CONNECT WITH US  

ಡಿಕೆಶಿ ಬಿಜೆಪಿಗೆ:ಇದು ಸಿದ್ದರಾಮಯ್ಯ ರಾಜಕೀಯ ದೊಂಬರಾಟ

ಸಿಎಂ ವಿರುದ್ಧ ಕಿಡಿ ಕಾರಿದ ಯಡಿಯೂರಪ್ಪ, ಬಿಜೆಪಿ ನಾಯಕರು

ಮಂಗಳೂರು: ಬಿಜೆಪಿ ಸೇರಲು ಡಿ.ಕೆ.ಶಿವಕುಮಾರ್‌ ಅವರಿಗೆ ಐಟಿ ಅಧಿಕಾರಿಗಳಿಂದಲೇ ಆಫ‌ರ್‌ ನೀಡಲಾಗಿತ್ತು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕಿಡಿ ಕಾರಿದ್ದು, ಇದು ಸಿದ್ದರಾಮಯ್ಯ ಅವರ ಚುನಾವಣಾ ಗಿಮಿಕ್‌ ಎಂದಿದ್ದಾರೆ. 

 ರಾಜ್ಯ ಬಿಜೆಪಿ  ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಓಷಿಯನ್ ಪರ್ಲ್ ಹೊಟೇಲ್ ಗೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು  ಸುದ್ದಿಗಾರರೊಂದಿಗೆ ಮಾತನಾಡಿದರು. 

'ಡಿ.ಕೆ.ಶಿವಕುಮಾರ್‌ ಅವರು  ಬಿಜೆಪಿ ಸೇರ್ಪಡೆ ಕುರಿತು ಸಿಎಂ ಹೇಳಿಕೆ ಸುಳ್ಳು.ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ  ರಾಜಕೀಯ ದೊಂಬರಾಟದ ಭಾಗವಾಗಿದ್ದು, ಗೊಂದಲ ಸೃಷ್ಟಿಸಲು ಸಿಎಂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಪರಿವರ್ತನಾ ರ‍್ಯಾಲಿಗೆ ಕಂಡು ಬಂದ ಬೆಂಬಲಕ್ಕೆ ಬೆದರಿ ಈ ಹೇಳಿಕೆ ನೀಡಿದ್ದಾರೆ' ಎಂದು ಕಿಡಿ ಕಾರಿದರು.  

ಸೊಗಡು ಶಿವಣ್ಣ ಪಕ್ಷ ವಿರೋಧಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಬಿಎಸ್‌ವೈ 'ಈ ವಿಚಾರ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು ಅವರು ಸೊಗಡು ಶಿವಣ್ಣ ಬಳಿ ಮಾತನಾಡುತ್ತಾರೆ' ಎಂದರು. 

ಇದೇ ವೇಳೆ 'ಹಿಟ್ಲರ್ ಜಯಂತಿಯೂ ಒಂದೇ,ಟಿಪ್ಪು ಜಯಂತಿಯೂ ಒಂದೇ.ಇದೇ ಕೊ‌ನೆಯ ಟಿಪ್ಪು ಜಯಂತಿ'ಎಂದರು. 

ಬಿಜೆಪಿ ಅಧೋಗತಿಗೆ ಇಳಿದಿಲ್ಲ

'ಬೆದರಿಕೆಯೊಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಅಧೋಗತಿಗೆ ಬಿಜೆಪಿ ಇಳಿದಿಲ್ಲ. ದೇಶದೆಲ್ಲೆಡೆ ಸ್ವಇಚ್ಛೆಯಿಂದ ಬಿಜೆಪಿಗೆ ಸೇರುತ್ತಿದ್ದಾರೆ.ತತ್ವ ಸಿದ್ಧಾಂತ ಗಳನ್ನು‌ ನಂಬಿ ಬಂದವರಿಗೆ ಬಿಜೆಪಿ ಯಲ್ಲಿ ಸ್ಥಾನ ಹೊರತು, ಯಾರಿಗೂ ರೆಡ್ ಕಾರ್ಪೆಟ್ ಹಾಕುವ ಅಗತ್ಯ ಇಲ್ಲ' ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಕಿಡಿ ಕಾರಿದರು.

ಭ್ರಷ್ಟರು ಬಿಜೆಪಿಗೆ ಬೇಕಾಗಿಲ್ಲ
ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಪ್ರತಿಕ್ರಿಯಿಸಿ 'ಐಟಿ ದಾಳಿಯಾಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಡಿ.ಕೆ. ಶಿವಕುಮಾರ್‌ ಅವರಂತಹ ಭ್ರಷ್ಟರು ಬಿಜೆಪಿಗೆ ಬರ್ತೀನಿ ಅಂದ್ರೂ ಬೇಡ'ಎಂದರು. 

ಇದೇ ವೇಳೆ 'ರಾಜ್ಯದಲ್ಲಿ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರ್ಪಡೆಗೆ ಸಿದ್ದವಾಗಿದ್ದಾರೆ' ಎಂದರು. 

ಸಿಎಂ ಹೇಳಿಕೆ ಬಾಲಿಶ 
'ಸಿಎಂ ಹೇಳಿಕೆ ಹಾಸ್ಯಾಸ್ಪದ ಮತ್ತು  ಬಾಲಿಶ. ರಾಜಕೀಯ ದಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿಯುತ್ತದೆ ಎನ್ನುವುದಕ್ಕೆ ಈ ಹೇಳಿಕೆ ನಿದರ್ಶನ'ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು. 

Trending videos

Back to Top