CONNECT WITH US  

ಮಸಾಲೆ ವಡೆ

ಏನೇನು ಬೇಕು?: ಕಡ್ಲೆಬೇಳೆ 1 ಕಪ್‌, ಉದ್ದಿನ ಬೇಳೆ 1/4 ಕಪ್‌,  ಶುಂಠಿ, ಕರಿಬೇವು, ಕೊಬ್ಬರಿ ಚೂರು (ಬೇಕಿದ್ದರೆ), ಉಪ್ಪು, ಎಣ್ಣೆ, 

ಮಾಡೋದು ಹೇಗೆ : 
1. ಕಡ್ಲೆಬೇಳೆ, ಉದ್ದಿನ ಬೇಳೆಯನ್ನು 1 ಗಂಟೆ ನೆನೆಹಾಕಿ. 
2. ಇದನ್ನ ಮಿಕ್ಸಿಯಲ್ಲಿ ಒಂದೆರಡು ಸುತ್ತು ರುಬ್ಬಿ (ನಯವಾಗಬಾರದು)
3. ಇದಕ್ಕೆ  ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಬೇಕಿದ್ದರೆ ಕೊಬ್ಬರಿ ಚೂರು, ಉಪ್ಪು ಹಾಕಿ ಕಲಸಿ. 
4. ಬಾಣಲೆ ಇಟ್ಟು ಬಿಸಿಯಾಗಲು ಬಿಡಿ.  ಇ
5.ಕಲಸಿಟ್ಟ ಹಿಟ್ಟನ್ನು ಸಣ್ಣ ಉಂಡೆ ಮಾಡಿ, ಕೈಯಲ್ಲಿ ವಡೆಯ ಶೇಪ್‌ಗೆ ತಟ್ಟಿ. 
6. ಬಿಸಿಯಾದ ಎಣ್ಣೆಗೆ ಬಿಡಿ. 
7.   ಕೆಂಪಗಾಗುವಾಗ ತೆಗೆದು ಟಿಶ್ಯೂ ಅಥವಾ ಪೇಪರ್‌ ಮೇಲೆ ಹಾಕಿ. 
ಇದಕ್ಕೆ ಈರುಳ್ಳಿ ಬೇಕಿದ್ದರೂ ಹಾಕಬಹುದು. 

Trending videos

Back to Top