CONNECT WITH US  

ಕವಿ ವರ್ತಮಾನ ಮುಖೀಯಾಗಲಿ

ಮುದಗಲ್ಲ: ಭಾವನಾತ್ಮಕವಾಗಿ ಭೂತದ ಆಧಾರದ ಮೇಲೆ ವರ್ತಮಾನಕ್ಕೆ ಮುಖಾಮುಖೀಯಾಗಿ ಕವನ ರಚಿಸುವುದು ಕವಿಯ ಕೆಲಸವಾಗಬೇಕು ಎಂದು ಧಾರವಾಡದ ಹಿರಿಯ ಸಾಹಿತಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು. ಯಶಸ್‌ ಪ್ರಕಾಶನ ಕನ್ನಾಳ ಹಾಗೂ ಮಕ್ಕಳ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಲಿಂಗಸುಗೂರು ಸಂಯುಕ್ತಾಶ್ರಯದಲ್ಲಿ ರವಿವಾರ ಸ್ಥಳೀಯ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸೂಗುರೇಶ ಹಿರೇಮಠರ ಕವನ ಸಂಕಲನ "ಮುರಿದ ಟೊಂಗೆಯ ಚಿಗರು' ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕವಿ ಕೃತಿ ರಚನೆಗಾಗಿ ಬಹಳ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ಸಂಗ್ರಹಿಸುವುದು, ನಾನು, ನನ್ನದು, ನೀನು, ನಿಮ್ಮದು ಪದಗಳಿಂದ ಕವಿಯ ಆರಂಭದ ಕೆಲಸವಾಗುತ್ತದೆ. ಬರವಣಿಗೆಯಲ್ಲಿ ದೋಷವನ್ನು ಗಮನಿಸಿ ತಿದ್ದುವಂತ ಕೆಲಸವನ್ನು ಸಾಹಿತಿಗಳು ಮಾಡಬೇಕಾಗುತ್ತದೆ. ಇಂದಿನ
ಕೃತಿಗಳ ಪ್ರಚಾರಕ್ಕೆ ಮಾಧ್ಯಮಗಳು ಸಹಕಾರಿಯಾಗಿವೆ ಎಂದು ಅವರು ಹೇಳಿದರು.

ಸಾಹಿತಿ ದಸ್ತಗೀರಸಾಬ ದಿನ್ನಿ ಮಾತನಾಡಿ, ರಾಯಚೂರು ಜಿಲ್ಲೆ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದೆ. ಬೇರೆಬೇರೆ ಪ್ರಯೋಗಗಳಿಂದ ಹೊಸ ಕಾವ್ಯಗಳು ರಚನೆಯಾಗಬೇಕು. ಸಮಾಜ ಪರಿವರ್ತನೆಯಲ್ಲಿ ಕವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಾನವನ ಬದುಕಿನಲ್ಲಿ ಪ್ರಜ್ಞೆ ಉಂಟು ಮಾಡುತ್ತವೆ. ಸಮಾಜದಲ್ಲಿ ಇರುವ ಅಂಕು-ಡೊಂಕನ್ನು ತಿದ್ದಿ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡುತ್ತವೆ.

ಇತ್ತೀಚಿನ ದಿನಗಳಲ್ಲಿ ಸಾಹಿತಿಗಳು ಭಯದಿಂದ ಬದುಕುವಂತಾಗಿದೆ ಎಂದು ಹೇಳಿದರು. ಸಾಹಿತಿಗಳಾದ ಕೆಎಎಸ್‌ ಅಧಿ ಕಾರಿ ಅಮೀನ ಅತ್ತಾರ ಬಾಗಲಕೋಟೆ, ರಾಜಕುಮಾರ ಮಡಿವಾಳ ಧಾರವಾಡ, ಲಿಂಗಸುಗೂರು ತಾಲೂಕು ಕಸಾಪ ಅಧ್ಯಕ್ಷ ಶಶಿಕಾಂತ ಕಾಡ್ಲೂರು, ಗಜಲ್‌ ಕವಿ ಅಲ್ಲಾ ಗಿರಿರಾಜ ಕನಕಗಿರಿ ಮಾತನಾಡಿದರು.

ಕವನ ಸಂಕಲನದ ರಚನೆಕಾರ ಸೂಗೂರೇಶ ಹಿರೇಮಠ ಮಾತನಾಡಿ ಪುಸ್ತಕ ಪ್ರಕಟಣೆಗೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು. ಸುರೇಶ ರಾಜಮಾನೆ, ಶರಣ್ಯ ಅಂಗಡಿ, ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ಬಳಗ ಹಾಗೂ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು, ಕನ್ನಾಳ ಗಜಾನನ ಯುವಕ ಸಂಘದ ಯುವಕರು ಇದ್ದರು.

Trending videos

Back to Top