CONNECT WITH US  

ಸುದ್ದಿ ಕೋಶ: ಏನಿದು ಸಂಘ ಶಿಕ್ಷಾ ವರ್ಗ?

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಜೂ.7ರಂದು ನಾಗ್ಪುರದಲ್ಲಿ ನಡೆಯಲಿರುವ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ಭಾಗವಹಿಸುವುದರ ಬಗ್ಗೆ ಕಾಂಗ್ರೆಸ್‌ನಲ್ಲಿಯೇ ಪರ- ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಆರ್‌ಎಸ್‌ಎಸ್‌ನ "ಸಂಘ ಶಿಕ್ಷಾ ವರ್ಗ' ಎಂಬ ಶಿಬಿರದ ಬಗ್ಗೆ, ಹಿಂದೆ ಅದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದವರ ಬಗ್ಗೆ ಮಾಹಿತಿ ಇಲ್ಲಿದೆ.

ನಾಲ್ಕು ಹಂತದ ಶಿಬಿರ
ಆರಂಭಿಕರಿಗಾಗಿ ಮೊದಲು ಜಿಲ್ಲಾ ಮಟ್ಟದಲ್ಲಿ 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ. 2ನೇ ಹಂತದಲ್ಲಿ 21 ದಿನಗಳ ಪ್ರಾಂತ ಮಟ್ಟದಲ್ಲಿ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗ, 3ನೇ ಹಂತದ ರಾಜ್ಯ ಮಟ್ಟದಲ್ಲಿ 21 ದಿನಗಳ ದ್ವಿತೀಯ ವರ್ಷದ ಸಂಘ ಶಿಕ್ಷಾ ವರ್ಗ. ನಾಲ್ಕನೇ ಹಂತದಲ್ಲಿ ನಡೆಯುವುದೇ ರಾಷ್ಟ್ರಮಟ್ಟದ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ. ಇದು ನಾಗ್ಪುರದಲ್ಲಿ ಮಾತ್ರ ನಡೆಯುತ್ತದೆ. ಈ ಬಾರಿ 709 ಶಿಕ್ಷಾರ್ಥಿಗಳಿದ್ದಾರೆ.

ಶಿಬಿರದ ಕಾರ್ಯಕ್ರಮ
ಬೆಳಗ್ಗೆ 4:30ರಿಂದ ಆರಂಭಗೊಳ್ಳುವ ತರಬೇತಿ ಮುಗಿಸಿಕೊಂಡು ಸ್ವಯಂ ಸೇವಕರು ಮತ್ತೆ ಹಾಸಿಗೆಗೆ ಜಾರುವುದು ರಾತ್ರಿ 10:30ಕ್ಕೆ. ಇದರ ನಡುವೆ ಮಧ್ಯಾಹ್ನ ಭೋಜನಕ್ಕೆ 1 ಗಂಟೆಯ ಬ್ರೇಕ್‌ ಇರುತ್ತದಷ್ಟೆ. 

ಏನೇನು ಕಲಿಕೆ? 
ದೈಹಿಕ ವ್ಯಾಯಾಮ, ಸಮರ ಕಲೆಗಳಾದ ಜ್ಯೂಡೊ, ಕರಾಟೆ, ದಂಡಯುದ್ಧ (ಲಾಠಿ ಕಸರತ್ತು) ಇರುತ್ತದೆ. ದಿನಕ್ಕೆರಡು ಬಾರಿ ವಿವಿಧ ಭಾಷೆ, ವಯಸ್ಸು, ವಿದ್ಯಾರ್ಹತೆಗಳಿರುವ ಸ್ವಯಂ ಸೇವಕರ ನಡುವೆ ವಿಚಾರ ವಿನಿಮಯಕ್ಕೆ ಅವಕಾಶವಿರುತ್ತದೆ.  ಶಿಬಿರಕ್ಕೆ "ಪಾಲಕ್‌ಗಳ ನೇತೃತ್ವವಿರುತ್ತದೆ. "ಮುಖ್ಯ ಶಿಕ್ಷಕ್‌', "ಶಾರೀರಿಕ್‌ ಪ್ರಮುಖ್‌', "ಬೌದ್ಧಿಕ್‌ ಪ್ರಮುಖ್‌'ಗಳು ಶಿಬಿರದ ರೂಪುರೇಷೆ ನಿರ್ಧರಿಸುತ್ತಾರೆ. 

ಇಂದು ಹೆಚ್ಚು ಓದಿದ್ದು

Trending videos

Back to Top