CONNECT WITH US  

ಆಧಾರ್‌ ಲಿಂಕ್‌ ವಿರೋಧಿಸಿ ಮೊಬೈಲ್‌ ಸ್ವಿಚ್‌ಆಫ್ !

ಮುಂಬಯಿ: ಮೊಬೈಲ್‌ ನಂಬರ್‌ ಮತ್ತು ಆಧಾರ್‌ ನಂಬರ್‌ ಲಿಂಕಿಂಗ್‌ ಮಾಡುವುದನ್ನು ಕಡ್ಡಾಯಗೊಳಿಸಿರುವುದನ್ನು ಪ್ರತಿಭಟಿಸಲು ಮುಂಬಯಿಗರು ವಿನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ನಿತ್ಯ ಅರ್ಧ ತಾಸು ಮೊಬೈಲ್‌ ಸ್ವಿಚ್‌ ಆಫ್ ಮಾಡುವುದೇ ಈ ಹೊಸ ರೀತಿಯ ಪ್ರತಿಭಟನೆ. 11ರಿಂದ 11.30ರ ತನಕ ಮೊಬೈಲ್‌ ನಂಬರ್‌ಗಳು ಸ್ವಿಚ ಆಫ್ ಆಗಿರುತ್ತವೆ. ನಿರಂತರ 30 ದಿನ ಈ ಪ್ರತಿಭಟನೆ ನಡೆಯಲಿದ್ದು ಈಗಾಗಲೇ ಶುರುವಾಗಿದೆ. 

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ನೀವು ಪ್ರತಿಭಟಿಸುತ್ತಿರುವುದನ್ನು ಇ-ಮೈಲ್‌ ಮೂಲಕ ತಿಳಿಸಲು ಪ್ರತಿಭಟನೆಕಾರರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಆಧಾರ್‌ ಲಿಂಕ್‌ ಮಾಡುವುದು ಸಮರ್ಪಕ ನಿರ್ಧಾರವಲ್ಲ. ಮೊಬೈಲ್‌ ನಂಬರ್‌ನಿಂದ ಹಿಡಿದು ಕ್ರೆಡಿಟ್‌ ಕಾರ್ಡ್‌ಗಳ ತನಕ ಎಲ್ಲದ್ದಕ್ಕೂ ಆಧಾರ್‌ ಲಿಂಕ್‌ ಮಾಡಿಸುವ ಮೂಲಕ ಸರಕಾರ ಜನರ ಖಾಸಗಿ ಬದುಕನ್ನು ಇಣುಕಿ ನೋಡುವ ಪ್ರಯತ್ನ ಮಾಡುತ್ತಿದೆ ಎನ್ನುತ್ತಾರೆ ಓರ್ವ ಪ್ರತಿಭಟನೆಕಾರ.

ರಾಜಕೀಯ ಪಕ್ಷಗಳಿಗೆ ಕಷ್ಟ
ಆಧಾರ್‌ ಅಷ್ಟೆಲ್ಲ ಸುರಕ್ಷಿತವಾಗಿದ್ದರೆ ಮತದಾರರ ಗುರುತಿನ ಕಾರ್ಡಿಗೂ ಅದನ್ನು ಲಿಂಕ್‌ ಮಾಡಬೇಕು. ಇದರಿಂದ ಬೋಗಸ್‌ ಮತ ಹಾಕುವುದನ್ನು ತಡೆಯಲು ಸಾಧ್ಯ. ಆದರೆ ಇದರಿಂದ ರಾಜಕೀಯ ಪಕ್ಷಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಮತದಾರರ ಗುರುತಿನ ಕಾರ್ಡಿಗೆ ಆಧಾರ್‌ ಲಿಂಕ್‌ ಮಾಡುವ ಗೋಜಿಗೆ ಹೋಗಿಲ್ಲ ಎನ್ನುವುದು ಇನ್ನೋರ್ವ ಪ್ರತಿಭಟನೆಕಾರರ ಅಭಿಪ್ರಾಯ. 

Trending videos

Back to Top