CONNECT WITH US  

ಸಮ್ಮಿಶ್ರ ಸರ್ಕಾರದ ಗೆಲುವು: ಸುನೀಲಗೌಡ

ವಿಜೇತ ಅಭ್ಯರ್ಥಿ ಸುನೀಲಗೌಡ ಪಾಟೀಲ ಜತೆ ಮಾಜಿ ಸಚಿವರಾದ ಎಚ್‌.ವೈ. ಮೇಟಿ, ಎಂ.ಬಿ. ಪಾಟೀಲ್‌ ಗೆಲುವಿನ ಸಂಭ್ರಮ.

ವಿಜಯಪುರ: "ರಾಜ್ಯದಲ್ಲಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ನನ್ನ ಗೆಲುವಿನ ಮೂಲಕ ಮೈತ್ರಿ ಸರ್ಕಾರದ ಜಯವಾಗಿದೆ. ಜನತೆ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುತ್ತೇನೆಂದು' ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆ ಮೇಲ್ಮನೆ ಉಪ ಚುನಾವಣೆ ವಿಜೇತ ಅಭ್ಯರ್ಥಿ ಕಾಂಗ್ರೆಸ್‌ನ ಸುನೀಲಗೌಡ ಪಾಟೀಲ ಹೇಳಿದರು. 

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಜನಪರ ಕಾರ್ಯಕ್ರಮಗಳು, ನನ್ನ ಸಹೋದರ ಎಂ.ಬಿ. ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾಗಿ ಮಾಡಿದ ನೀರಾವರಿ ಕಾರ್ಯಕ್ರಮಗಳು, ಅವಳಿ ಜಿಲ್ಲೆಯಲ್ಲಿ ನಮ್ಮ ತಂದೆ ಬಿ.ಎಂ. ಪಾಟೀಲ ಮಾಡಿರುವ ಸಾಧನೆ, ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಂಘಟಿತ ಪ್ರಯತ್ನ, ಮೈತ್ರಿ ಪಕ್ಷಗಳ ನಾಯಕರು ಬದ್ಧತೆಯಿಂದ ಒಗ್ಗೂಡಿ ಪರಿಶ್ರಮ ಪಟ್ಟ ಕಾರಣವೇ ನನ್ನ ಗೆಲುವಾಗಿದೆ ಎಂದರು. 


Trending videos

Back to Top