CONNECT WITH US  

ಫೇಸ್ಬುಕ್ಕಲ್ಲಿ ಪದೇ ಪದೇ ಸೆಲ್ಫಿನೋಡೋದ್ರಿಂದ ಸ್ವಾಭಿಮಾನಕ್ಕೆ ಧಕ್ಕೆ!

ಫೇಸ್‌ಬುಕ್‌ ನೋಡೋ ಚಟ ಎಲ್ಲರಿಗೂ ಇದ್ದಿದ್ದೇ. ಕ್ಷಣಕ್ಕೊಮ್ಮೆ ಅದನ್ನು ನೋಡದಿದ್ದರೆ ಕಮೆಂಟ್‌, ಲೈಕ್ಸ್‌ ಹಾಕದೇ ಇದ್ರೆ ಅದೇನೋ ಅಸಮಾಧಾನ! ಆದ್ರೆ ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಸೆಲ್ಫಿ, ಬೇರೆಯವರ ವಿವಿಧ ರೀತಿಯ ಸೆಲ್ಫಿಗಳನ್ನು ಪದೇ ಪದೇ ನೋಡೋದು ಒಳ್ಳೇದಲ್ಲ, ಅದ್ರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

ಅಮೆರಿಕದ ಪೆನ್ನಿಸಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದು, ಪದೇ ಪದೇ ಫೇಸ್‌ಬುಕ್‌ನಲ್ಲಿ ಸೆಲ್ಫಿಗಳನ್ನು ನೋಡುವ ಚಟದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೆಲ್ಫಿ ನೋಡೋ ಚಟದಿಂದ ಛೇ ನಾನು ಅವ್ರ ಹಾಗೆ ಇಲ್ಲ.. ಅಯ್ಯೋ.. ನಾನೂ ಹಾಗೇ ಇರ್ಬೋದಿತ್ತಲ್ಲ ಎಂಬ ಕೊರಗುವಿಕೆ ಶುರುವಾಗೋ ಸಾಧ್ಯತೆ ಇದ್ಯಂತೆ. ಜೀವನ ತೃಪ್ತಿ ಕಡಿಮೆಯಾಗುತ್ತೆ ಅಂತ ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಮಾಡುವ ಸೆಲ್ಫಿಗಳ ಬಗ್ಗೆ ಮತ್ತು ಅದರಿಂದಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಆನ್‌ಲೈನ್‌ ಸಮೀಕ್ಷೆ ನಡೆಸಲಾಗಿದ್ದು, ಈ ವಿಚಾರ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗನ್ನು ಚಟವಾಗಿಸಿಕೊಂಡವರಲ್ಲಿ ಸ್ವಾಭಿಮಾನ ಕಡಿಮೆಯಾಗಿ ಕೊರಗುವ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು...
 ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ, ತಮ್ಮ ಸೆಲ್ಫಿಗಳನ್ನು ಪದೇ ಪದೇ ನೋಡೋದು ಒಳ್ಳೇದಲ್ಲ!

ಸೆಲ್ಫಿ ವೀಕ್ಷಣೆ ಚಟದಿಂದ ಬೇರೆಯವರಂತೆ ತಾನಿಲ್ಲ ಎಂಬ ಭಾವನೆ ಹೆಚ್ಚಾಗುತ್ತೆ, ಜೀವನ ತೃಪ್ತಿ ಕಡಿಮೆಯಾಗುತ್ತೆ!

ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿಗಳನ್ನು ನೋಡೋದ್ರಿಂದ ಮಾನಸಿಕ ಪರಿಣಾಮ: ಸಮೀಕ್ಷೆಯಲ್ಲಿ ಸಾಬೀತು.

Trending videos

Back to Top