CONNECT WITH US  

ಕೈ ಇಲ್ಲದಿದ್ದರೂ ಬೈಕ್‌ ಓಡಿಸುತ್ತಿದ್ದ ನಟ ಸಾವು

ನೆಲಮಂಗಲ: ಕನ್ನಡ ಚಿತ್ರರಂಗದ ಮೇರು ಕಲಾವಿದರ ಮೆಚ್ಚುಗೆಗಳಿಸಿದ್ದ ಕೈಗಳಿಲ್ಲದ ವಿಕಲಚೇತನ ಕಲಾವಿದ ಯುವನಟ, ನಿರ್ದೇಶಕ ರಸ್ತೆಅಪಘಾತದಲ್ಲಿ ಮೃತಪಟ್ಟಘಟನೆ ತಾಲೂಕಿನ ವೀರನಂಜೀಪುರದ ಸಮೀಪ ಸಂಭವಿಸಿದೆ. ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಮತ್ತು ಕಿರುಚಿತ್ರನಿರ್ದೇಶನ ಮಾಡುತ್ತಿದ್ದ ಹೇಮಂತ್‌ಕುಮಾರ್‌(25) ಮೃತದುರ್ದೈವಿ.

ತಾಲೂಕಿನ ವೀರನಂಜೀಪುರ ಸಮೀಪ ರಾಷ್ಟ್ರೀಯಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರಿಗೆ ಬೈಕ್‌ನಲ್ಲಿ ಪ್ರಯಾಣಿಸುತಿದ್ದ ಸಮಯದಲ್ಲಿ ರಸ್ತೆ ವಿಭಜಗಕ್ಕೆ ಡಿಕ್ಕಿಹೊಡೆದು ಕೆಳಗೆ ಬಿದ್ದ ಪರಿಣಾಮ ಕಲಾವಿದ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ, ಮೃತ ವಿಕಲಚೇತನ ಕಲಾವಿದ ಹೇಮಂತ್‌ ಸ್ವತಃ ತಾನೇ ಬೈಕ್‌ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.

ಮೃತ ಹೇಮಂತ್‌ಕುಮಾರ್‌ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹಾಗೂ ದುನಿಯಾ ವಿಜಿರವರ ಮೆಚ್ಚುಗೆಗೆ ಸಹ ಪಾತ್ರರಾಗಿದ್ದ ಎನ್ನಲಾಗಿದ್ದು ಈತನಿಗೆ ಎರಡು ಕೈ ಇಲ್ಲದ್ದಿದ್ದರೂ ಕಾಲುಗಳ ಸಹಾಯದಿಂದ ಬೈಕ್‌ ಚಲಾಯಿಸುವುದಲ್ಲದೇ ಬೈಕ್‌ ಚಲಾಯಿಸುವುದರಲ್ಲಿ ಅನೇಕ ರೀತಿಯ ಸಾಧನೆಗಳನ್ನು ಮಾಡಿದ್ದಾನೆ,

ಹೈಕ ಎಂಬ ಕಿರುಚಿತ್ರಕ್ಕೆ ಧ್ವನಿನೀಡಿದ್ದ ಕೀರ್ತಿ ಸಹ ಈ ಉದಯೋನ್ಮುಖ ಕಲಾವಿದನಿಗೆ ಸಲ್ಲುತ್ತದೆ. ಇನ್ನೂ ಘಟನೆಗೆ ಸಂಬಂದಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


Trending videos

Back to Top