CONNECT WITH US  

ಸುದ್ದಿಕೋಶ: ಸೆಟ್‌-ಟಾಪ್‌ ಬಾಕ್ಸ್‌ನಲ್ಲಿ ಚಿಪ್‌

ಮಾರುಕಟ್ಟೆಗೆ ಬರಲಿರುವ ನೂತನ ಸೆಟ್‌ಟಾಪ್‌ ಬಾಕ್ಸ್‌ಗಳಲ್ಲಿ ವಿಶೇಷ ಚಿಪ್‌ ಅಳವಡಿಸಲು ಕೇಂದ್ರ ಚಿಂತನೆ ನಡೆಸಿದೆ. ತನ್ನ ಈ ಚಿಂತನೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ದ ಮುಂದಿಟ್ಟಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಈ ಬಗ್ಗೆ ಎಲ್ಲಾ ಡಿಟಿಎಚ್‌ ಉಪಕರಣಗಳ ತಯಾರಕರಿಗೆ ಸೂಚಿಸಬಹುದೆಂದು ಹೇಳಿದೆ. ಯಾಕೀ ಚಿಂತನೆ, ಇದರಿಂದೇನು ಪ್ರಯೋಜನ? ಮಾಹಿತಿ ಇಲ್ಲಿದೆ. 

ಪ್ರಯೋಜನಗಳೇನು?
* ಸರಳವಾಗಿ, ನಿಖರವಾಗಿ ವಾಹಿನಿಗಳ ಜನಪ್ರಿಯತೆ ಅಳೆಯಲು ಸಾಧ್ಯ
* ಜಾಹೀರಾತುದಾರರಿಗೆ ಜನಪ್ರಿಯ ವಾಹಿನಿಗಳನ್ನು ಆಯ್ಕೆ ಮಾಡಲು ಸುಲಭ ಸಾಧ್ಯ.
* ವಾಹಿನಿಗಳ ಬಗ್ಗೆ ತಿಳಿಯಲು ಜಾಹೀರಾತು ಹಾಗೂ ದೃಶ್ಯ ಪ್ರಚಾರನಿರ್ದೇಶನಾಲಯಕ್ಕೆ (ಡಿಎವಿಪಿ) ಅನುಕೂಲ
* ಅತಿ ಹೆಚ್ಚು ವೀಕ್ಷಕರಿರುವ ವಾಹಿನಿಗಳಿಗೆ ಸರ್ಕಾರದಿಂದ ಉತ್ತೇಜನ

ಉದ್ದೇಶವೇನು?
ವಾಹಿನಿಗಳ ಜನಪ್ರಿಯತೆ ಅರಿಯವುದೇ ಇದರ ಮೂಲ ಉದ್ದೇಶ. ಜನರು ಯಾವ ವಾಹಿನಿಗಳನ್ನು ಹೆಚ್ಚು ನೋಡುತ್ತಾರೆ, ಯಾವ ವಾಹಿನಿಯ ವೀಕ್ಷಣೆಯಲ್ಲಿ ಹೆಚ್ಚು ಸಮಯ ಕಳೆಯು ತ್ತಾರೆ ಎಂಬ ಮಾಹಿತಿ ಯನ್ನು ಈ ಮೂಲಕ ಕಲೆಹಾಕಲು ಚಿಂತನೆ ನಡೆಸಲಾಗಿದೆ. 

ಮಾನದಂಡವಿಲ್ಲವೇ?
ಸದ್ಯಕ್ಕೆ, ವಾಹಿನಿಗಳ ಜನಪ್ರಿಯತೆ ಅಳೆಯುತ್ತಿರುವ ಪ್ರಸರಣ ವೀಕ್ಷಕ ಸಂಶೋಧನಾ ಮಂಡಳಿ (ಬಾರ್ಕ್‌)ಯ ಮಾನದಂಡಗಳು ಹಳೆಯದಾಗಿವೆ. ಅಲ್ಲದೆ, ಬಾರ್ಕ್‌ ನೀಡುವ ಜನಪ್ರಿಯ ತೆಯ ಅಂಕಿ-ಅಂಶ ನಿಖರವಾಗಿರುವುದಿಲ್ಲ. ಹಾಗಾಗಿಯೇ, ಬಾರ್ಕ್‌ಗೆ ಪರ್ಯಾಯವಾಗಿ, ಈ "ಚಿಪ್‌' ಐಡಿಯಾ ನೀಡಲಾಗಿದೆ. 

ಮತ್ತೊಂದು ಐಡಿಯಾ!
ಚಿಪ್‌ ಅಳವಡಿಕೆಯನ್ನು ಜನ ಒಪ್ಪದಿದ್ದರೆ, ಬಾರ್ಕ್‌ ಅಳವಡಿಸಿಕೊಂಡಿರುವ ವಿಧಾನದಲ್ಲೇ ಸುಧಾರಣೆ ತಂದು ನಿಖರವಾಗಿ ವೀಕ್ಷಕ ವರ್ಗ ವನ್ನು ಅಳೆಯುವ ಮತ್ತೂಂದು ಆಲೋಚನೆ ಯೂ ಸರ್ಕಾರದ ಮುಂದಿದೆ. ನಮ್ಮ ಮನೆಗಳ ಲ್ಲಿರುವ ಟಿವಿಗಳಲ್ಲಿನ ಮದರ್‌ ಬೋಡ್‌ ìನಲ್ಲಿ ಪೀಪಲ್‌ ಮೀಟರ್‌ ಎಂಬ ವಿಶೇಷ ಹಾಗೂ ಪುಟ್ಟ ಪರಿಕರ ಇರುತ್ತದೆ. ಇದರ ಆಧಾರದ ಮೇಲೆ ಬಾರ್ಕ್‌, ಯಾವ ವಾಹಿನಿಯನ್ನು ಎಷ್ಟು ಜನ ನೋಡಿದರೆಂದು ನಿರ್ಧರಿಸುತ್ತದೆ.

ಆದರೆ, ಪ್ರತಿ 30,000 ಪೀಪಲ್‌ ಮೀಟರ್‌ಗಳು ನೀಡುವ ಮಾಹಿತಿಯ ಸರಾಸರಿಯನ್ನು ಆಧರಿಸಿ ಯಾವ ವಾಹಿನಿ ನಂಬರ್‌ ಒನ್‌ ಎಂ ಬುದನ್ನು ಬಾರ್ಕ್‌ ಹೇಳುತ್ತದೆ. ಪ್ರತಿ 30,000 ಪೀಪಲ್‌ ಮೀಟರ್‌ಗಳ ಬದಲಿಗೆ ಪ್ರತಿ 300 ಪೀಪಲ್‌ ಮೀಟರ್‌ಗಳ ಲೆಕ್ಕವನ್ನಿಟ್ಟು ಕೊಂಡು ಜನ ಪ್ರಿಯತೆ ಅಳೆಯಲು ಆಲೋಚಿಸಲಾಗಿದೆ. 

Trending videos

Back to Top