CONNECT WITH US  

ಕಾಂಗ್ರೆಸ್‌ ಶಾಸಕನಿಂದ "ಹೈಕಮಾಂಡ್‌' ಸಿನಿಮಾ!

ಬೆಳಗಾವಿ: ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಅವರು "ಹೈಕಮಾಂಡ್‌'ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಕಥೆಯನ್ನು ಅವರೇ ಬರೆದಿದ್ದಾರೆ. 2017ರ ಜೂನ್‌ 1ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಈ ವಿಷಯವನ್ನು
ನಗರದಲ್ಲಿ ನಡೆದ ಜಯಸೂರ್ಯ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅವರೇ ತಿಳಿಸಿದರು. ಚಿತ್ರದ ಪೋಸ್ಟರ್‌ ಕೂಡ ಪ್ರದರ್ಶಿಸಿದರು. ಹೈಕಮಾಂಡ್‌ ಚಿತ್ರದ ನೋಂದಣಿಯನ್ನು ಈಗಾಗಲೇ ಮಾಡಿಸಲಾಗಿದೆ.

ಚಿತ್ರಕಥೆಯನ್ನು ತಾವೇ ಬರೆದಿರುವುದಾಗಿ ತಿಳಿಸಿದ ಅವರು, ಚಿತ್ರದಲ್ಲಿ ಎಲ್ಲ ರಾಜಕಾರಣಿಗಳ ಪಾತ್ರ ಇವೆ.
ಹಾಸ್ಯವೇ ಚಿತ್ರದ ಜೀವಾಳ. 2017ರ ಜೂನ್‌ 1ರಂದು ಬಿಡುಗಡೆಗೊಳಿಸಲಾಗುವುದು. ಬೆಳಗಾವಿ ಜಿಲ್ಲೆ, ರಾಜ್ಯ ಹಾಗೂ ದೆಹಲಿಯ ರಾಜಕಾರಣಿಗಳ ಪಾತ್ರ ಚಿತ್ರದಲ್ಲಿರಲಿವೆ. ರಾಜಕಾರಣಿಗಳ ಧ್ವನಿಗೆ ಹೋಲಿಕೆ ಆಗುವ ಕಲಾವಿದರನ್ನೇ ಚಿತ್ರಕ್ಕೆ ಆಯ್ಕೆ ಮಾಡಲಾಗುತ್ತಿದೆ.

ಶೀಘ್ರವೇ ಚಿತ್ರೀಕರಣ ಆರಂಭಿಸಲಾಗುವುದು ಎಂದು ವಿವರಿಸಿದರು. ಇದರ ಬಳಿಕ "ಸಬಸೇ ಬಡಾ ಕೌನ್‌' ಎನ್ನುವ ಚಿತ್ರವನ್ನೂ ನಿರ್ಮಾಣ ಮಾಡುತ್ತೇನೆ. ಇದರಲ್ಲಿ ತಮ್ಮ ಪಾತ್ರವೂ ಇರಲಿದೆ. ಶಾಸಕ μರೋಜ್‌ ಸೇs…,

ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಮುಂತಾದ ಅಧಿಕಾರಿಗಳ ಪಾತ್ರ ಇದೆ ಎಂದು ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

Trending videos

Back to Top