CONNECT WITH US  

ಶೈಕ್ಷಣಿಕ ತಾಣವಾಗಿ ರಾಯಚೂರು

ಮಾನ್ವಿ: ತಿಂಗಳೊಳಗಾಗಿ ರಾಯಚೂರು ವಿಶ್ವವಿದ್ಯಾಲಯ ಘೋಷಣೆಯಾಗಲಿದ್ದು, ಮುಂದಿನ 10 ವರ್ಷದೊಳಗೆ ರಾಯಚೂರು ಶೈಕ್ಷಣಿಕ ತಾಣವಾಗಿ ಬೆಳೆಯಲಿದೆ ಎಂದು ಕಲಬುರಗಿ ವಿವಿ ಕೌನ್ಸಿಲ್‌ ಸದಸ್ಯ ರಜಾಕ್‌ ಉಸ್ತಾದ್‌ ಹೇಳಿದರು. ಪಟ್ಟಣದಲ್ಲಿ ನಡೆದ ನೂತನ ಸಿದ್ದಾರ್ಥ ಪದವಿ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಈಗಾಗಲೇ ಗುಲ್ಬರ್ಗಾ ವಿವಿಯಿಂದ ವಿಭಾಗಿಸಿ ರಾಯಚೂರು ವಿವಿ ಸ್ಥಾಪಿಸುವ ಕಾರ್ಯ ಕೊನೆ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ರಾಯಚೂರು ಪತ್ಯೇಕ
ವಿವಿ ಸ್ಥಾಪನೆಯಾಗುತ್ತದೆ. ರಾಯಚೂರಿನಲ್ಲಿ ಶೈಕ್ಷಣಿಕ ಪರ್ವ ಆರಂಭವಾಗಲಿದೆ ಎಂದರು. ಇದುವರೆಗೂ ಗುಲ್ಬರ್ಗಾ ವಿಶ್ವವಿದ್ಯಾಲಯ 440 ಪದವಿ ಕಾಲೇಜ್‌ಗಳನ್ನು ಹೊಂದುವ ಮೂಲಕ ಕರ್ನಾಟಕದಲ್ಲಿ ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಇದರಿಂದಾಗಿ ಪರೀಕ್ಷೆ ಮತ್ತು ಫಲಿತಾಂಶಗಳ ವಿಷಯದಲ್ಲಿ ಗೊಂದಲವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಎಂದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಅಧಿಕವಿದೆ ಎಂದರು. ಪದವಿ ಕಾಲೇಜ್‌ ಉದ್ಘಾಟಿಸಿ ಮಾತನಾಡಿದ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ, ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ದಾರ್ಥ ಪದವಿ ಕಾಲೇಜ್‌ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ, ನೂರಾರು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ತಾಪಂ ಮಾಜಿ ಸದಸ್ಯ ರಾಜಾ ವಸಂತ ನಾಯಕ, ವಕೀಲರ ಸಂಘದ ಅಧ್ಯಕ್ಷ ಅಯ್ಯಪ್ಪ ನಾಯಕ, ಪತ್ರಕರ್ತ ಪಿ.ಪರಮೇಶ, ಸಿದ್ದಾರ್ಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ ಮಾತನಾಡಿದರು. ನಯೋಪ್ರಾ ಅಧ್ಯಕ್ಷ ಸೈ.ಇಲಿಯಾಸ್‌ ಖಾದ್ರಿ, ನೇತಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಜಯಲಕ್ಷ್ಮೀ, ಬಿವಿಆರ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪದ್ಮಾವತಿ, ಜನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭುರಾಜ್‌ ಕೊಡ್ಲಿ, ಪ್ರಗತಿ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ತಾಜುದ್ದೀನ್‌, ಪತ್ರಕರ್ತ ತಾಯಪ್ಪ ಹೊಸೂರು, ವಕೀಲರಾದ ಎ.ಬಿ.ಉಪ್ಪಳಮಠ ಇತರರು ಉಪಸ್ಥಿತರಿದ್ದರು.


Trending videos

Back to Top