CONNECT WITH US  

ವಾಸ್ತು ಸಲಹೆ: ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮೀ ಓಡಾಟ ಸಲೀಸು

ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷ್ಮೀಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮೀ ಎಂಬ ಮಾತಿದೆ ನಮ್ಮಲ್ಲಿ. 

ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವಚ್ಛತೆಯಿಂದ ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ (ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನು ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ. 

ಬೇಡವಾದುದನ್ನು ಹೊರತಳ್ಳಿ
ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವಚ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮೀಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವಚ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ.

ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿ ಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ ಹರಿಯುವಂತಾದರೆ ಲಕ್ಷ್ಮೀಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ.

ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳ ಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಹಾಲಕ್ಷ್ಮೀಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮೀ)ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಫೂರ್ತಿಯಾಗಿ ತುಂಬಿಕೊಂಡಿರಲಿ.

- ಅನಂತಶಾಸ್ತ್ರಿ

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top