CONNECT WITH US  

ಕೊಡಗಿನ ಆದಿವಾಸಿ ಕುಟುಂಬಗಳ ಪ್ರತಿಭಟನೆಯಲ್ಲಿ ನಕ್ಸಲೀಯಯರು ಭಾಗಿ ? 

ಮಡಿಕೇರಿ: ಜಿಲ್ಲಾಡಳಿತದ ಅರಣ್ಯ ತೆರವು ಕಾರ್ಯಾಚರಣೆಯ ವಿರುದ್ಧ  ದಿಡ್ಡಳ್ಳಿಯಲ್ಲಿ ಆದಿವಾಸಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯಲ್ಲಿ ನಕ್ಸಲರು ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. 

ಅಪರಿಚಿತರ ಗುಂಪೊಂದು ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು ಎನ್ನಲಾಗಿದ್ದು ಈ ವೇಳೆ ಸ್ಥಳಿಯರೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ನಕ್ಸಲರು ಎನ್ನುವ ಶಂಕೆಯ ಮೇಲೆ ನಕ್ಸಲ್‌ ನಿಗ್ರಹ ಪಡೆ  ದಿಡ್ಡಳ್ಳಿ ಗೆ ದೌಡಾಯಿಸಿ ಮಂಗಳವಾರ ಅರಣ್ಯದಲ್ಲಿ ವ್ಯಾಪಕ ಪರಿಶೀಲನೆ ನಡೆಸಿದೆ. 

ಆದರೆ ಆದಿವಾಸಿಗಳ ಪರ ಹೋರಾಟಗಾರರು  ಈ ಸುದ್ದಿಯನ್ನು ತಳ್ಳಿ ಹಾಕಿದ್ದು ಸರಕಾರ ನಮ್ಮ ಹೋರಾಟ ಹತ್ತಿಕ್ಕಲ್ಲು ನಕ್ಸಲ್‌ ಬಣ್ಣ ನೀಡಿ ಗಮನ ಬೇರೆಡೆ ಸೆಳೆಯುತ್ತಿದೆ ಎಂದಿದ್ದಾರೆ. 

ಆಶ್ರಯ ಕಳೆದುಕೊಂಡು ಬೀದಿಗೆ ಬಿದ್ದಿರುವ ಹಾಡಿಯ 577 ಆದಿವಾಸಿ ಕುಟುಂಬಗಳ ಪ್ರತಿಭಟನೆ ತೀವ್ರಗೊಂಡಿದ್ದು, ಕುಟುಂಬಗಳಿಗೆ ಮರು ವಸತಿ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸೂಚಿಸಿದ್ದಾರೆ. 

ಚಿತ್ರನಟ ಚೇತನ್‌ ನೇತೃತ್ವದಲ್ಲಿ ಆದಿವಾಸಿಗಳ ಪರ ಹೋರಾಟ ನಡೆಸುತ್ತಿರುವ ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಯವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿ, ಬೀದಿಗೆ ಬಿದ್ದಿರುವ ಆದಿವಾಸಿಗಳ ಕುಟುಂಬಗಳಿಗೆ ಆದಷ್ಟು ಬೇಗ ಮರು ವಸತಿ ಕಲ್ಪಿಸುವಂತೆ ಮನವಿ ಮಾಡಿತ್ತು. 

Trending videos

Back to Top