CONNECT WITH US  

ಪ್ರೊ ಕಬಡ್ಡಿ: ಬೆಂಗಳೂರಿಗೆ 8ನೇ ಸೋಲು

ಜೈಪುರ: ಪ್ರೊ ಕಬಡ್ಡಿ ಲೀಗ್‌ ಕೂಟದಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸೋಲಿನ ಸರಣಿ ಮತ್ತೆ ಮುಂದುವರಿದಿದೆ.

ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ ವಿರುದ್ಧ ಶನಿವಾರ ಪಂದ್ಯದಲ್ಲಿ ಬೆಂಗಳೂರು ಮತ್ತೂಮ್ಮೆ ಕೆಟ್ಟ ಆಟ ಪ್ರದರ್ಶಿಸಿ 21-30 ಅಂಕದಿಂದ ಸೋಲು ಕಂಡಿತು. ಇದು ಕೂಟದಲ್ಲಿ ಬೆಂಗಳೂರು ತಂಡಕ್ಕೆ ಎದುರಾದ 8ನೇ ಸೋಲು. ಒಟ್ಟು 10 ಪಂದ್ಯ ಆಡಿರುವ ಬೆಂಗಳೂರು ತಂಡ 13 ಅಂಕವನ್ನಷ್ಟೇ ಪಡೆದಿದೆ. 2 ಪಂದ್ಯದಲ್ಲಷ್ಟೇ ಬೆಂಗಳೂರು ತಂಡ ಗೆಲುವುಗಳಿಸಿದೆ.

ಗೆಲುವಿನೊಂದಿಗೆ ಜೈಪುರ ಕೂಟದಲ್ಲಿ 4ನೇ ಗೆಲುವು ಸಾಧಿಸಿದೆ. 4 ಪಂದ್ಯದಲ್ಲಿ ಜೈಪುರ ಸೋಲು ಕಂಡಿದ್ದರೆ 1 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಸದ್ಯ ಜೈಪುರ ಅಂಕಪಟ್ಟಿಯಲ್ಲಿ 25ಕ್ಕೆ ಅಂಕ ಹೆಚ್ಚಿಸಿಕೊಂಡಿದೆ. ಬುಲ್ಸ್‌ ಪರ ಪವನ್‌ ಕುಮಾರ್‌ (6 ಅಂಕ) ಶ್ರೇಷ್ಠ ರೈಡಿಂಗ್‌ ಪ್ರದರ್ಶಿಸಿದರೆ ಜೈಪುರ ಪರ ರಾಜೇಶ್‌ ನರ್ವಲ್‌ (7 ಅಂಕ) ರೈಡಿಂಗ್‌ ಮತ್ತು ಆಕರ್ಷಕ ಕ್ಯಾಚಿಂಗ್‌ನಿಂದ ಆಲ್‌ರೌಂಡರ್‌ ಆಟ ಪ್ರದರ್ಶಿಸಿ ಗಮನ ಸೆಳೆದರು.

Trending videos

Back to Top