CONNECT WITH US  

ಕೆಲಸದ ಸಮಯ ವ್ಯರ್ಥವಾಗಲು ತಿಂಡಿಪೋತರು ಕಾರಣವಂತೆ!

ಕೆಲಸದ ವೇಳೆಯಲ್ಲಿ ಒಂದಲ್ಲಾ ಒಂದು ಅಡಚಣೆ ಇದ್ದಿದ್ದೆ. ಅಕ್ಕಪಕ್ಕದಲ್ಲಿ ಕುಳಿತವರು ಚುರುಮುರು ಶಬ್ದ ಮಾಡುತ್ತಾ ತಿಂಡಿ ತಿನಿಸುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ, ಮಧ್ಯೆ ಮಧ್ಯೆ ಗೊಣಗಾಡುತ್ತಿದ್ದರೆ ಇತರ ಉದ್ಯೋಗಿಗಳ ಕೆಲಸದ ಸಮಯ ಹಾಳಾಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. ಇಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕಾ ಕಂಪನಿ ಸ್ಯಾಮ್‌ಸಂಗ್‌ ನಡೆಸಿದ ಸಮೀಕ್ಷೆಯ ವೇಳೆ, ಸಹೋದ್ಯೋಗಿಗಳ ಕಾರ್ಯಭಂಗದಿಂದ ದಿನದಲ್ಲಿ ಏನಿಲ್ಲವೆಂದರೂ 20 ನಿಮಿಷ ಕಳೆದುಹೋಗುತ್ತದೆ ಎಂದು ಉದ್ಯೋಗಿಗಳು ಹೇಳಿದ್ದಾರೆ.

ಆದರೆ, ಇದಕ್ಕಿಂತಲೂ ಹೆಚ್ಚಾಗಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ದೊಡ್ಡ ತಲೆ ನೋವಾಗಿದೆ ಎಂದು ಉದ್ಯೋಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಡಿಮೆ ವೇಗದ ಇಂಟರ್‌ನೆಟ್‌, ಪದೇ ಪದೇ ಕಂಪ್ಯೂಟರ್‌ ಹ್ಯಾಂಗ್‌ ಆಗುವುದು, ಇನ್ನಿತರ ತಾಂತ್ರಿಕ ದೋಷಗಳನ್ನು ಸರಿಪಡಿಸುವಷ್ಟರಲ್ಲೇ ದಿನದಲ್ಲಿ ಅರ್ಧಗಂಟೆಗೂ ಹೆಚ್ಚುಹೊತ್ತು ವ್ಯರ್ಥವಾಗುತ್ತದೆ ಎಂದು ಶೇ. 90ರಷ್ಟು ಮಂದಿ ಅಭಿಪ್ರಾಯಪಪಟ್ಟಿದ್ದಾರೆ. ಇನ್ನು ಆಫೀ ಸಿನಲ್ಲಿ ಅತಿಯಾದ ಸೆಕೆ ಮತ್ತು ಅತಿಯಾದ ಎ.ಸಿ. ಬಳಕೆಯಿಂದ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಶೇ. 82ರಷ್ಟು ಮಂದಿ ಹೇಳಿದ್ದಾರೆ. ಒಟ್ಟಾರೆಯಾಗಿ ವಾರದಲ್ಲಿ ಏನಿಲ್ಲವೆಂದರೂ 5ರಿಂದ 6 ಗಂಟೆಯಷ್ಟು ಸಮಯ ಹಾಳಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು...
 ಸಹೋದ್ಯೋಗಿಗಳು ಚುರುಮುರು ಶಬ್ದ ಮಾಡುತ್ತಾ ತಿಂಡಿತಿಂದರೆ ಕೆಲಸದಲ್ಲಿ ಗಮನವೇ ಇರುವುದಿಲ್ಲ.

ಕಂಪ್ಯೂಟರ್‌ನ ತಾಂತ್ರಿಕ ದೋಷಗಳನ್ನು ಸರಿಪಡಿಸುವಷ್ಟರಲ್ಲೇ ದಿನದಲ್ಲಿ ಅರ್ಧಗಂಟೆ ಹಾಳು

ಅತಿಯಾದ ಸೆಕೆ ಅಥವಾ ಹೆಚ್ಚು ಎಸಿ ಬಳಸುವುದಿರಿಂದಲೂ ಕೆಲಸಕ್ಕೆ ಅಡ್ಡಿ

 ದಿನದಲ್ಲಿ 20 ನಿಮಿಷ ವ್ಯರ್ಥ 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top