CONNECT WITH US  

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ರೌಡಿ ಶೀಟರ್‌ ಶಂಕಿತ ಉಗ್ರನ ಕಾಳಗ

ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ಮಾರಾಮಾರಿ ನಡೆದ ಘಟನೆ ಸೋಮವಾರ ಸಂಜೆ ನಡೆದಿದೆ. 

ರಾತ್ರಿ 7 ಗಂಟೆ ವೇಳೆ ಅಡುಗೆ ಮನೆ ಯಲ್ಲಿ ರೌಡಿ ಶೀಟರ್‌ ಜಗ್ಗ ಮತ್ತು ಶಂಕಿತ ಉಗ್ರ ಜಾಫ‌ರ್‌ ನಡುವೆ ಹೊಡೆದಾಟ ನಡೆದಿದ್ದು, ಜಾಫ‌ರ್‌ ಕೈಗೆ ಗಂಭೀರ ಗಾಯವಾಗಿದೆ ಎಂದು ಜೈಲು ಅಧೀಕ್ಷಕ ಕೃಷ್‌ಕುಮಾರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಹೊಡೆದಾಟದ ವೇಳೆ ಜಗ್ಗನಿಗೆ ಇತರ ಕೈದಿಗಳು ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ. ಗಾಯ ಗೊಂಡಿರುವ ಜಾಫ‌ರ್‌ಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ತಿಳಿಸಿದ್ದಾರೆ. 

ಹುಬ್ಬಳ್ಳಿ ಸ್ಫೋಟ ಪ್ರಕರಣದಲ್ಲಿ ಜಾಫ‌ರ್‌ನನ್ನು ಬಂಧಿಸಲಾಗಿದ್ದರೆ. ಗೂಂಡಾ ಖಾಯ್ದೆಯಲ್ಲಿ ಜಗ್ಗನನ್ನು ಬಂಧಿಸಲಾಗಿದೆ. 

Trending videos

Back to Top