ್ಯದರ್ಶಿ ಅಜಿತ್‌ ಕುಮಾರ್‌ ಪಾದೆ, ಸಂಘದ ನಿರ್ದೇಶಕರಾದ ಶಾಂಭವಿ ಪಿ. ಬಂಗೇರ, ಚಂದ್ರಶೇಖರ ಕೋಟ್ಯಾನ್‌, ಚಂದ್ರಹಾಸ್‌ ಕೇದೆ, ಗೋಪಿನಾಥ್‌ ನ್ಯಾಯದಕಲ, ಸತೀಶ್‌ ಬಂಗೇರ ಕುವೆಟ್ಟು, ಜಯರಾಮ ಬಂಗೇರ, ರಾಮಚಂದ್ರ ನ್ಯಾಯದಕಲ, ಸುಲೋಚನಾ ನ್ಯಾಯದಕಲ, ಧನಲಕ್ಷ್ಮೀ ಚಂದ್ರಶೇಖರ್‌, ಅರ್ಪಿತಾ ರಮೇಶ್‌ ನ್ಯಾಯದಕಲ, ಪದ್ಮನಾಭ ಪೂಜಾರಿ, ಯಶೋಧರ ಪೂಜಾರಿ ವರಕಬೆ, ಲಲಿತಾ ಕೇದಳಿಕೆ, ವಿಮಲಾ ಜಯರಾಮ ವರಕಬೆ, ಜನಿತಾ ರಾಘವ ವರಕಬೆ, ಹರೀಶ್‌ ಕೋಟ್ಯಾನ್‌ ಮದ್ದಡ್ಕ, ಶಶಿಧರ ಆದೇಲು ಹಾಗೂ ಸಂಫದ ಸರ್ವಸದಸ್ಯರು ಉಪಸ್ಥಿತರಿದ್ದರು.

ಕುವೆಟ್ಟು ಬಯಲು ಗದ್ದೆಯಲ್ಲಿ ಮುಂಡೂರು ಗೋಪಾಲಕೃಷ್ಣ ಭಟ್‌ ಮಾಲಾಡಿ ಅವರು ಪೂಜಾ ವಿಧಿ- ವಿಧಾನ ನೆರವೇರಿಸಿದರು. ದಿಶಾಲಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಉಮೇಶ್‌ ಕುಮಾರ್‌ ಸ್ವಾಗತಿಸಿ, ಕುಶಾಲಪ್ಪ ಪೂಜಾರಿ ವಂದಿಸಿ, ಶಾಂತಾ ಜೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು.


Trending videos

Back to Top