CONNECT WITH US  

ಮೈಸೂರಿಗೆ ಹೋಗಬೇಕಿದ್ದ ಗೌಡರ ಕಾಪ್ಟರ್‌ ಮಂಗ್ಳೂರಿಗೆ

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.

ದೇವೇಗೌಡ ದಂಪತಿ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೊಲ್ಲೂರಿಗೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಮೈಸೂರಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ತುಂತುರು ಮಳೆ, ಗಾಳಿ ಹಾಗೂ ದಟ್ಟ ಮಂಜು ಕವಿದಿದ್ದ ಕಾರಣ ಸಂಚಾರ ಸಾಧ್ಯವಾಗದೆ ಹೆಲಿಕಾಪ್ಟರ್‌ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಹೀಗಾಗಿ ಮೈಸೂರು ಪ್ರವಾಸ ಮೊಟಕುಗೊಳಿಸಿದ ಎಚ್‌.ಡಿ. ದೇವೇಗೌಡರು ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಮರಳಿದರು.

ಶೃಂಗೇರಿ ಮತ್ತು ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿ ಮೈಸೂರಿನ ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಶೃಂಗೇರಿ ಹಾಗೂ ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿದ ನಂತರ ಮೈಸೂರಿನತ್ತ ಹೊರಡುವಾಗ ಸಮಸ್ಯೆ ಎದುರಾಗಿ ಹೆಲಿಕಾಪ್ಟರನ್ನು ಮಂಗಳೂರಿನಲ್ಲಿ ಇಳಿಸಲಾಯಿತು.

Trending videos

Back to Top