ಹೋಟೆಲ್‌ ದೇವಿಪ್ರಸಾದ್‌

Team Udayavani, Dec 11, 2017, 11:52 AM IST

11-21.jpg

ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ  50 ವರ್ಷಗಳ ಹಿಂದೆ ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಸಂಜೀವ ಶೆಟ್ಟರು ನಡೆಸುತ್ತಿದ್ದಾರೆ. ಇಲ್ಲಿ ಬೋರ್ಡಿಂಗ್‌ ಕೂಡ ಲಭ್ಯ.  14 ರೂಂಗಳಿವೆ. ಶುಚಿ-ರುಚಿಯಲ್ಲಿ ಈ ಹೋಟೆಲ್‌, ಎತ್ತಿದ ಕೈ. 

ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಸಿಗುವ  ಹುಣಸೂರು ನಗರದ ಹಳೇ ಸೇತುವೆ ಬಳಿ ಒಂದು ಹೋಟೆಲ್‌ ಇದೆ. ಅದರ ಹೆಸರೇ ಹೋಟೆಲ್‌  ದೇವಿ ಪ್ರಸಾದ್‌. ಇದರ ವಯಸ್ಸು 50 ವರ್ಷ ದಾಟಿದೆ.  ಈ ಮಾರ್ಗವಾಗಿ ತೆರಳುವ ಮಂಗಳೂರು-ಕೊಡಗು ಜಿಲ್ಲೆಯ ಕಾಫಿ ಪ್ಲಾಂಟರ್‌ಗಳು ಒಮ್ಮೆ ಈ ಹೋಟೆಲ್‌ ಹೊಕ್ಕು ಅಲ್ಲಿನ ತಿಂಡಿ  ಸವಿದು ನಂತರವೇ ಪ್ರಯಾಣ ಮುಂದವರಿಸುವುದು.

ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ ಕಳೆದ 50 ವರ್ಷಗಳ ಹಿಂದೆ  ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಸಂಜೀವ ಶೆಟ್ಟರು ನಡೆಸುತ್ತಿದ್ದಾರೆ.  ಇಲ್ಲಿ ಬೋರ್ಡಿಂಗ್‌ ಕೂಡ ಲಭ್ಯ.  14 ರೂಂಗಳಿವೆ. ಶುಚಿ ರುಚಿಯಲ್ಲಿ ಈ ಹೋಟೆಲ್‌,  ಎತ್ತಿದ ಕೈ. 

ಇಲ್ಲಿ ಸಿಗುವ ಇಡ್ಲಿ-ಸಾಂಬರ್‌ ತಿನ್ನಬೇಕು. ಗೊಡಂಬಿಯುಕ್ತ ತುಪ್ಪದ ಖಾರ ಪೊಂಗಲ್‌ ಬಹಳ ಫೇಮಸ್ಸು. ಇದೆಲ್ಲ ಆದ ಮೇಲೆ ಮರೆಯದೇ ತಿನ್ನಬೇಕಾದದ್ದು  ತೈರ್‌ ವಡೆ. ಇವೆಲ್ಲವೂ ಬೆಳಗಿನ ತಿಂಡಿಯ ಮನು.  ಮಧ್ಯಾಹ್ನವಾದರೆ ಹಸಿದ ಹೊಟ್ಟೆಗೆ ರುಚಿ ರುಚಿಯಾದ ಊಟವೂ ಉಂಟು. ತಿಳಿ ಸಾರು, ಅನ್ನದ ಜೊತೆಗೆ ದಕ್ಷಿಣ ಕನ್ನಡ ಶೈಲಿಯ ಊಟವೂ ದೊರೆಯತ್ತದೆ. ಚಿಕ್ಕಮಗಳೂರು ಕಾಫಿ ಬೀಜದಿಂದ ತಯಾರಿಸಿದ ಬಿಸಿಬಿಸಿ ಹಬೆಯಾಡುವ ಕಾಫಿ ಸ್ವಾದಿಷ್ಟವಾಗಿರುತ್ತದೆ. 

ಹೇಳಲೇಬೇಕಾದ ವಿಚಾರವೆಂದರೆ, ಈ ಹೋಟೆಲ್‌ ಸದಾ ಶುಚಿಯಾಗಿರುತ್ತದೆ. ಅಕಸ್ಮಾತ್‌, ಎಲ್ಲಿಯಾದರೂ ಕಸ ಇತ್ತೆಂದರೆ ಮಾಲೀಕ ಸಂಜೀವಶೆಟ್ಟರು ತಾವೇ ಕಸಪೊರಕೆ ಹಿಡಿದು ಶುಚಿಗೆ ನಿಂತು ಬಿಡುತ್ತಾರೆ. 

ಪರಿಸರ ಪ್ರೇಮ ಮೆರೆವ ಸಂಜೀವ ಶೆಟ್ಟರು  ಇಲ್ಲಿಗೆ ಬರುವ ಗ್ರಾಹಕರ ವಾಹನ ನಿಲ್ಲಿಸಲು ಹೋಟೆಲ್‌ ಮುಂಭಾಗ ಅಚ್ಚುಕಟ್ಟಾದ ಪಾರ್ಕಿಗ್‌ ವ್ಯವಸ್ಥೆ ಮಾಡಿದ್ದಾರೆ. ಅದರ ಮುಂದೆ 3 ಹೊಂಗೆ ಮರ ಬೆಳೆಸಿದ್ದಾರೆ.  ನೋಡುಗರಿಗೆ ಫಿಶ್‌ ಅಕ್ವೇರಿಯಂ ನಿರ್ಮಿಸಿದ್ದಾರೆ, ಹೋಟೆಲ್‌ ಮುಂಭಾಗದಲ್ಲಿ ಉಗುಳುವುದು, ಕಸ ಬಿಸಾಡುವುದನ್ನು ಸಂಪೂರ್ಣ ನಿಷೇದಿಸಿದ್ದಾರೆ. ಸಂಜೀವ ಶೆಟ್ಟರು ನಗುಮೊಗದಿಂದಲೇ ಎಲ್ಲರನ್ನು ಸ್ವಾಗತಿಸುತ್ತಾ, ಗ್ರಾಹಕರ ಬೇಕು ಬೇಡಗಳನ್ನು ವಿಚಾರಿಸುತ್ತಾ ಮಾಣಿ(ಸಪ್ಲೆ„ಯರ್‌)ಸ್ವತಹ ಮಾಲೀಕ, ಸ್ವಚ್ಚಗೊಳಿಸುವ ನೌಕರನೂ ಆಗಿ ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸುತ್ತಿರುವುದರಿಂದಲೇ ಐವತ್ತು ವರ್ಷದ ಇತಿಹಾಸವಿರುವ ಈ ಹೋಟೆಲ್‌ ಇಂದಿಗೂ ತನ್ನ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ.

ಸಂಪತ್‌ಕುಮಾರ್‌ ಹುಣಸೂರು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.